ಒಟ್ಟು 6 ಕಡೆಗಳಲ್ಲಿ , 2 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯೊ ಕರುಣ ಕೃಪಾಳ ಸದ್ಗುರು ಘನಲೋಲ ದ್ರುವ ಎನ್ನಹೊಯಿಲ ನಿಮಗೆಂತು ಮುಟ್ಟುವದಾನಂತಗುಣಮಹಿಮೆ ಚಿಣ್ಣ ಕಿಂಕರನಾದ ಅಣುಗಿಂದತ್ತಲಿ ಹೀನ ದೀನ ನಾ ಪರಮ ಖೂನತಿಳಿಯಲು ನಿಮ್ಮ ಕೃಪಾಸಿಂಧು ನಿಮ್ಮ 1 ಅನಂತಕೋಟಿ ಬ್ರಹ್ಮಾಂಡನಾಯಕನೆಂದೊದರುತಿಹಾನಂತ ವೇದ ಅನಂತಾನಂತಾನಂತ ಮಹಿಮರು ಸ್ತುತಿಸುತಿಹರು ಸರ್ವದ ಗುಹ್ಯ ಅಗಾಧ ತಿಳಿಯದು ಮಹಿಮ್ಯಂಗುಷ್ಠದ 2 ಮಾಡುವರಾನಂದ ಘೋಷ ದೋರುವ ಹರುಷ ತಾ ಶೇಷ ಸುರಮುನಿ ಜನರೆಲ್ಲ ಚರಣಕಮಲಕೆ ಹಚ್ಚಿದರು ನಿಜಧ್ಯಾಸ ಸಿರಿಲೋಲ ನೀ ಸರ್ವೇಶ 3 ಸಕಲಾಗಮ ಪೂಜಿತ ಸದ್ಗುರು ಶ್ರೀನಾಥ ಕಾಮಪೂರಿತ ಕರುಣಾನಂದಮೂರುತಿ ಯೋಗಿಜನ ವಂದಿತ ಜನರಿಗೆ ಸಾಕ್ಷಾತ 4 ಸಲಹುವದೋ ನೀ ಶ್ರೀಹರಿಯೆ ನೀ ಎನ್ನ ಧೊರೆಯೆ ಮುರ ಅರಿಯೆ ಸಕಲಪೂರ್ಣಸಿರಿಯೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಾತ ಅವಗುಣ ಧೂತ ಅವಗುಣ ಧೂತ ದೇವಾಧಿದೇವ ಶ್ರೀದೇವ ಅವಧೂತ ಧ್ರುವ ಜೀವದ ಜೀವ ದೇವರ ದೇವ ವಾಸುದೇವ 1 ಪ್ರಾಣಕ ಪ್ರಿಯ ಮುನಿಜನಾಶ್ರಯ ಙÁ್ಞನಿಗಳಿಗೆ ಸಾಹ್ಯ ಅನುಕೂಲ ನಮ್ಮಯ್ಯ 2 ಅನಾಥ ಬಂಧು ಘನಕೃಪಾಸಿಂಧು ಅನುದಿನ ದೊರೆವ ದೀನನಾಥನೆಂದೆಂದು 3 ಮನದ ಮಾಣಿಕ ಅಣುರೇಣುಕ ವ್ಯಾಪಕ ಅನಂತಕೋಟಿ ಬ್ರಹ್ಮಾಂಡ ನಾಯಕ 4 ಪರಮ ಉದಾರ ಕರುಣಾಸಾಗರ ತರಳ ಮಹಿಪತಿಸ್ವಾಮಿ ಇಹಪರ ಸಹಕಾರ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪಾಲಿಸಯ್ಯ ಪೂರ್ಣ ಲೋಲ ಲಕ್ಷುಮಿರಮಣ ಧ್ರುವ ಮುನಿವರ ಪಾಲಕ ಘನ ಸುಖದಾಯಕ ಕನಕಾಂಬರಧರ ಕಸ್ತೂರಿ ತಿಲಕ ಅನಾಥ ಬಂಧು ಅರ್ತ ರಕ್ಷಕ 1 ಸಮಸ್ತಕೆ ನೀ ದಾತ ವಿಮಳ ವಿರಾಜಿತ ಕಮಲ ಸಂಭವಸುತ ಸೋಮಜು ವರಪ್ರಿಯ ಕಾಮಪೂರಿತ 2 ಅನಂಗಜನಕ ಅಣುರೇಣುವ್ಯಾಪಕ ದೀನ ಮಹಿಪತಿಗೆ ನೀ ಬೀರೊ ಸ್ವಾನಂದಸುಖ ಅನಂತಕೋಟಿ ಬ್ರಹ್ಮಾಂಡನಾಯಕ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪ್ರಳಯಜಲದಲಿ ನೀನಾಲದೆಲೆಯ ಮ್ಯಾಲೆ ಹಲವು ಜೀವರು ನಿನ್ನ ಹೃದಯದೊಳಿರಲು ಕೆಲವುದಿನದಿ ಯೋಗನಿದ್ರೆಯೊಳಿರೆ ಒಲವಿಂದ ಸೃಜಿಸುವೆನೆಂದು ನೇಮಿಸುವೆ1 ಪ್ರಕೃತಿಯ ಮೂಲಕಾರಣವನು ಮಾಡಿ ಸಕಲತತ್ವಗಳ ಸಮ್ಮೋಹದಿ ಕೂಡಿ ವಿಕಳಿಸದಂತೆ ತನ್ಮಾತ್ರೆಯ ಕೂಡಿ ಅಖಿಳೇಶ ಮಹತತ್ವಗಳ ನಿರ್ಮಿಸಿದೆ 2 ಮಹತತ್ವದಿಂದಹಂಕಾರವ ಪುಟ್ಟಿಸಿ ಅಹಂಕಾರದಿಂದ ವೈಕಾರಿಕ ಮೊದಲಾದ ತ್ರಿವಿಧತತ್ವಗಳ ನಿರ್ಮಾಣವÀ ಮಾಡ್ದೆ ಮಹಮಹಿಮೆಯ ಮೆರೆದೆ ಜಗವರಿಯೆ 3 ಇಪ್ಪತ್ತುನಾಲ್ಕು ಅಯಿದಾರುತತ್ವಗಳಿಂದ ತÀಪ್ಪದೆ ಬೊಮ್ಮಾಂಡವ ನಿರ್ಮಿಸಿದೆ ಸರ್ಪಶಯನನಾಗಿ ನಾಭಿಕಮಲದಿಂದ ಅಪ್ಪಬ್ರಹ್ಮನ ಪ್ರಸವಿಸಿದೆ ನೀನೆಂದು 4 ಒಂದು ಮೂರುತಿಯಿಂದ ಸೃಷ್ಟಿಯ ಮಾಡಿ ಮತ್ತೊಂದು ಮೂರುತಿಯಿಂದ ಪಾಲನೆ ಮಾಡಿ ಒಂದು ಮೂರುತಿಯಿಂದ ಸಂಹರನೆ ಮಾಡಿ ಒಂದೊಂದು ಮಹಿಮೆಯು ಅನಂತಾದ್ಭುತವು 5 ಒಂದು ರೋಮಕೂಪದಲಿ ಬ್ರಹ್ಮಾಂಡ ಇಂದಿರೆ ಅನಂತಕೋಟಿ ನಾಮಗಳಲ್ಲಿ ಬಂದು ಗೋಕುಲದಲ್ಲಿ ಶಿಶುವಾಗಿ ತೋರಿದೆ ಆ- ಸುರರು 