ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬರುವ ಸಂದಣಿ ಭಾಳೆ ಭಾಳವೆ ಅಲ್ಲಿ ರಂಭೆ ಊರ್ವಶಿಯರ ಸಮ್ಮೇಳವೆ ಪ. ವರಗಿರಿ ವಾಸನ ಕರೆಯ ಬರುವ ಸೊಬಗು ಧರೆಯ ಮ್ಯಾಲಿಲ್ಲ ಸುಂದರಿಯೆ ರುಕ್ಮಿಣಿಯೆ 1 ಪಾಂಚಾಲಿ ಮೊದಲಾದ ಕೆಂಚೆಯರ ಆಭರಣವುಮಿಂಚಿನಂತೆ ಹೊಳೆಯುತ ಸಿದ್ಧರಾಗಿಹರಮ್ಮ ಚಂಚಲೆಯರು2 ಕಾಲಿಂದಿ ಮೊದಲಾದವರು ಭಾಳ ವಸ್ತಗಳಿಟ್ಟುವೈಯಾರಿಯರು ಒಲಿಯುತ ವ್ಯಾಳಾಶಯನನ ಬಳಿಗೆ 3 ಭದ್ರೆ ಮೊದಲಾದವರು ತಿದ್ದಿ ತಳಪಿಟ್ಟು ಶುದ್ಧ ವಸ್ತಗಳಿಟ್ಟುಸಿದ್ಧರಾಗಿಹರಮ್ಮ ಅನಿರುದ್ದನ ಕರೆಯಲು4 ಮಂದಗಮನೆಯರು ಗಂಧಕಸ್ತೂರಿ ಪುಷ್ಪಅಂದಾಗಿ ಧರಿಸಿ ಆನಂದವಾಗಿಹರಮ್ಮ5 ಕಾಲಂದುಗೆಗೆಜ್ಜಿ ತೋಳಲೆ ತಾಯಿತ ಭಾರಿ ವಸ್ತಗಳಿಟ್ಟು ಲೋಲ್ಯಾಡುತಿಹರಮ್ಮ6 ಅಚ್ಚಮುತ್ತಿನ ವಸ್ತ ಸ್ವಚ್ಚತೋರುವಂತೆ ಬಿಚ್ಚಿ ಚಾದರ ಹೊತ್ತು ಮಚ್ಚನೇತ್ರಿಯರೆಲ್ಲ 7 ಅಂದುಗೆ ಅರಳೆಲೆ ಬಿಂದುಲಿ ಭಾಪುರಿ ಕಂದರಿಗೊಸ್ತಗಳಿಟ್ಟು ಆನಂದವಾಗಿಹರಮ್ಮ8 ಮುತ್ತಿನ ಝಲ್ಲೆ ವಸ್ತಗಳಿಟ್ಟು ಫುಲ್ಲನಾಭನ ಕರೆಯಲು ಎಲ್ಲರೂನಿಂತಾರೆ9 ಶ್ರೇಷ್ಠ ರಾಮೇಶನ ಅಷ್ಷೊಂದು ಕರೆಯಲು ಪಟ್ಟಾವಳಿಗಳನುಟ್ಟು ಧಿಟ್ಟೆಯರು ನಿಂತಾರೆ10
--------------
ಗಲಗಲಿಅವ್ವನವರು
ಮುಂಜಾನೆ ಎದ್ದು ಮುರಹರನ ಸ್ಮರಿಸೆಲೆ ಮನವೆ ಅಂಜುವ ಭವದುರಿತ ಹಿಂಗಿಸುವನು ಧ್ರುವ ಕ್ಲೇಶ ಪರಿಹರಿಸುವನು ಭವ ನಾರಾಯಣೆನಲು ಮೀಸಲು ಮನದಲೊಮ್ಮೊ ಮಾಧವೆಂದೆನಲು ತಾ ಭಾವಿಸುವ ಹೃದಯದೊಳು ಗೋವಿಂದನು ವಾಸನೆಯ ಪೂರಿಸುವ ವಿಷ್ಣು ಯೆಂದೆನಲು ತಾ ದೋಷ ಛೇದಿಸುವ ಮಧುಸೂದನೆನಲು ಲೇಸುಗೈಸುವ ಜನುಮ ವಾಮನೆನಲು 1 ಸಿರಿ ಸಕಲ ಪದವೀವ ಶ್ರೀಧರಂದೆನಲು ತಾ ಹರುಷಗತಿನೀವ ಹೃಷೀ ಕೇಶನೆನಲು ಪಾತಕ ದೂರ ಪದ್ಮಾನಾಭೆಂದೆನಲು ಭಂಜನ ದಾಮೋದರೆನಲು ಸುರಿಸುವ ಅಮೃತವ ಸಂಕರುಷಣೆಂದೆನಲು ಹೊರೆವ ಧರೆಯೊಳು ವಾಸುದೇವೆನಲು ಪರಿಪರಿಯ ಸಲುಹುವ ಪ್ರದ್ಯುಮ್ನನೆಂದೆನಲು ಅರಹುಗತಿನೀವ ಅನಿರುದ್ದನೆನಲು 2 ಪೂರಿಸುವ ಭಾವ ಪರುಷೋತ್ತಮೆಂದೆನಲು ತಾ ತಾರಿಸುವ ಜನುಮ ಅಧೋಕ್ಷಜೆನಲು ನರಜನ್ಮುದ್ಧರಿಸುವ ನಾರಸಿಂಹೆಂದೆನಲು ಕರುಣ ದಯ ಬೀರುವ ಅಚ್ಯುತನೆನಲು ಜರಿಸುವ ದುವ್ರ್ಯಸನ ಜನಾರ್ದನೆನಲು ಊರ್ಜಿತಾಗುವುದು ಉಪೇಂದ್ರ ಎನಲು ತರಳ ಮಹಿಪತಿ ಪ್ರಾಣದೊಡೆಯ ಶ್ರೀಹರಿಯೆನಲು ಕರುಣದಿಂದದೊಗುವ ಗುರುಕೃಷ್ಣನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು