ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಲಕಾಲದಲಿ ಕೇಶವನೆನ್ನಿರೊ ಬಾಲ ಮುಕುಂದ ಮಾಧವನೆನ್ನಿರೊ ಧ್ರುವ ಉದಯಕಾಲದಲಿ ಅನಂತಮಹಿಮನೆನ್ನಿ ಮಧ್ಯಾಹ್ನದಲಿ ಪದ್ಮನಾ¨sನೆನ್ನಿ ಸಂಧ್ಯಾಸಾಯಂಕಾಲದಲಿ ಶ್ರೀಧರನೆನ್ನಿ ಸದಾ ಕಾಲದಲಿ ಶ್ರೀ ಹರಿಯೆನ್ನಿರೊ 1 ಏಳುತ ಮಚ್ಛಾವತಾರ ಅಚ್ಯುತನೆನ್ನಿ ಮಲಗುತ ಶೇಷಶಯನನೆನ್ನಿರೊ ಹೇಳುತ ವಿಷ್ಣುವರಾಹವತಾರನೆನ್ನಿ ಕೇಳುತ ಕೃಷ್ಣಾವತಾರನೆನ್ನಿ 2 ನಡೆಯುತ ಸುಗುಣ ನಿರ್ಗುಣ ಸರ್ವೋತ್ತಮನೆನ್ನಿ ನುಡಿಯುತ ನಾರಯಣನೆನ್ನಿರೊ ಮಾಡುತ ಕೃಷ್ಣನಿರ್ಮಿತ ದಾಮೋದರನೆನ್ನಿ ಕೂಡುತ ಕೂರ್ಮಾವತಾರನೆನ್ನಿ3 ಆಡುತ ಗರುಡವಾಹನ ತ್ರಿವಿಕ್ರಮನೆನ್ನಿ ಬೇಡುತ ಸ್ವಾಮಿ ವಾಮನನೆನ್ನಿರೊ ನೋಡುತ ವಾರಿಜನೇತ್ರ ಪ್ರಸಿದ್ದನೆನ್ನಿ ಪಾಡುತ ಪರಮಾತ್ಮನೆನ್ನಿರೊ 4 ಉದ್ಯೋಗದಲಿ ಸಹಕಾರನಿರುದ್ದನೆನ್ನಿ ಉದರ ಕಾಯದಲಿ ಉಪೇಂದ್ರನೆನ್ನಿ ಮೇದಿನೊಯೊಳು ಹರಿಮಧುಸೂದನನೆನ್ನಿ ಆದಿ ಅಂತಿಮ ಅಧೋಕ್ಷಜನೆನ್ನಿರೊ 5 ಹೃದಯಕಮಲದೊಳು ಹೃಷೀಕೇಶನು ಎನ್ನಿ ಶಬ್ದಜಿಹ್ವೆಲಿ ಜನಾರ್ಧನನೆನ್ನಿರೊ ಬುದ್ಧಿಯಲಿ ಸಿದ್ಧಬೌದ್ದಾವತಾರನೆನ್ನಿ ಅದಿಅನಾದಿ ಗೋವಿಂದನೆನ್ನಿ 6 ಅನುದಿನ ಮನದೊಳು ಘನಮಹಿಮನು ಎನ್ನಿ ತನುವಿನೊಳು ಪುರುಷೋತ್ತಮ ನಾನೆನ್ನಿ ಅನ್ನವುದಕ ಸೇವಿಸುವ ಹರಿಭೋಕ್ತನೆನ್ನಿ ಘನಭೂಷಣದಿ ಸಂಕರುಷಣನೆನ್ನಿ 7 ಸತಿಪತಿ ಸಂಯೋಗದಲಿ ಪ್ರದ್ಯುಮ್ನನೆನ್ನಿ ಪತಿತಪಾವನ ಪರಬ್ರಹ್ಮನೆನ್ನಿ ಭಕ್ತವತ್ಸಲ ನರಸಿಂಹಾವತಾರನೆನ್ನಿ ಮುಕ್ತಿದಾಯಕ ದೇವೋತ್ತಮನೆನ್ನಿರೊ 8 ಪಾವನಮೂರುತಿ ಪರಶುರಾಮನೆನ್ನಿ ಜೀವಸಂಜೀವ ಶ್ರೀ ರಾಮನೆನ್ನಿ ಭವಭಯನಾಶ ಕಲ್ಕ್ಯಾವತಾರನೆನ್ನಿ ಮಹಿಪತಿಗುರು ವಾಸುದೇವನೆನ್ನಿ 9