6 ಜನನಮರಣ ಭಯದಿಂದ ದೇವತೆಗಳು ಅನುದಿನ ನಿನ್ನ ಪೂಜೆಯ [ಮಾಡೇವೆನಲು] ಪುನರಾವೃತ್ತಿ ರಹಿತವಾದ ಫಲವೆತ್ತಿ ಮನುಜನಂತೆ ತೋರುವುದೇನುಚಿತವೊ 7 ಒಮ್ಮೆಕಾಣಲು ಸಿರಿರಮ್ಮೆ ಚೆಲುವನ ಒಮ್ಮನದಿಂದ ನೋಡೇನೆಂಬ ಭಯದಿಂದ ರಮ್ಮೆ ಮೊಗವ ತಗ್ಗಿಸಿ ನಾಚಿಸಿದಳೆ 8 ದÀಶದಿಕ್ಕು ನೋಡುತ್ತ ಭಯದಿಂದ ಕಮಲಜ ಶಶಿನಾಳದೊಳಗಿದ್ದ ದಾರಿಯ ಕಾಣದೆ ದಶಶತವರುಷ ನಿಮ್ಮನು ಧ್ಯಾನಿಸುತಿರೆ ವಸುಧೀಶ ನಿಮ್ಮ ನಿಜವ ತೋರಿದಿರಿ 9 ಆಲೋಚನೆಯಿಂದ ಸರ್ವ ವಿಷಯದಿಂದ ಲೀಲೆಯಿಂದ ಪಾಡಿ ಕಮಲಸಂಭವನ ವೋಳು ಮಾಡದಂತೆ ಒಳಿತಾಗಿ ತಲೆವಾಗೆ ಮೂಲ್ಲೋಕವ ಕೃಪೆಯಿಂದ ಪಾಲಿಸಿದೆ 10 ನಂದ ಯಶೋದೆ ವಸುದೇವ ದೇವಕಿಯರು ಸುಕೃತ ಫಲವಾಯಿತೆಂದು ಬಂದ ಬ್ರಾಹ್ಮಣರ ದ್ರವ್ಯದಿ ದಣಿಸಿದರು 11 ಜಾತಕರ್ಮವ ಮಾಡಿ ಮಧುವ ಬಾಯೊಳಗಿಟ್ಟು ಒತ್ತುಮೊರನ ಗೊಟ್ಟಿನಲಿ ಮಲಗಿದ್ದು ಸಾ- ಕ್ಷಾತ್ ಶ್ರೀ ನಾರಾಯಣನ ಅವತಾರವೆಂದು ಮಾತೆಯ ಮೊಲೆವಾಲನುಂಡ ಬೇಗದಲಿ 12 ವಾರುಣಿ ಶ- ಚಿ ರತಿ ಮೊದಲಾದ ಸತಿಯರು ನಾರಾಯಣ ಪರದೇವತೆಯೆಂದು ನಾರಿಯರೆಲ್ಲ ಪಾಡಿದರತಿ ಹರುಷದಲಿ 13 ನಾಮಕರಣ ದಿವಸ ಬ್ರಹ್ಮಾದಿ ಸುರರು ಈ ಮಹಾಶಿಶುವ ನೋಡೇವೆಂಬ ಭರದಿಂದ ಆ ಮಹಾಸ್ತೋಮವೆಲ್ಲ ಕೂಡಿಬರ- ಲೀ ಮಹಾಶಿಶುವ ನೋಡಿದರೆ ಅರ್ಥಿಯಲಿ 14 ವ್ಯಾಸ ಧೌಮ್ಯಾಚಾರ್ಯರೊಲಿದು ಮಂತ್ರಗಳಿಂದ ಸಾಸಿರಕೋಟ್ಯನಂತ ನಾಮಗಳುಳ್ಳ ವಾಸುದೇವ ಕೃಷ್ಣನೆಂಬ ನಾಮಗಳಿಟ್ಟು ಸೂಸಿದರಕ್ಷತೆ ಸುಮೂಹೂರ್ತದಲಿ 15 ಕ್ಷೀರಾಂಬುಧಿಯನ್ನೆ ತೊಟ್ಟಿಲು ಮಾಡಿ ಓರಂತೆ ನಾಲ್ಕುವೇದಗಳ ನೇಣನೆ ಮಾಡಿ ಧೀರಶೇಷನು ಬಂದು ಹಾಸಿಕೆ ಹಾಕಲು ನಾರಿಯರೊಡನೆ ಮಲಗಿದೆಯೊ ಹಯವದನ 16
