ಒಟ್ಟು 5 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೆ ಮನವಿತ್ತೆ ಲಲಿತಾಂಗಿ ಅಸ-ಮಾನ ಗೋವಳ ಕುಲವಿಲ್ಲದವನೊಳು ಪ ಮಗಗೆ ಮೈದುನನಾದ ಮಗಳಿಗೆ ಪತಿಯಾದ ಮಗಳಿಗಳಿಯನಾದ ಅಳಿಯಗಳಿಯನಾದ 1 ಮಗಳ ಮಗಗೆ ಮೈದುನನಾಗಿ ಮಾವನಜಗವರಿಯಲು ಕೊಂದ ಕುಲಗೇಡಿ ಗೋವಳ 2 ಅತ್ತೆಗೆ ವಲ್ಲಭನಾದ ಭೃತ್ಯರಿಗಾಳಾದಚಿತ್ತ ಒಲಿದು ಚೆನ್ನ ಆದಿಕೇಶವನೊಳು 3
--------------
ಕನಕದಾಸ
ಸುಭದ್ರೆ ಸತಿ ಸುಭದ್ರಾ ಸತಿ ನಿನ್ನ ಸಲಹಲಿ ಲಕ್ಷ್ಮೀಲೋಲಾ ಶ್ರೀ ಲಕ್ಷ್ಮೀಲೋಲಾ ಪ. ಭಾವ ಮೈದುನ ಅತ್ತೆಗೆ ಅತಿ ಹಿತಳಾಗಿ ನೀ ಭಾವ ಶುದ್ಧದಿ ಹರಿ ಗುರು ಸೇವೆಯ ಮಾಡಿ 1 ಪತಿಸೇವೆಯ ಅತಿಹಿತದಿಂ ನೀ ಮಾಡೆ ಪತಿವ್ರತೆಯಾಗಿ ನೀ ಸುತರನು ಪಡೆಯುವೆ 2 ಭಕ್ತವತ್ಸಲನ ಭಗಿನಿಯೆಂದೆನಿಸಿದಿ ಸತತ ಶ್ರೀ ಶ್ರೀನಿವಾಸನ ನೆನಯುತ ನೀ ಬಾಳೌ 3
--------------
ಸರಸ್ವತಿ ಬಾಯಿ
ವಾವಿಯೀ ಪರಮಾತ್ಮಗೊಂದೂ ಇಲ್ಲ |ಶ್ರೀ ವರನೆ ಇದು ಅಲ್ಲವೆಂಬರಿಲ್ಲ ಪಮೊಮ್ಮಕ್ಕಳನ್ನು ವಂಚಿಸಿ ತಾನೆ ಕೊಲ್ಲಿಸಿದ |ಮೊಮ್ಮಗಗೆ ತನ್ನ ತಂಗಿಯನು ಕೊಟ್ಟ ||ಮೊಮ್ಮಗನ ನಾದಿನಿಯರಲ್ಲಿ ಮಕ್ಕಳ ಪಡೆದ |ಮೊಮ್ಮಗನ ವಹಿಸಿ ಪುತ್ರನ್ನ ಅಳಿದ 1ಒಬ್ಬ ಮಾವನ ನೋಡ ನೋಡ ಪ್ರಾಣವಕೊಂಡ|ಒಬ್ಬ ಮಾವನ ಕೂಡ ಕಡಿದಾಡಿದ ||ಒಬ್ಬ ಮಾವನ ಮೇಲೆ ಬಾಣವನ್ನೇರಿಸಿದ |ಒಬ್ಬ ಮಾವನ ಮಗನಮಾನಕಳೆದ2ಒಬ್ಬ ಅತ್ತೆಗೆ ತಾನೆ ತಂದೆಯನ್ನಿಸಿಕೊಂಬ |ಒಬ್ಬ ಅತ್ತೆಗೆ ಗಂಡನಾದನಿವನು |ಒಬ್ಬ ಅತ್ತೆಗೆ ಮಾವನಾದನೀ ಕೇಶವನು |ಒಬ್ಬ ಅತ್ತೆಯ ಬಹಳ ಶ್ರಮ ಬಡಿಸಿದ 3ಒಬ್ಬ ಮಗಳನು ತನ್ನ ಹಿರಿಯ ಮಗನಿಗೆ ಕೊಟ್ಟ |ಒಬ್ಬ ಮಗಳನು ತಾನೇ ಮದುವೆಯಾದ ||ಒಬ್ಬ ಮಗಳಿಗೆ ಒಂದು ರೀತಿಯಲಿ ಮಗನಾದ |ಒಬ್ಬ ಮಗಳನು ಹಲವರಲ್ಲಿರಿಸುವ 4ಇವನ ನಿಜ ಭಕ್ತನೆಂಬವನು ತನ್ನ ಸತಿಯನು |ಸವಿಯಾಗಿ ನಾಲ್ವರಿಗೆಹಂಚಿಕೊಟ್ಟ ||ಭುವನದೊಳಗೆ ಪ್ರಾಣೇಶ ವಿಠಲನ ಮನೆ ನಡತೆಯಿದು |ಕವಿಗಳೆಲ್ಲರು ತಿಳಿದು ಪೂಜಿಸುತಿಹರು ಮುದದೀ 5
--------------
ಪ್ರಾಣೇಶದಾಸರು