ಒಟ್ಟು 8 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೆಯರಸನ ಛಂದದಿಂದ ಭಜಿಸೋ | ಮನದಲಿ ನೀ ನಿಲಿಸೊ ಪ ಕುಂದನು ಎಣಿಸದೆ ಬಂದು ಕಾಯ್ವ ನಿನ್ನಾ |ನೆಂದು ಕಂದ ಬಲು ಘನ್ನಾ ಅ.ಪ. ಪಾದದ ಮೂಲವು | ಪಾತಾಲವು ಎಂದೂ | ಉಪರಿ ರಸಾತಲವೆಂದುಪಾದದ ಪರ್ವವು | ಮಹಾ ತಲಾಖ್ಯ ಲೋಕ | ಉಪರಿ ತಲಾತಲ ಲೋಕ ||ಸಾಧಿಸು ಜಂಘೆಗಳ್ | ದ್ವಯವೆ ಸುತಲ ಲೋಕ |ಚಿಂತಿಸಿ ಕಳೆ ಶೋಕ ||ಮೋದದ ಊರು ದ್ವಯ | ವಿತಲಾತಲವೆನ್ನೂ | ಮುಂದೆ ಸಾಗುತಲಿನ್ನು 1 ಭೂರಿ ಲಲಾಟವೆ | ತಪಸಿಗಳಾಸ್ಥಾನಾ | ಶಿರ ಬ್ರಹ್ಮನ ಸ್ಥಾನ 2 ಮುನ್ನ ಸೂಕ್ಷ್ಮ ಚಿಂ | ತನೆಯೇ ಬಲು ಕಷ್ಟ | ಎಂದೆನುತ ವಿಶಿಷ್ಟಘನ್ನ ಮಹಿಮ ಹರಿ | ತಾಳಿದ ಬೃಹದ್ರೂಪ | ಅದುವೆ ವಿರಾಟ್ರೂಪಾ ||ನಿನ್ನ ಬಿಂಬ ಗುರು | ಗೋವಿಂದ ವಿಠಲನ್ನ | ಮತ್ತೆ ಸ್ಥೂಲವನ್ನಾ ನನ್ನೆಯೆಂದೈಕ್ಯವೆ | ಚಿಂತಿಸೋದು ಮುನ್ನ | ಒಲಿವನು ಗುಣ ಪೂರ್ಣ 3
--------------
ಗುರುಗೋವಿಂದವಿಠಲರು
ಕೋಲು ಕೋಲು ಕೋಲು ಕೋಲೇಕೋಲೇ ಕೋಲನ್ನ ಪ ಆಧಾರವನೆ ಮೆಟ್ಟಿ ಚಕ್ರಾರ ಭೇದಿಸಿನಾದದ ನಾದ ಸುನಾದವ ಕೇಳಿಶೋಧಿಸಿ ಸುಷುಮ್ನ ಮಾರ್ಗ ಮನೆಯ ಪೊಕ್ಕುಮೋದಿ ಬೆಳಗಿನೊಳ ಬೆಳಕು ತಾನಹುದೆ ಹಟ1 ಪ್ರಾಣಾಪಾನವು ಕೂಡಿ ಸರ್ಪವನೆಬ್ಬಿಸಿಜಾಣತನದ ನಾಗ ಸ್ವರವನೂದಿಮಾಣದೆ ಮುತ್ತುಗಳುದುರುವ ಬಯಲಲಿಕೇಣವಿಲ್ಲದೆ ಆಡಿಪುದೆ ಕುಂಡಲಿಯೋಗ 2 ಪೀಕುತ ನಾಲಗೆ ಕ್ಷೀರಾಹಾರದೊಳಿದ್ದುನೂಕುತಂಗಲದೊಳು ರಸನವನುತೇಕ ನಿಲ್ಲಿಸಿ ನಾಲಗೆಯಲಮೃತವನ್ನುಂಡುಮೂಕ ಸಕ್ಕರೆ ತಿಂದ ತೆರದಲಂಬಿಕ ಯೋಗ 3 ಷಣ್ಮುದ್ರೆ ಹಿಡಿದು ಷಡಂಗುಲದಲಿ ಒತ್ತಿಕಣ್ಣ ಅಂತರ್ಯದಿ ದೃಷ್ಟಿಯಿಟ್ಟುಹುಣ್ಣಿಮೆ ಚಂದ್ರನ ಕಳೆಯ ಬೆಳಗಿನೊಳುಥಣ್ಣಗೆ ಥಳ ಥಳಿಸುವುದದು ಹಟ ರಾಜ4 ವಾಯುವ ಸಮನಿಸಿ ರೇಚಕ ಪೂರಕದಿಂದಸಾಯಾಸದಲಿ ಕುಂಭಕವ ನಿಲ್ಲಿಸಿಬಾಯಿ ಮಾಡುವ ಸುನಾದವ ಲಕ್ಷಿಸಿಹಾಯಿ ಎಂದೆನಿಪ ಸುಖಹೊಂದೆ ಲಯಯೋಗ 5 ದೃಷ್ಟಿಯರ್ಧವನೀಗ ಮುಚ್ಚಿ ಸದ್ಗುರುವಾಗಿದೃಷ್ಟಿಸಿ ತನ್ನನೆ ನೋಡುತಿರೆಸುಟ್ಟು ಜೀವತ್ವವ ದೇಹಭಾವವ ಮರೆತುಮುಟ್ಟಿ ಬ್ರಹ್ಮಾದುದೆ ಅದುವೆ ಸದ್ಗುರು ಮಾರ್ಗ6 ಹೊರಗೊಂದು ಆಗದೆ ಒಳಗೊಂದು ಆಗದೆಹೊರಗೆ ಒಳಗೆ ತಾನೆ ತಾನೆಯಾಗಿಗುರು ಚಿದಾನಂದನು ಸಹಜ ತೋರುತ ಸರ್ವಪರಮ ಮಂಗಳ ಸಾಕ್ಷಿಯದು ರಾಜಯೋಗ7
--------------
ಚಿದಾನಂದ ಅವಧೂತರು
ತೀರ್ಥವು ಬೇಡಾ ಕ್ಷೇತ್ರವು ಬೇಡಾ ಜಪ ತಪ ಯೋಗವು ಬೇಡಾ ಪ ಪರ ಉಪಕಾರ ಶಾಸ್ತ್ರ ಪುರಾಣಗಳು ಬೇಡಾ | ಸ್ವಾಮಿ ಸದ್ಗುರು ಭವತಾರಕನ ಭಜಕರ ಪಾದವ ನೀ ಬಿಡಬೇಡಾ 1 ಸತ್ಯವು ಸಂಸಾರವು ಜಗವಿದು ಮಾಡೆಂಬರು ನೋಡೀಜನರು | ಮಿಥ್ಯವು ಸರ್ವವು ಜಗದೀಶನನು ತಿಳಿಯೆಂಬುವರಾ ಸಜ್ಜನರು || ಜಾಗ್ರದಿ ಸ್ವಪ್ನದಿ ಬಳಲುತ ನಲಿವುತ ಚರಿಸುವರಾ ಕಾರ್ಮಿಕರು | ತುರ್ಯಾವಸ್ಥೆಯೋಳ್ ಮರೆದು ತಮ್ಮನು ಇರುತಿಹರಾ ಸಾಧುವರು2 ಸಾರ ನಿವೃತ್ತಿಯ ಅರಿವುದೆ ಜೀವನ್ಮುಕ್ತಿ || ಇದರ ಹಂಚಿಕೆ ಮಾಡುತ್ತಿಹುದೇ ಅದುವೆ ಶಾಸ್ತ್ರದ ಯುಕುತೀ | ಸದಮಲ ಬೋಧಾನಂದವೆ ಬಲಿದರೆ ನಿಜವೇ ತಾ ಅವ್ಯಕ್ತಿ 3 ಅನುದಿನ ಮೂರ್ತಿ ಭವತಾರಕ ಭಜಕರ ಕೇಳೋ ನಿನ್ನ ಖೂನಾ 4 ಸಂಸಾರವ ಸದ್ಧರ್ಮದಲಿ ಸಾಧು ಸಂತರಂತೆ ನೀ ಮಾಡೊ | ಸಂಶಯವಳಿದು ಸರ್ವವು ಶಿವನೆಂದರಿದು ಅವರೊಳು ಕೂಡೊ | ಸತ್ತು