ಒಟ್ಟು 15 ಕಡೆಗಳಲ್ಲಿ , 1 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅದಕೋ ಬ್ರಹ್ಮಾಸ್ತ್ರ ನೋಡು ನೋಡದಕೋ ಬ್ರಹ್ಮಾಸ್ತ್ರಅದಕೋ ಬ್ರಹ್ಮಾಸ್ತ್ರ ಅದ್ಭುತವಾದಸ್ತ್ರಬೆದರಿಪುದೆಲ್ಲರ ಬೇವುವು ಬ್ರಹ್ಮಾಂಡ ಪ ಮಾರಿಗೆ ಮಾರಿಯು ಮೃತ್ಯುಗೆ ಮೃತ್ಯುವುಘೋರಕೆ ಘೋರವು ಕ್ರೂರಕೆ ಕ್ರೂರ 1 ತಗ ತಗ ಚಕಚಕ ಲಕಲಕ ನಳನಳಝಗ ಝಗ ನಿಗಿ ನಿಗಿ ಕಳೆ ಕೋರೈಸುತಿದೆ2 ಛಟಛಟ ಛಿಳಿಛಿಳಿ ಧಗಧಗ ಭುಗುಭುಗುಪಟಿ ಪಟಿಸುತ ಉರಿ ಹೊಗೆಯೊಂದಾಗುತಿದೆ 3 ಹಲವು ಬ್ರಹ್ಮಾಂಡವ ಸುಟ್ಟರು ಹಸಿವಡಗದುಹಲವು ಸಾಗರ ಕುಡಿದೆ ತೃಷೆಯಡಗದು ಬಿರುಗಣ್ಣಿಂದಲಿ ಖಡ್ಗವ ಬೀರುತಗುರುಚಿದಾನಂದ ತಾನಾಗಿಹ ಬಗಳೆ 5
--------------
ಚಿದಾನಂದ ಅವಧೂತರು
ಅರಿತುಕೊಳ್ಳಿರೋ ನಿಮ್ಮ ಆತ್ಮವಸ್ತುವನುಪರಮ ಗುರು ಕರುಣದಿ ನೀವು ನಿಮ್ಮನು ಪ ಬಿದಿಗೆ ಚಂದ್ರನು ಆವುದೆಂದು ಕೇಳಲಿಕೆಅದಕೋ ಶಾಖಾಗ್ರ ಎಂದೆನಲು ಅರಿದಂತೆವಿಧಿಸಿ ಗುರುಮುಖದಿ ವಿವರಿಸಿ ಕಂಡು ಅರಿದುಸದಯಲಾನಂದ ತಾವೆಂದು ಭಾವಿಪುದು 1 ಊರು ಆವುದು ಎಂದು ಕೇಳುತಿರಲಿಕೆಊರದಕೋ ಗುಡ್ಡದ ಮೇಲೆನಲು ಅರಿದಂತೆಧೀರ ಗುರು ಮುಖದಿ ದಿಟ್ಟಿಸಿ ಕಂಡು ಅರಿತುಸಾರ ಸಂಪತ್ತು ತಾವೆಂದು ಧ್ಯಾನಿಪುದು 2 ಅರಸು ಅವನು ಎಂದು ಕೇಳುತಿರಲಿಕೆಅರಸ ಅಲ್ಲಿಹನೆಂದು ನಡೆವವನೆ ಅರಿತಂತೆಪರಮ ಗುರು ದಯದಿ ಪಾಟಿಸಿ ಕಂಡು ಅರಿದುಪರಮ ಗುರು ಚಿದಾನಂದ ತಾವೆಂದು ಭಾವಿಪುದು 3
--------------
ಚಿದಾನಂದ ಅವಧೂತರು
ತಾತ್ವಿಕ ಹಿನ್ನೆಲೆಯ ಕೀರ್ತನೆಗಳು ಅದಕೋ ವೈರಾಗ್ಯ ಅದಕೋ ವೈರಾಗ್ಯಅದಕೋ ವೈರಾಗ್ಯ ಕೇಳದಕೋ ವೈರಾಗ್ಯ ಪ ಸತಿಸುತ ಭಾಗ್ಯವ ಸರ್ವವ ತ್ಯಜಿಸಿಯೆಮತಿಬ್ರಹ್ಮವಾದುದೆ ಅದಕೋ ವೈರಾಗ್ಯ1 ಅನ್ನೋದಕ ವಸ್ತ್ರ ಅಪೇಕ್ಷೆ ಅಡಗಿಯೆಚಿನ್ಮಾತ್ರನಾದುದೆ ಅದಕೋ ವೈರಾಗ್ಯ2 ದೂಷಣಭೂಷಣವೆರಡಕ್ಕೆ ಹೊಂದದೆವಾಸನ ಕ್ಷಯವಿರೆ ಅದಕೋ ವೈರಾಗ್ಯ 3 ಇಹಪರ ಭೋಗವ ತೊರೆದಿಹ ಭಾವವೆಮಹಾಶಿವನಾದುದೆ ಅದಕೋ ವೈರಾಗ್ಯ 4 ಇರುಳು ಹಗಲು ಚಿದಾನಂದ ಸದ್ಗುರುವಾಗಿಶರೀರವ ಕಳೆದುದೆ ಅದಕೋ ವೈರಾಗ್ಯ5
--------------
ಚಿದಾನಂದ ಅವಧೂತರು
ಬ್ರಹ್ಮಾನುಭವ ಅದಕೋ ಕೈವಲ್ಯಂ ಅದಕೋ ಕೈವಲ್ಯಂಅದಕೋ ಕೈವಲ್ಯಂ ಅದಕೋ ಕೈವಲ್ಯಂ ಪ ಮಣಿ ಬಿದ್ದುಬೆಳಗೊಂದೆಯಾಗಿರುತಿಹುದೆ ಕೈವಲ್ಯಂ 1 ಜೋತಿ ಎರಡು ಇರೆ ಜೋತಿ ಒಂದರಲಿಡೆಜೋತಿಯೊಂದಾಗಿ ಬೆಳಗುತಲಿರೆ ಕೈವಲ್ಯಂ 2 ಕರ್ಪೂರ ಉರಿ ಸೋಂಕಿ ಉರಿ ಆವರಿಸಿರೆಕರ್ಪೂರ ಕಾಣ್ಬಾರದ ತೆರದಿಹುದೇ ಕೈವಲ್ಯಂ 3 ದರ್ಪಣಕೆ ಮುಖವೆರಡು ಆಗೆದರ್ಪಣವಿಲ್ಲದಿರೆ ಕಾಣದಿಹುದೇ ಕೈವಲ್ಯಂ 4 ಕೈವಲ್ಯ ಸ್ಥಿತಿ ನಿಲ್ಲಲವನೇ ಚಿದಾನಂದ5
--------------
ಚಿದಾನಂದ ಅವಧೂತರು