ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅನಂತಪದ್ಮನಾಭ ಪ್ರಾರ್ಥನೆ) ಚಿಂತಿತದಾಯಿ ನಿರಂತರ ಸುಖದಾನಂತಪದ್ಮನಾಭಾ ಸಕಲಸುಜನಾಂತರ ಫಲದಾ ಪ. ಯಾಕೆಂದರೆ ಪೂರ್ಣಾ ನಂದನೀನೊಲಿಯಲು ಎಂದಿಗು ಕುಂದನು ಹೊಂದದಲಿರುವೆ ಸುಂದರ ವಿಗ್ರಹ ಸುಲಭದಿ ಸಕಲಾನಂದ ವಾರಿಧಿಯೊಳಿಳಿವೆ ಭವ ಬಂಧನ ಬಿಡಿಸುವ ದೊರೆ ನಿನ್ನರಿಯದೆ ಮಂದ ಬುದ್ಧಿಯಿಂದಿರುವುದು ಥರವೆ1 ನೀಲಾಳಕ ಪರಿಶೋಭಿತ ಮುಖಕಮಲಾಲಿಸು ಬಿನ್ನಪವÀ ಲೀಲಾಮೃತರಸ ಕುಡಿಸುತ ಕರುಣದಿ ಪಾಲಿಸು ವರಸುಖವಾ ಪದದೊಳಗಿರಿಸಿದ ದುರಿತ 2 ಹೆಂಡತಿ ಜನಿಸಿದ ಮನೆಯೊಳಗಿರುವುದೆ ಪುಂಡರೀಕನಾಥಾ ಪಂಡಿತರುಗಳಿದ ಕಂಡರೆ ನಗರೆ ಬ್ರಹ್ಮಾಂಡಕೋಟಿಭಾಸಾ ಅಂಡಲೆಯದೆ ಹೃನ್ಮಂಡಲದೊಳು ಶುಭಕುಂಡಲ ರಮೆಯೊಡಗೊಂಡು ಬೇಗದಲಿ ನಿಭ ಕುಂಡಲಿಗಿರಿಗ 3
--------------
ತುಪಾಕಿ ವೆಂಕಟರಮಣಾಚಾರ್ಯ
(ಪೆರ್ಡೂರು ಶ್ರೀ ಅನಂತಪದ್ಮನಾಭ) ಪದ್ಮನಾಭ ಚರಣವೆನ್ನ ಶಿರದೊಳಿಟ್ಟು ಪಾಲಿಸು ಮಾತ ಲಾಲಿಸು ಪ. ಆದಿಭೌತಿಕಾದಿ ನಾನಾ ಬಾಧೆಯಿಂದ ಬಳಲಿ ಬಹಳ ನೊಂದೆನು ಇಲ್ಲಿ ಬಂದೆನು ಮೂರ್ತಿ ನಿನ್ನ ಕರುಣವಾಗಲೆಂದು ಕೈಯ್ಯ ಮುಗಿದು ಬೇಡುವೆ ಮಹಿಮೆ ಪಾಡುವೆ ಕಾದರೊಳ್ಳಿತಿನ್ನು ನಿನ್ನ ಪಾದಸೇವೆ ಮಾಳ್ಪುದನ್ನು ಮಾಧವ ಮಛ್ಛಾದಿರೂಪ 1 ದುರುಳ ಭಾವವನ್ನು ಬಿಡಿಸಿ ಸಲಹಿನ್ನು ಕೊಟ್ಟು ಫಲವನ್ನ ಒರಳಿನಲ್ಲಿ ಕೊರಳ ಸಿಕ್ಕಿ ನರಳುವಂತಾಗಿರುವ ಕಷ್ಟ ಪರಿಯಾಯ ಸ್ವಾಮಿಯರಿಯೆಯ ಶರಣು ಶರಣು ಎಂದು ಮುಂದೆ ಹೊರಳಿ ಬೇಡಿಕೊಂಡು ನಿಂದೆ ಚರಣ ಪದ್ಮದಾಸರನ್ನು ಮರಿಯದೆ ಮಾನಿಸುವ ತಂದೆ 2 ರಾಜಕದಳಿಮಾಲಿಕಾ ವಿರಾಜಕಂಠ ಭಕ್ತ ಕಲ್ಪ ಭೂಜನೆ ರಾಜ ರಾಜನೆ ಮೂಜಗನ್ನಿವಾಸ ಪೂರ್ಣ ರಾಜರಂತರಾತ್ಮ ವ್ಯಸನ ರಾಜಿಯ ಕಡಿಸು ಬೋ ಜೀಯಾ ಈ ಜಗತ್ತಿನಲ್ಲಿ ನಿನ್ನ ಸೋಜಿಗವನರಿವರುಂಟೆ ತೇಜದಾಯಿ ವೆಂಕಟಾದ್ರಿ ರಾಜನೀನೆಂದರಿದೆ ನಿಂದು 3
--------------
ತುಪಾಕಿ ವೆಂಕಟರಮಣಾಚಾರ್ಯ
(ಹೆಬ್ಬುರಿ ಶ್ರೀ ಅನಂತಪದ್ಮನಾಭ) ಹೆಬ್ಬುರಿ ಪದ್ಮನಾಭಾ ನಂಬಿದೆನು ಪದಾಬ್ಜವ ಪೂರ್ವಶೋಭಾ ಕೊಬ್ಬಿದ ಶತ್ರು ಪುಂಜಗಳನ್ನು ದೂರದಿ ದಬ್ಬಿ ದಯಾರಸ ಉಬ್ಬಿಪಾಲಿಸು ದೇವಾ ಪ. ಯೋಗಿ ಹೃನ್ಮಂಡಲದಿ ನಿತ್ತಂದದಿ ಸಾಗಿ ಬಂದಿರುವಿಯಲ್ಲಿ ನಾಗಶಯನ ನಿನ್ನ ನೆಲೆಯರಿಯದ ತಪ್ಪ ನೀ ಪಾಲಿಪುದೆಂದು ಬಾಗಿ ಬೇಡುವೆ ನಿಂದು 1 ಈ ಕ್ಷಮೆ ಮೇಲಿಲ್ಲದಾ ಲೋಕೋತ್ತರ- ದಾಶ್ಚರ್ಯ ತೋರುವುದು ಪಕ್ಷಿಧ್ವಜ ನಿನ್ನ ಪಾದಪದ್ಮಗಳಲ್ಲಿ ನಕ್ಷತ್ರ ಮಾಲೆಗಳುರುಳುವದೇನಿದು 2 ಪಾಂಡವ ಸಾರಥಿಯೆ ನಿನ್ನಯ ಮೂರ್ತಿ ಕಂಡೆನು ಶ್ರೀಪತಿಯೆ ಕೌಂಡಿಣ್ಯ ಮುನಿಯನು ಕಾಪಾಡಿದಖಿಳ ಬ್ರ- ಹ್ಮಾಂಡ ನಾಯಕ ನಿನ್ನ ದಾಸ್ಯವ ದಯಮಾಡು 3 ಹೆಬ್ಬುಲಿಯಂತಿರುವ ಹೂಣ ಭೂಪ ನಬ್ಬರವಡಗಿಸುತ ಭಾರ ನಿನ್ನದಯ್ಯ ವಾರಿಧಿ ಕೃಷ್ಣ 4 ನೀನೆ ಸದ್ಗತಿಯೆಂಬರ ಕಾವುದಕನು- ಮಾನವ್ಯಾತಕೊ ಭೂವರ ದೀನ ಬಂಧು ಶೇಷಗಿರಿನಾಥ ದಯದಿಂದ ಮಾನಸ ಫಲವ ಪೂರಣಗೈಸು ಗೋವಿಂದ 5
--------------
ತುಪಾಕಿ ವೆಂಕಟರಮಣಾಚಾರ್ಯ
ಅನಂತಪದ್ಮನಾಭ | ವಿಠ್ಠಲನೆ ನೀನಿವನಅನಂತ ಜನ್ಮದ ಪಾಪ | ಕಳೆದು ಸಲಹೋ ಪ ಗುಣಗಣಾರ್ಣವ ಸ್ವಾಮಿ | ಪೂರ್ಣಕರುಣೆಯೆಂದುನಿನಗೆ ನಾ ಬಿನ್ನೈಪೆ | ಸತತ ಹರಿಯೇ ಅ.ಪ. ಹಂಚಿ ದೈತ್ಯರಿಗೇ |ಸಂಚಿತಾಗಮ ಕಳೆವ | ಸಂಚುಗಳ ನೀ ತೋರಿವಾಂಛಿತಪ್ರದನಾಗೊ | ಅಂಚೆವಹ ಪಿತನೇ 1 ಭವ ತಾರಕವು | ನಾಮಸ್ಮøತಿಯೆಂಬಮೃತಯಾಮಯಾಮಕೆ ಉಣಿಸಿ | ರಾಮನೇ ಸಲಹೋ 2 ಮೂರೆರಡು ಭೇದಗಳು ತಾರತಮ್ಯ ವನರುಹಿಸಾರತಮ ನೀನೆಂಬ | ಸುಜ್ಞಾನವೀಯೋ |ಕಾರಣಿಕ ಶ್ರೀಹರಿಯೆ | ವೈರಾಗ್ಯ ಧನದಿ ಸಂಸಾರ ನಿಸ್ಸಾರೆಂಬ | ಸನ್ಮತಿಯ ನೀಯೋ 3 ದಾಸನಿವನೆಂದೆನುತ | ನೀ ಸಲಹ ಬೇಕಿವನಈಶಾದಿ ದಿವಿಜೇಡ್ಯ | ಶೇಷಶಾಯೀಕ್ಲೇಶ ಆನಂದಗಳು | ಶ್ರೀಶ ನಿನ್ನಿಂದೆಂಬಈಸು ಸನ್ಮತಿ ಕೊಟ್ಟು | ನೀ ಸಲಹಬೇಕೊ4 ಸರ್ವವ್ಯಾಪ್ತ ಸ್ವಾಮಿ | ನಿರ್ವಿಕಾರನೆ ದೇವಸರ್ವಜ್ಞ ನೀನಿರಲು | ನಾ ಪೇಳ್ವುದೇನೋದರ್ವಿ ಜೀವನ ಕಾವ | ಸರ್ವಭಾರವು ನಿಂದುಸರ್ವ ಸುಂದರ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು