ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಧ್ಯಾತ್ಮದ ವಿದ್ಯ ಅಧ್ಯಕ್ಷಾಗಬೇಕು ಸಾಧ್ಯ ಧ್ರುವ ಕನ್ನಡಿಯೊಳಗಿನ ತಾ ಗಂಟು ಸನ್ನಿಧವಾಗುವದೆ ಕೈಗೊಟ್ಟು ಬಣ್ಣಿಸಬ್ಯಾಡಿ ನಿಜಬಿಟ್ಟು ಕಣ್ಣಾರೆ ಕೆಟ್ಟು 1 ಕನಸಿಲೆ ತಾ ಕಂಡಭಾಗ್ಯ ಅನುಭವಕೆ ಬಹುದೆ ಶ್ಲಾಘ್ಯ ನೆನಸಿಕೊಂಡವ ಅಯೋಗ್ಯಜನದೊಳು ಅಶ್ಲಾಘ್ಯ 2 ಹೊತ್ತಿಗೆಲ್ಹೇಳುವ ಪುರಾಣ ಯಾತಕೆ ಬಾಹುದು ನಿರ್ವಾಣ ಚಿತ್ತಗಾಗುದು ಸಮಾಧಾನ ಹತ್ತಿಲಿ ನಿಜಗಾಣಾ 3 ಬಾಹುದೆ ನಿರ್ವಾಹ ಹೊಗುವರೆ ಹೊಕ್ಕರೆ ಸಹಾ ಹೋಗದು ತೃಷದಾಹ 4 ಸಾಧನ ಮಾಡಿಕೊ ಸಾಧ್ಯಸದ್ಗುರು ಕೃಪೆಯಲಿ ನಿಜ ಅಭೇದ್ಯ ಸಾಧಿಸೊ ಮಹಿಪತಿ ಸಧ್ಯ ಆಧ್ಯಾತ್ಮಸುವಿದ್ಯ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇದೇವೆ ಗುರು ಘನ ಮಹಿಮೆ ಧ್ರುವ ಅಧ್ಯಾತ್ಮದಾನಂದದ ನೆಲೆನಿಭ ಮಹಾತ್ಮರು ಬಲ್ಲರು ಖೂನ ಹೊಳೆಯುತಿಹ್ಯದು ಅನುದಿನ ಚಿಂತಾಯಕ ಗುರು ಘನ ಪ್ರತಾಪವು ತುಂಬಿಹ್ಯದು ಪರಿಪೂರ್ಣ ಶುದ್ಧಾಂತ್ಮದ ಸೂತ್ರಾಂತ್ರದ ಗತಿಗಳ ಮೂಢಾತ್ಮರು ಬಲ್ಲವೇನ 1 ಮಹಿಮರು ಮನಿಮನಿಗಿಲ್ಲ ಮಹಿಮಾನಂದದನು ಸಂಧಾನ ಪರಮವಿರಕ್ತನೇ ಬಲ್ಲ ಜೀವನ್ಮುಕ್ತಾಗುವ ಗತಿ ಮಾರ್ಗವು ಎಂದಿಗೆ ದೊರೆವದಿದೆಲ್ಲ ಪೂರ್ವಕಲ್ಪನೆಯಲ್ಲ ಮಿಕ್ಕಿನಾ ನರಗುರಿಗಳಿಗಿದು ಇಲ್ಲ 2 ಹುರಳಿಲ್ಲದ ಕರ್ಮಾಚರಣೆಯೊಳು ಮರುಳಾದರು ಜನವೆಲ್ಲ ಸರ್ವರಿಗಾವುದಲ್ಲ ಪೂರ್ವಾ ಪಾರ ಮಹಾಗುರು ಯೋಗಮಾರ್ಗವು ಸ್ತುತಿಸಲೆನಗಳವಲ್ಲ ಸರ್ವಮಯವೆಲ್ಲ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಾದದ ಮನಿಯು ತಿಳಿಯದೆ ಬಾರದು ಸಾಧಿಸಿ ಸದ್ಗತಿ ಸುಖ ಭೇದಿಸಿ ತಿಳಿದರೆ ಬೋಧದಿ ಮನವು ಎದುರಿಡುವದು ಧ್ರುವ ತನುವಿನೊಳಿಹ ಪ್ರಣಮವು ಮುನಿಜನಗಳಿಗಿದೆ ಸಾಧನ ಮುಖ್ಯವು ಸ್ವಾನಂದದ ಸುಖಧನವು ಏನ ಬಲ್ಲವು ಖೂನದ ಮಾತು ಹೀನ ಮರುಳ ಜನವು ತಾನೆ ತಾನಾಗಿಹುದು ಓಮಿತ್ಯೇಕಾಕ್ಷರದ ಘನವು 1 ಬಲು ತಾಳ ಭೇರಿ ಮೃದಂಗ ಬ್ರಹ್ಮಾನಂದದ ಸುಖದೋರುವದು ಮೇದಿನಿಯೊಳು ಸತ್ಸಂಗ ಒಮ್ಮನನಾದರೆ ಸಾಧಿಸಿಬಹುದು ಸುಮ್ಮನೆ ಪ್ರಾಣಲಿಂಗ ಕೇಳುವದಂತರಂಗ 2 ಅನುದಿನ ಧಿಮ ಧಿಮಾಟ ಹಾದಿ ತೋರಿಕೊಟ್ಟಿತು ಅಧ್ಯಾತ್ಮದ ಸದ್ಗುರುವಿನ ದಯನೋಟ ಸುಪಥ ನೀಟ ಮಣಿಮುಕುಟ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀ ರಘೂತ್ತಮತೀರ್ಥರು ನೋಡಿದೆ ಗುರುಗಳ ನೋಡಿದೆ ಪ ನೋಡಿದೆನು ಗುರುಗಳ ಪಾದಾಬ್ಜವ ಪಾಡಿದೆನು ಸನ್ಮಹಿಮೆಗಳ ನಾ ಬೇಡಿದೆನು ಮನದಣಿಯೆ ವರಗಳ ಈಡು ಇಲ್ಲದೆ ಕೊಡುವ ಪ್ರಭುಗಳ ಅ.ಪ. ಪಂಚಕೃಷ್ಣಾರಣ್ಯಕ್ಷೇತ್ರ ಪಿನಾಕಿಯ ತೀರದಲ್ಲಿ ನಿಂತು ಮಿಂಚುತಿಹ ಕಾಷಾಯದಂಡ ಕಮಂಡಲವ ಧರಿಸುತ್ತ ಧರೆಯೊಳು ಪಂಚಬಾಣದ ಪಿತನ ಗುಣಗಳ ಅಂಚೆಯದಿ ಪೊಗಳುತ್ತ ಹರುಷದಿ ಸಂಚಿತಾಗಾಮಿಗಳ ಕಳೆದು ಪ್ರಪಂಚದಲಿ ಮೆರೆವಂಥ ಗುರುಗಳ 1 ಅಲವಬೋಧರ ಭಾಷ್ಯಟೀಕಾ ಭಾವವನು ಸುಜನರಿಗೆ ಬೋಧಿಸಿ ಕಲುಷಮತಗಿರಿ ಸಮುದ(ದಾ)ಯಂಗಳ ಕುಲಿಶದಂದಲಿ ಖಂಡಿಸುತಲಿ ಮೂಲರಾಮ ದಿಗ್ವಿಜಯರಾಮರ ಪಾದಕಮಲಕೆ ಭೃಂಗನೆನಿಸುತ ಶೀಲಭಕ್ತಿ ವಿರಕ್ತಿಮತಿಗಳ ಪಾಲಿಸುತ ಯತಿಮೌಳಿ ರತುನರ 2 ಕಾಮಧೇನು ಸುಕಲ್ಪತರು ಚಿಂತಾಮಣಿಯವೋಲ್ ಕಾಮಿತಾರ್ಥವ ಪ್ರೇಮದಲಿ ಬೀರುತ್ತ ಅಧ್ಯಾತ್ಮದಿ ತಾಪತ್ರಯ ಕಳೆಯುವ ಸ್ವಾಮಿ ಶ್ರೀಹರಿ ಶ್ರೀದವಿಠಲನ ದಾಸಾಗ್ರಣಿಯೆನಿಸಿ ಮರೆವರ ನೇಮದಿಂದಲಿ ಶ್ರೀ ರಘೂತ್ತಮ ಮೌನಿವರ್ಯರ ಕರುಣ ಬಯಸುತ 3
--------------
ಶ್ರೀದವಿಠಲರು