ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದು ಮೂರುತಿಯಲ್ಲಿ ಹರಿಹರದೇವರಿಬ್ಬರು ಬಂದು ನೆಲೆಗೊಂಡುದನ ಕಂಡೆನದ್ಭುತವ ಪ. ಭಾವಜನಪಿತನೊಬ್ಬ ಅವನ ಕೊಂದವನೊಬ್ಬ ಹಾವ ತುಳಿದವನೊಬ್ಬ ಧರಿಸಿದವನೊಬ್ಬ ಗೋವ ಕಾಯಿದನೊಬ್ಬ ಅದನೇರಿದವನೊಬ್ಬ ಭಾವಿಸಲು ವಿಪರೀತಚರಿತರಂತಿರ್ದು1 ಬಾಣನ ಗೆಲಿದವನೊಬ್ಬ ಬಾಗಿಲ ಕಾಯಿದವನೊಬ್ಬ ದಾನವರ ರಿಪುವೊಬ್ಬ ವರವೀವನೊಬ್ಬ ಏನನೆಂಬೆನೊ ಜಗವ ಕಾವುತಿಹನೊಬ್ಬ ನಿ- ಧಾನಿಸಲು ಸಂಹರಿಸಿ ಕೊಲ್ಲುತಿಪ್ಪನೊಬ್ಬ 2 ಯಾಗ ಪಾಲಕನೊಬ್ಬ ಯಾಗಭಂಜನನೊಬ್ಬ ನಾಗರಕ್ಷಕನೊಬ್ಬ ನಾಗಶಿಕ್ಷಕನು [ಒಬ್ಬ] ಈಗ ನಲ್ಲಳಿಗÀರ್ಧದೇಹವನಿತ್ತ ಶಿವನಂತೆ ಭೋಗದೊಳು ಹೊಂದಿಹ ಹಯವದನ ಬಲ್ಲ 3
--------------
ವಾದಿರಾಜ
ತಿಳಿ ಆದೆ ದೇವನು ಇರುತಿಹೆ ನೀ ಪ ಅದು ಕೊನೆಯಾಚೆಗೆ ಬೇರಿಲ್ಲ ಅದು ಮನಸಿಗೆ ನಿಲುಕುವದಲ್ಲ ಅದನನು ಭವದಲಿ ತಿಳಿಯಲ್ಲ ಬಿಡು ಮನಸಿನ ಗೊಡವೆಯನೆಲ್ಲ ಇದೆ ಜ್ಞಾನಾಗ್ನಿಯು ಸುಡುತಿಹುದೋ ಒದಗಿದ ಕರ್ಮದ ಕಾಷ್ಮಗಳ 1 ಮನವಡಗಿದ ಪದ ಪರಿಚಯವ ತನಿನಿದ್ರೆಯ ಮೀರಿದ ಸ್ಥಿತಿಯ ಅನುಭವದಲಿ ತರುವುದೆ ಯೋಗ ಅದನೇ ಯತ್ನದಿ ಸಾಧಿಸು ತಾ ನನಸಿನಲೇ ಗುರು ಮುಖದಿಂದ ಕೇಳಿ ನಿವೇಕದಿ ತಿಳಿ ಬೇಗಾ 2 ಎಚ್ಚರವಿದು ತಿಳಿ ಕನಸೆಂದು ಅಚ್ಚಳಿಯದ ಸ್ಥಿತಿ ನಾನೆಂದು ನಿಚ್ಚಳದಲಿ ನಿಶ್ಚಯಿಸುವದು ತುಚ್ಛದ ತೋರಿಕೆ ಎಂದು ತಿಳಿ ಸಚ್ಚಿತ್‍ಶಂಕರ ಬೋಧವನಾ 3
--------------
ಶಂಕರಭಟ್ಟ ಅಗ್ನಿಹೋತ್ರಿ