ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಾಯಣ ನಾರಾಯಣ ನಾರಾಯಣನಾರಾಯಣ ಪ. ಭಕ್ತಿಬೇಕು ಪರಮ ವಿರಕ್ತಿ ಬೇಕು ಹರಿ ಸ-ರ್ವೋತ್ತಮವೆಂಬೊ ನೆನವಿರಬೇಕು1 ಅರಿಷಡ್ವರ್ಗದ ವಿಜಯ ಬೇಕು ಗುರುಕುಲತಿಲಕಗುರುಮಧ್ವಮತ ಬೇಕು ಗುರುಭಕ್ತಿ ಬೇಕು 2 ಹರಿಯ ಡಿಂಗರಿಗರ ಸಂಗ ಬೇಕು ಶಂಖಚಕ್ರ-ಧರನಾಗಿ ಇರಬೇಕು ಸ್ವರೂಪಯೋಗ್ಯತೆ ಬೇಕು 3 ವೇದದಭ್ಯಾಸವು ಬೇಕು ಅದರರ್ಥ ಹರಿಯೆಂಬಬೋಧವಿರಲುಬೇಕು ಖಳರಳಿಯಲುಬೇಕು4 ವಾದಿರಾಜನೊಡೆಯ ಹಯವದನನ್ನ ದಿವ್ಯ-ಪಾದ ನಂಬಿಯಿರಬೇಕು ವರಾದಿಗಳ ಬಯಸುವೋರು 5
--------------
ವಾದಿರಾಜ
ಶ್ರೀಲೋಲನಲ್ಲೆ ಭಾಮೆ ಅವಲೋಲನಲ್ಲೆ ಭಾಮೆ ಪ ಲೋಲನೊ ಬಾಲನೊ ಗೋಪಾಲನೊ ನಾನರಿಯೆ ಅ.ಪ. ಇಂದು ತಮನ ಕೊಂದು ವೇದವ ತಂದವನಲ್ಲೆ ಭಾಮೆ ಅವತಂದವನಲ್ಲೆ ಭಾಮೆ ತಂದವನೊ ಬಂದವನೊ ಅದರಂದವನು ನಾನರಿಯೆ 1 ಅರ್ಥಿಯಿಂದಲಿ ಗಿರಿಯ ಬೆನ್ನಿಲಿ ಪೊತ್ತವನಲ್ಲೆ ಭಾಮೆ ಅವ ಪೊತ್ತನಲ್ಲೆ ಭಾಮೆ ಪೊತ್ತವನೊ ತೆತ್ತವನೊ ಅದರರ್ಥವನು ನಾನರಿಯೆ 2 ವರಾಹ ಸ್ವಾಮಿಯಲ್ಲೆ ಭಾಮೆ ಅವ ಸ್ವಾಮಿಯಲ್ಲೆ ಭಾಮೆ ಸ್ವಾಮಿಯೊ ಪ್ರೇಮಿಯೊ ಬಹು ಕಾಮಿಯೊ ನಾನರಿಯೆ3 ತರಳ ಪ್ರಹ್ಲಾದನಿಗೊಲಿದ ನರಹರಿಯಲ್ಲೆ ಭಾಮೆ ಅವ ನರಹರಿಯಲ್ಲೆ ಭಾಮೆ ನರಹರಿಯೊ ಸಿರಿದೊರೆಯೊ ಆ ಉರವಣಿಗೆಯ ನಾನರಿಯೆ4 ನೆಲನ ಈರಡಿ ಮಾಡಿ ಅಳೆದ ಚೆಲುವನಲ್ಲೆ ಭಾಮೆ ಅವ ಚೆಲುವನಲ್ಲೆ ಭಾಮೆ ಚೆಲುವನೊ ಮಲೆವನೊ ಅಂಡಲೆವನೊ ನಾನರಿಯೆ 5 ಕೊಡಲಿ ಮಸೆದು ರಾಯರನೆಲ್ಲ ಕೆಡಹಿದನಲ್ಲೆ ಭಾಮೆ ಅವ ಕೆಡಹಿದನಲ್ಲೆ ಭಾಮೆ ಕೆಡಹಿದನೊ ಮಡುಹಿದನೊ ಆ ತೊಡರವನು ನಾನರಿಯೆ 6 ಸೀತಾ ಚೋರನ ಕೊಂದ ರಘುನಾಥನಲ್ಲೆ ಭಾಮೆ ಅವ ನಾಥನಲ್ಲೆ ಭಾಮೆ ನಾಥನೊ ಖ್ಯಾತನೊ ಆ ಮಾತನು ನಾನರಿಯೇ 7 ಮಾವನ ಕೊಲಲು ಮಧುರೆಗೆ ಪೋದ ದೇವನಲ್ಲೆ ಭಾಮೆ ಅವ ದೇವನಲ್ಲೆ ಭಾಮೆ ದೇವನೊ ಭಾವನೋ ಗೋ ಕಾವನೊ ನಾನರಿಯೆ8 ತ್ರಿಪುರಾಂಗನೆಯರ ವ್ರತವನಳಿದ ಚಪಳನಲ್ಲೆ ಭಾಮೆ ಅವ ಚಪಳನಲ್ಲೆ ಭಾಮೆ ಚಪಳನೊ ವಿಪುಳನೊ ಆ ವಿಪರೀತವ ನಾನರಿಯೆ 9 ಓಜೆಯಿಂದ ತೇಜಿಯನೇರಿದ ರಾಜನಲ್ಲೆ ಭಾಮೆ ಅವ ರಾಜನಲ್ಲೆ ಭಾಮೆ ರಾಜನೊ ಭೋಜನೊ ಆ ಸೋಜಿಗವ ನಾನರಿಯೆ 10 ಸೃಷ್ಟಿಗೆ ಕರ್ತನು ವಿಜಯವಿಠ್ಠಲನಲ್ಲೆ ಭಾಮೆ ಅವ ವಿಠ್ಠಲನಲ್ಲೆ ಭಾಮೆ ವಿಠ್ಠಲನಾದರೆ ಇಷ್ಟೊಂದ್ಯಾತಕೆ ದಟ್ಟಡಿಗಳಿಗೊಂದಿಸುವೆ 11
--------------
ವಿಜಯದಾಸ