--------------
ವಾದಿರಾಜ
ಬಲು ದೊಡ್ಡಸ್ವಾಮಿ ಮೂಲೋಕದೊಡಿಯ ನಮ್ಮ ಧ್ರುವ ಅನಂತಕೋಟಿ ಬ್ರಹ್ಮಾಂಡ ಅನುದಿನನಾಳುತ ಪ್ರಚಂಡ ತಾನೆ ಆಗ್ಯಾನೆ ಅಖಂಡ ಘನಗುರು ಮಾರ್ತಾಂಡ 1 ವಿಭೀಷಣಗೆ ಸ್ಥಿರಕೊಟ್ಟ ದುಷ್ಟರ ಜನರ ಕುಟ್ಟಿ ನಿಷ್ಠುರ ನಿಜಶ್ರೇಷ್ಠ 2 ಶಿಷ್ಟರಜನರಿಗಭಯವ ನಿಜನೋಡಿ ಮುಟ್ಟಿ ಮುದ್ರಿಸಿ ದಯಮಾಡಿ ಪೃಷ್ಠದಲಿ ನೋಡಿ 3 ಗ್ರಾಸವು ತಂದಿಪ್ಪ ಚಿತ್ಪ್ರಕಾಶದ ಸ್ವರೂಪ ಭಕ್ತರ ಪಾಲಿಪ 4 ನಾಮದೊಲವಿಲೆ ತನುನಿಜಭಾಗ್ಯ ಸ್ವಾಮಿಸೇವೆಗೆ ಮಾಡಿದ ಯೋಗ್ಯ ಪ್ರೇಮದಂತಾಭೋಗ್ಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಲುದೊಡ್ಡ ಧೊರಿ ದೊರಕಿದೆನಗೊಬ್ಬ ನೋಡಿ ಸಲಹುತಿಹ್ಯ ಸಕಲಾರ್ಥ ಸಾರಾಯ ನೀಡಿ ಧ್ರುವ ದೊರೆಗಳಾದವರಿಗೆಲ್ಲ ಈತನೆ ದೊರೆಯು ಚರಣಸೇವೆಯಲ್ಲಿಹಳು ಅಖಂಡ ಸಿರಿಯು ಸುರಮುನಿಜನರ ಪಾಲಿಸುತಿಹ್ಯ ಪರೋಪರಿಯು ಸರಿಸಿಜೋದ್ಭವನುತಗಿಲ್ಲ ಸರಿಯು 1 ಅನಂತಕೋಟಿ ಬ್ರಹ್ಮಾಂಡ ನಾಯಕನೆಂದು ಅನಂತಸಿದ್ಧಿ ವಾಲ್ಗೈಸುತಿಹವು ಅನಂತಗುಣ ಪರಿಪೂರ್ಣ ಶ್ರೀ ಹರಿಯೆಂದು ಅನಂತಶ್ರುತಿ ಸ್ಮøತಿ ಸಾರುತಿಹ್ಯವು 2 ಅನೆಮೊದಲಿರುವೆÉ ಕಡೆ ಅನುದಿನಾಹಾರವಿತ್ತು ಜನವನವಿಜನದಿ ರಕ್ಷಿಸುತಿಹನು ದೀನ ಮಹಿಪತಿಸ್ವಾಮಿ ಭಾನುಕೋಟಿತೇಜ ತಾನೆ ತಾನಾಗೆನಗೆ ಸಲಹುತಿಹ್ಯನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು