ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏಕ ಚಿಂತಿಸಲಯ್ಯ ಈ ಜಗದ ಸುಖಕಾಗಿ ಸಾಕು ಇದರೊಳು ಸುಖದ ಲೇಶವನು ಕಾಣೆ ಪ ಒಂದು ಸುಖ ಬಯಸಿದೊಡೆ ಹಿಂದೆ ನೂರೆಂಟಾಗಿ ಸಂದಣಿಪ ದುಃಖಗಳು ಬಂದು ಒದಗುವವಿದಕೆ ಎಂದಿಗೂ ಬಯಸೆನಾ ಈ ತೆರೆದ ಸುಖವನ್ನು ಹಿಂದಿನಾ ಕರ್ಮದಂತಾಗುತಿರುವುದಕೆ 1 ಮೊದಲು ಸವಿಯಾಗಿಹುದು ತುದಿಯಲಿದು ವಿಷವಹುದು ಬದಲಾಗುತಿಹ ಇಂಥ ಸುಖ ಬೇಡವೆನಗೆ ಮೊದಲುಕೊನೆ ಇಲ್ಲದಿಹ ಸದಮಲಾನಂದವಹ ಪದವ ಮರೆಯಿಸುತಿರುವದಿದು ಬೇಡವೆನಗೆ 2 ಅನಿಸಿಕೆಯೆ ಕೂಡಿರುವ ಈ ಸುಖವು ನಿಜವಲ್ಲ ಮನವಾಣಿಗಳಿಗಾಚೆಗಿಹ ಸುಖವು ನಿಜವು ತಾನೆ ಸುಖರೂಪನೆಂದನಿತರೊಳು ನಿಶ್ಚಯಿಸಿ ಜ್ಞಾನಿಶಂಕರನೆ ನಾನಾದ ಮೇಲಿನ್ನು 3
--------------
ಶಂಕರಭಟ್ಟ ಅಗ್ನಿಹೋತ್ರಿ
ತಿಳಿ ತಿಳಿ ನೀ ತಿಳಿ ತಿಳಿ ನೀ ಅಳಿಯದಾಗಿಹ ಸ್ಥಿರಪದವಾ ಪ ತೋರಿ ಅಡಗುವ ಜಗಕಾಧಾರ ತೋರಿಕೆ ಅಡಗಲು ತಾನುಳಿವಾ ಪಾರಮಾರ್ಥವೆ ತಾನೆನುತಾ 1 ಅನಿಸಿಕೆಯೆಲ್ಲವು ಪುಸಿಯಿಹುದೆಂದು ಘನಾನುಭವವಾ ನೀ ಪಡೆಯುತಲಿ ಅನುದಿನ ಮನನವ ಮಾಳ್ಪುದು ನಿನ್ನೋಳು ಅನುಭವವಾ ದೃಢಪಡಿಸೈ ವಿನುತ ಶಂಕರಗುರುನುಡಿಯಾ 2
--------------
ಶಂಕರಭಟ್ಟ ಅಗ್ನಿಹೋತ್ರಿ