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯ ಶ್ರೀ ಹರಿ ಶೌರಿ ಜಯ ಜಯ ಮಂದರಧಾರಿ ಜಯ ಜಯ ಶ್ರೀ ಮುರವೈರಿ ಕಂಸಾರಿ ಪ ಮುತ್ತಿನ ಮಂಟಪದಿ ರತ್ನಪೀಠವನಿರಿಸಿ ಅರ್ಥಿಲಿ ಬಾ ಹಸೆಗೆನ್ನುತ ಕರೆವರು ಮುತ್ತೆ ೈದೆಯರುಗಳು 1 ಇಂದಿರೆ ರಮಣ ಬಾ ಕಂದರ್ಪ ಜನಕ ಬಾ ಸುಂದರಾಂಗನೆ ಬಾ ಹಸೆಗೆನ್ನುತ ಚಂದದಿ ಕರೆದರು 2 ಕಂಬು ಕಂದರೆಯೆ ಬಾ ಅಂಬುಜ ಮುಖಿಯೆ ಬಾ ಸಂಭ್ರಮದಲಿ ಬಾ ಹಸೆಗೆನ್ನುತ ಕರೆದರು ಅಂಬುಜ ಮುಖಿಯರು 3 ನಾರಿ ರುಕ್ಮಿಣಿ ದೇವಿ ನಾರದ ವಂದ್ಯನಿಗೆ ಚಾರು ಪರಿಮಳ ಅರಿಶಿನ ಕುಂಕುಮ ಹಾರವನರ್ಪಿಸುತ 4 ಪರಿ ಕುಸುಮಗಳ ಪದಕÀ ಪುಷ್ಪದ ಮಾಲೆ ಪರಮಾತ್ಮನ ಕೊರಳಿಗೆ ಹಾಕುತ ಅಲಂಕರಿಸಿದಳಾಗ5 ಜಯ ಜಯ ಶ್ರೀ ಕೇಶವನೆ ಜಯ ಜಯ ನಾರಾಯಣನೆ ಜಯ ಜಯ ಶ್ರೀ ಮಾಧವನೆ ಜಯ ಜಯ ಗೋವಿಂದ 6 ಜಯ ಜಯ ಶ್ರೀ ವಿಷ್ಣುಹರೆ ಜಯ ಜಯ ಶ್ರೀ ಮಧುಸೂದನನೆ ಜಯ ಜಯ ಶ್ರೀ ತ್ರಿವಿಕ್ರಮನೆ ಜಯ ಜಯ ವಾಮನನೇ 7 ಜಯ ಜಯ ಶ್ರೀ ಶ್ರೀಧರನೇ ಜಯ ಜಯ ಶ್ರೀ ಹೃಷಿಕೇಶ ಜಯ ಜಯ ಶ್ರೀ ಪದ್ಮನಾಭ ಜಯ ದಾಮೋದರನೆ 8 ಜಯ ಜಯ ಸಂಕರ್ಷಣನೆ ಜಯ ಜಯ ಶ್ರೀ ವಾಸುದೇವ ಜಯ ಜಯ ಶ್ರೀ ಪ್ರದ್ಯುಮ್ನ ಅನಿರುದ್ಧ 9 ಜಯ ಜಯ ಶ್ರೀ ಪುರುಷೋತ್ತಮನೆ ಜಯ ಜಯ ಶ್ರೀ ಅಧೋಕ್ಷಜನೆ ಜಯ ಜಯ ಶ್ರೀ ನಾರಸಿಂಹ ಜಯ ಜಯ ಅಚ್ಚುತನೆ 10 ಜಯ ಜಯ ಶ್ರೀ ಜನಾರ್ದನನೆ ಜಯ ಜಯ ಶ್ರೀ ಉಪೇಂದ್ರಹರೇ ಜಯ ಜಯ ಶ್ರೀ ಹರಿ ಶ್ರೀಶಾ ಜಯ ಜಯ ಶ್ರೀ ಕೃಷ್ಣಾ11 ಇಂತು ದೇವನ ಸ್ತುತಿಸಿ ಸಂತಸದಿ ವೀಳ್ಯವನು ಕಂತು ಪಿತನಿಗೆ ಅರ್ಪಿಸಿ ಮುದದಿ ವಂದಿಸಿ ಭಕ್ತಿಯಲಿ12 ಕಮಲಾಕ್ಷಿಯರು ಕೂಡಿ ಕನಕದಾರತಿ ಪಿಡಿದು ಕಮಲನಾಭ ವಿಠ್ಠಲ ಲಕ್ಷ್ಮೀಯರಿಗೆಬೆಳಗಿದರಾಗ 13
--------------
ನಿಡಗುರುಕಿ ಜೀವೂಬಾಯಿ
ಸ್ಮಾರ್ತರು ನಾಮವ ಧರಿಸಿ ಯಥಾರ್ಥವು ಹರಿನಾಮವ ಬಹಳ ವಿಸ್ತರಿಸಿ ಪ ಕಣ್ಣಿಗೆ ಕಾಣದೆ ಪೂರ್ಣವಾಗಿಹ ನಾಮ ಚನ್ನಕೇಶವ ರಾಯನೆಂದೆಂಬ ನಾಮ ಉನ್ನತವಾಗಿಹ ನಾರಾಯಣ ನಾಮ ಮಾಧವ ನಾಮವ 1 ಅಂತರಂಗದಿ ಗೋವಿಂದನ ನಾಮವ ಸಿರಿ ನಾಮವ ಸಂತತ ಮಧುಸೂದನನೆಂಬ ನಾಮವ ಪಂಥವಿಡಿದು ತ್ರಿವಿಕ್ರಮ ನಾಮವ 2 ಅನುದಿನ ವಾಮನ ನಾಮವ ವನಜಾಕ್ಷ ಶ್ರೀಧರ ಗುಣ ನಾಮವ ವಿನಯದಿ ಹೃಷಿಕೇಶನೆನುತಿಹ ನಾಮವ ತನುವಾದ ಪದುಮನಾಭನ ನಾಮವ 3 ಅಂದದೊಳು ಧರಿಸಿರುವ ದಾಮೋದರ ನಾಮ ಚಂದದಿ ವಾಸುದೇವನ ನಾಮವ ಕುಂದದೆ ಸಂಕರ್ಷಣನೆಂಬ ನಾಮವ ಬಂಧನ ಪರಿಹಾರ ಪ್ರದ್ಯುಮ್ನ ನಾಮವ 4 ಅರ್ಥಿಯಿಂದಲೆ ಅನಿರುದ್ಧನ ನಾಮವ ಉತ್ತಮ ಪುರುಷೋತ್ತಮ ನಾಮವ ಭಕ್ತಿಯಿಂದಲೆ ಅಧೋಕ್ಷಜನೆಂಬ ನಾಮವ ಮೃತ್ಯುವು ಕಾಣದ ನರಹರಿ ನಾಮವ 5 ಅಚ್ಯುತ ನಾಮವ ನಿಶ್ಚಯಿಸಿ ಜನಾರ್ದನ ನಾಮವ ಬಚ್ಚಿಡಬೇಡ ಉಪೇಂದ್ರನ ನಾಮವ ಸಿರಿ ನಾಮವ 6 ದುಷ್ಟನಿಗ್ರಹವಾದ ಕೃಷ್ಣನ ನಾಮವ ಬೆಟ್ಟದ ವರಾಹತಿಮ್ಮಪ್ಪನ ನಾಮವ ಅನುದಿನ ಘನ ನಾಮವ ಸೃಷ್ಟಿಯೊಳು ಉತ್ತಮ ಸ್ಮಾರ್ತನೆ ವೈಷ್ಣವ 7
--------------
ವರಹತಿಮ್ಮಪ್ಪ