ಹುಟ್ಟುವ ಕಟ್ಟಳೆಗಳನು ಕಿತ್ತಿ ಈಡ್ಯಾಡೊ | ನಿತ್ಯದಿ ಭವತಾರಕನ ಭಜಕರ ಸಂಗದಲಿ ಲೋಲ್ಯಾಡೊ 5 ಗುರು ವರನಲಿ ಸತ್ಪುರುಷರ ಬಳಿಯಲಿ ಅರಸಬಾರದು ಇಷ್ಟಾ | ಕುಲ ವಯ ಕ್ರಿಯಾ ಕರ್ಮವ ತಾಪತ್ರಯಗಳನೆಣಿಸುವ ಭ್ರಷ್ಟಾ | ಅನುಭವ ಜ್ಞಾನದಿ ಬೋಧದಿ ಲಕ್ಷ್ಯವೀಕ್ಷಿಸುವವನೆ ಶ್ರೇಷ್ಠಾ | ಇನಿತನು ಬಿಟ್ಟು ನಿಂದಿಸುವವನೆ ಭವದಲಿ ಬಡುವನು ಕಷ್ಟಾ 6 ಮೂರ್ತಿ ಭವತಾರಕ ಭಜಕರ ಸೂರ್ಯನ ಬಲ್ಲದೆ ಗೂಗಿ 7 ಭವ ದೋಷವು ಅಳಿವಹುದೇ? | ಗುರು ಭವತಾರಕ ಭಜಕರ ಬೋಧವು ಧರೆಯೊಳು ನರರಿಗೆ ಇಹುದೇ ? 8 ಮಾತು ಸತ್ಯವಾದರೆ ಆತಗೆ ಶಿವನೆನು- ತಿಹರೀ ಜಗ ಜನರೂ | ಭೂತಭವಿಷ್ಯತ್ ಹೇಳಲು ಭಕ್ತಿಯೊಳಾತಗೆ ನಡಕೊಂಬುವರೂ | ಭೂತಳದೊಳು ಭವತಾರಕ ಭಕ್ತರ ನೀತಿ ಮರೆತ ಪಾಮರರೂ | ನೂತನ ಖ್ಯಾತಿಯ ಕೊಂಡಾಡುತ ಬಹು ಪಾತಕಕೆಳಿ ಎಂಬುವರೂ 9 ಕರ ಭವ ಮೂರ್ತಿ ಭವತಾರಕ ಭಜಕರು ಇದ್ದ ಸ್ಥಿತಿಯನರಿಯರು 10 ಆಡುವರಾಟವ ಬಾಲರ ಮನೆಯಲಿ ಮಾಡುತ ಬ್ರಹ್ಮಾಂಡವನೂ |ನೋಡರು ಹಿರಿಯರು ಸಟೆಯೆಂದೇ ದಿಟ ಮಾಡುವರಿಹದಾಟವನೂ | ಪಾಡಲ್ಲೆನುತಲಿ ತಿಳಿದವರೊಳು ಬೇಡುವರಾ ನಾಕವನೂ | ರೂಢಿಯೊಳಗೆ ಭವತಾರಕ ಭಜಕರು ನೋಡರು ಪುಸಿಯೆಂದದನೂ 11 ನಿತ್ಯ ಪೂರ್ಣ ಭವತಾರಕನಂಘ್ರಿಯ ಹೊಂದದೆ ತಿಳಿಯದು ಗುಟ್ಟೂ 12 ಸಂಚಿತ ಪ್ರಾರಬ್ಧ ಕ್ರಿಯಮಾಣಾ ಜನರಿಗೆ ಬರೆದನು ಬ್ರಹ್ಮಾ | ಮುಂಚೆ ಶಿರವನು ನೀಗಿದಾ ಬರದವರಾರೊ ಆತಗೆ ತಮ್ಮಾ | ಮಿಂಚಿನಂತೆ ಜೀವನಕೆ ತಗಲುವಾ ಮಾಡುವ ಕರ್ಮಾ ಧರ್ಮಾ | ಹಂಚಿಕೆ ತಿಳಿಯದೆ ನುಡಿವರು ಮರುಳರು ವಂಚನೆ ಬಿಡು ಇದು ವರ್ಮಾ 13 ದೇವ ನೈವೇದ್ಯವು ಖೊಬ್ಬರಿ ಸಕ್ಕರಿ ಪನಿವಾರವು ನೋಡಿ | ಆವ ಕುಲದವನಾದರೂ ಏನು | ಇಲ್ಲದ ಹಂಚಿಕೆ ಮಾಡೀ ಭಾವಿಸಿ ಮೃಷ್ಟಾನ್ನವನಿಟ್ಟರೂ ಕುಲಧರ್ಮದಲ್ಲಿ ನೋಡೀ | ಕೇವಲ ಭವತಾರಕನ ಭಜಕರ ಮುಂದೆ ರಹಸ್ಯವ ಮಾಡೀ 14
--------------
ಭಾವತರಕರು
ವಿಧಿ ನಿಷೇಧವು ನಿನ್ನ ಸ್ಮರಣೆ ವಿಸ್ಮರಣೆಯ- ಲ್ಲದಲರಿಯರೇನೊಂದು ಹರಿಭಕ್ತರು ಪ ಮಿಂದದ್ದೆ ಗಂಗಾದಿ ತೀರ್ಥಗಳು ಸಾಧುಗಳು ಬಂದದ್ದೆ ಪುಣ್ಯ ಕಾಲವುಗಳು ಅವರು ನಿಂದದ್ದೆ ಗಯ ವಾರಣಾಸಿ ಕುರುಕ್ಷೇತ್ರಗಳು ಬಂದು ಪೋಗಲು ಅದುವೆ ರಾಜಬೀದಿ 1 ಕಂಡು ಕಂಡದ್ದೆಲ್ಲ ಕಮಲನಾಭನ ಮೂರ್ತಿ ಮಂಡಿಸಿದ ಶಯನ ದಂಡಪ್ರಣಾಮ ತಂಡತಂಡದ ಕ್ರಿಯೆಗಳೆಲ್ಲ ಹರಿ ಪೂಜೆಗಳು ಮಂಡೆ ಬಾಗಿಸಿ ಸಮಿಪ ಶರಣ ಜನಕೆ 2 ನಡೆವ ನಡೆಯೆಲ್ಲ ಲಕ್ಷ ಪ್ರದಕ್ಷಿಣೆ ಮತ್ತೆ ನುಡಿವ ನುಡಿಯೆಲ್ಲ ಗಾಯಿತ್ರಿ ಮಂತ್ರ ಒಡೆಯ ಶ್ರೀಕಾಂತನ್ನ ಅಡಿಗಡಿಗೆ ಸ್ಮರಿಸುತಿಹ ದೃಢ ಪ್ರಜ್ಞರೇಂಗೈಯ್ಯಲದುವೆ ಮರ್ಯಾದೆ 3
--------------
ಲಕ್ಷ್ಮೀನಾರಯಣರಾಯರು
ಸರ್ವ ಪರಬ್ರಹ್ಮ ಸರ್ವ ಪರಬ್ರಹ್ಮಸರ್ವ ಪರಬ್ರಹ್ಮ ತಾನೆ ಪರಬ್ರಹ್ಮಪಹುದುಗಲ್ಲ ಕಣುಕಲ್ಲ ಬೇಳೇ ಭಕ್ಷ್ಯವು ಅಲ್ಲಅದರೊಳಗಣ ಸಿಹಿ ಅದುವೆ ಪರಬ್ರಹ್ಮ1ತೊಳೆಯಲ್ಲ ಬೀಜಲ್ಲ ತೊಗಟಲ್ಲ ಹಣ್ಣಲ್ಲತಿಳಿಯೆ ರುಚಿಯು ಬೇರೆ ಅದುವೆ ಪರಬ್ರಹ್ಮ2ಹಾಲು ನವ ನೀತವಲ್ಲ ಮೊಸರು ಮಜ್ಜಿಗೆಯಲ್ಲಹಾಲೊಳಗಣಘೃತಅದುವೆ ಪರಬ್ರಹ್ಮ3ದೇಹವಲ್ಲ ತತ್ವವಲ್ಲ ಮನ ಬುದ್ಧೀಂದ್ರಿಯವಲ್ಲದೇಹದೊಳಗಣ ದೇಹಿ ಅದುವೆ ಪರಬ್ರಹ್ಮ4ಸರ್ವಮಾಯೆ ಮಾತುಮಿಥ್ಯಸರ್ವಬ್ರಹ್ಮವೇ ಸತ್ಯಸರ್ವ ಚಿದಾನಂದ ಸರ್ವ ಪರಬ್ರಹ್ಮ5
--------------
ಚಿದಾನಂದ ಅವಧೂತರು