ಒಟ್ಟು 5 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಳ್ಳೇದೋ ಒಳ್ಳೇದೋ ಎಲ್ಲ ಸ್ಥಳವ ಬಿಟ್ಟು | ಇಲ್ಲಿ ಅಡಗಿದ ಬಲ್ಲಿದ ತನವೇ ಪ ಬಿಡೆ ಬಿಡೆನೊ ಎನ್ನ ಒಡಿಯ ತಿರುಮಲ ನಿನ್ನ | ಉಡಿಯ ಪೀತಾಂಬರ ಪಿಡಿದು ನಿಲಿಸಿಕೊಂಬೆ 1 ಎರವು ಮಾಡಿ ತಿರುಗಿಸಿದಿ ನೀ ಎನ್ನ ಕೊರಳಿಗೆ ನಿನ್ನ ಚರಣ ಕಟ್ಟಿಕೊಂಬೆ 2 ಅತ್ತ ಇತ್ತಲಿ ನೋಡಿನೆತ್ತ ಪೋಗಲಿ ಎನ್ನ | ಚಿತ್ತದಲಿ ನಿನ್ನ ಹತ್ತೆಗಟ್ಟಿಕೊಂಬೆ 3 ಅತ್ತಿಯ ಮಕ್ಕಳಿಗೆ ತೆತ್ತಿಗ ನೀನಾಗಿ | ವಿತ್ತವಿತ್ತದರಾದ ರಾಸಿ ಸಿರಿಯಲ್ಲಿ 4 ಇರಳು ಹಗಲು ಬಿಡದೆ ಗುರು ಪುರಂದರಗೊಲಿದೆ | ಬಿರಿದು ಏನೊ ಇಷ್ಟು ವಿಜಯವಿಠಲಾ5
--------------
ವಿಜಯದಾಸ
ಕೂಗಿದರು ಒಳಗೇ ಕದವ ತೆಗೆಯಂದು ಪ ಸತಿಯರು ತಾವು ಆಗ ಆನು- ನಿನ್ನ ನಾವು ಬಲ್ಲೆವು 1 ಮೆಲ್ಲನÉ ಬಾರೆ ನೀ ನಿಜವ ಮಾಡೀಗ 2 ಮನೆಯೊಳಿರಲು ' ಮಾರಜನಕನೆಂಬೊದು ಬಲ್ಲೆನೆ 3 ಇನ್ನು ನೀರೆ ನಿನ್ನ ಗಂಡನೆ ನಾನು ಓಯನ್ನ ಪ್ರಾಣಸಖಿ ಬೇಗ ಬಂದು ಕದವ ತೆಗೆ ಈಗ 4 ಎಲ್ಲಿಯವನು ಭಂಡತನ ಬಿಡುಇನ್ನು 'ಓಹೆನ್ನೆ ವಿಠಲ’ ಮಾಡುವದು ಇದು ರೀತಿಯಲ್ಲವು 5 ಚಂಡಿನಾಟ ಬಾ ಸಭಯದಿ ಓಯನ್ನ ಪ್ರಾಣಸಖಿ ಚಲುವೆ ಹೊರಗೆ ಬಾರದಿರುವೇ 6 ಅಷ್ಟು ಜಗದಲ್ಲಿ ಬಲ್ಲಿ 'ಓಹೆನ್ನೆ ವಿಠಲ’ ಚೇಷ್ಟಿಮಾಡದಲೆ ನಡಿಯಯ್ಯಾ 7 ದೇವರನ್ನು ಕೂಡಿತೆ ಓಯನ್ನ ಪ್ರಾಣಸಖಿ ಈಗ ಆಣಿ ಮಾಡಿಸಿ ಕೇಳು 8 ಅತ್ತಿಯನ್ನು ಕೂಡಿದವನೆ ಉತ್ತಮನೆ ನೀನು ಇನ್ನು ಎತ್ತಲ ಆಣೆಯು ನಿನಗೇ 'ಓ ಹೆನ್ನೆ ವಿಠಲ’ ಸತ್ಯವಂತನಾಗಿ ಹೇಳುವಿ 9 ಕಾಕು ಹೆಣ್ಣು ನಿನಗೆ ಥರವೆ ಓಯನ್ನ ಪ್ರಾಣಸಖಿ ಕಣ್ಣಿಲೆ ನೋಡದೆ ಕರಿಯೆ 10 ಪರಮ ಪರುಷನುಳ್ಳವರು ಪರಮಪುರುಷನ ಪಡೆವಂಥ ದೂರನಡಿಯೆ ಇಲ್ಲಿ ಎನಯ್ಯ 11 ಇನ್ನು ಸ್ವಲ್ಪ ನಿನಗೆ ತಿಳಿಯದೆ ಓಯನ್ನ ಪ್ರಾಣಸಖಿ ಸಾಗಿ ಬಂದು ನೋಡೆ ಬೇಗನೆ 12 ಏನು ಆಶ್ವರ್ಯವು ನಿನಗೆ ನಡಿಯಯ್ಯಾ 13 ಇನ್ನು ನಿನಗೆ ಇನ್ನಾದರೆ ಮನಸಿಗೆ ತಾರ 14 ನಿನಗೆ ಅರುವು ಇರಲು ಸೋಗು ಮಾಡಿನಡಿಯಯ್ಯಾ 15 ತಿಳಿಸುವೆನು ಮನಸು ಇಟ್ಟು ಮನ್ನಿಸೆನ್ನನು ಓಯನ್ನ ಪ್ರಾಣಸಖಿ ಮಾಡಬೇಡ ಹೀಗೆಯನ್ನನು 16 ಮರ್ಮವು ತಿಳಿಯದೆ 'ಒಹೆನ್ನೆವಿಠಲ’ ಮೋಸಮಾಡ ಬಂದಿ ನಡಿಯಯ್ಯಾ 17 ಹೇಳಿ ಎಲ್ಲರು ಹಿಗ್ಗುವ ವೇಳ್ಯೆದಿ 'ಓ ಯನ್ನ ಪ್ರಾಣಸಖಿಕೇಳಿದ ಮಾತನು ಹೇಳುವೆ 18 ಬಂದು ವಾಸವಾಗಿ ಹೇಸದೆ ಏನೆಂದು ಬಂದೆ 19 ಮಾನ ಪತಿಯೆಂಬ ಮಾರ್ಯದೆ ಓಯನ್ನ ಪ್ರಾಣಸಖಿ ಮನಸಿನಲ್ಲಿ ಏನು ಇಲ್ಲವು 20 ಮುನಿವಳಗೇ ಮಾನಪತಿ ಪುರುಷನೇನಯ್ಯಾ 21 ಮಾಡಿಕೊಳ್ಳದವನಿಗೆ ಧೈರ್ಯ ವಿಲ್ಲವೆ 22 ಅಂಜಿಕೆ ಏನಯ್ಯಾ 'ಓಹೆನ್ನೆ ವಿಠಲ’ ಧೈರ್ಯವು ಯಾಕೆ ನಿನಗಯ್ಯ 23 ಬಂದು ಇಷ್ಟು ತಡ ನಿನ್ನ ಗಂಡನೆನಾನು24
--------------
ಹೆನ್ನೆರಂಗದಾಸರು
ಕೇಳಮ್ಮ ತಂಗಿ ಕೇಳಮ್ಮ ಪ ಕೇಳಿ ಪುರಾಣದಿ ಪೇಳಿದ ಕೃಷ್ಣನ ಲೀಲೆಯ ಪಾಡುತ ``ಬಾಳಮ್ಮ'' ಅ.ಪ ನಿಷ್ಟೆಯಿಂದಲಿ ಬಲು ಶಿಷ್ಟಳಾಗುತ ದುಷ್ಟರಿಂದ ದೂ``ರಾಗಮ್ಮ'' 1 ಹರಿದಾಸರಪದ ಹರುಷದಿ ಹಾಡುತ ಗುರು ಹಿರಿಯರ ಮನ ``ಕೊಪ್ಪಮ್ಮ'' 2 ಕಾಲ ಕಳೆಯದೆ ಶೀಲಮತಿ ನೀ “ನಾಗಮ್ಮ'' 3 ವಿದ್ಯೆಯ ಕಲಿತು ಬದ್ಧಿವಂತ | ಳಾ | ಗಿದ್ದರೆ ಸುಖ ಶತ “ಸಿದ್ಧಮ್ಮ'' 4 ವಂದಿಸಿ ತುಲಸಿ ವೃಂದಾವನ ಪೂಜಿಸು ಮುಂದೆ ನಿನಗೆ ``ಆನಂದಮ್ಮ'' 5 ಹೀನರ ಬೆರೆಯದೆ ಮೌನವ್ರತದಲಿ | ಜ್ಞಾನಿ ಜನರ ನೀ ``ನರಸಮ್ಮ'' 6 ಮೂಢ ಜನರ ಒಡನಾಡದೆ ಭಕ್ತಿಲಿ ಮಾಡುವ ಸಜ್ಜನರ ``ಸಂಗಮ್ಮ'' 7 ಧರ್ಮದಿಂದ ಸತ್ಕರ್ಮ ಮಾಡುತ ನಿರ್ಮಲಗೊಳಿಸಿ ಸಂತ ``ರಂಗಮ್ಮ'' 8 ಪವನ ಪಿತನ ಕಥಾಶ್ರವಣವೆ ಪುಣ್ಯವು ಭವ ವಿದು ಕತ್ತಲು ``ಕಾಳಮ್ಮಾ'' 9 ಸದನಕೆ ಬಂದಿಹ ಬುಧರಾವರಿಸಲು ಮಂದಬಲು ನಿನಗದ ``ರಿಂದಮ್ಮ'' 10 ಎಂದೆಂದಿಗು ಪರನಿಂದೆಯ ಮಾಡದೆ ಮಂದಿರದಿರುವದೆ ``ಚಂದಮ್ಮ'' 11 ಸಾರಿದ ಜನರಘದೂರಗೈದು ಹರಿ ತೋರುವ ನುಜಗುರು ``ಈರಮ್ಮ'' 12 ಅತ್ತಿಯ ಮನಿಗೆ ಹೆತ್ತವರಿಗೆ ಉತ್ತಮ ಕೀರ್ತಿ ``ತಾರಮ್ಮ'' 13 ಗೋವಿಪ್ರಾಳಿ ಸೇವಿಸುತಿರುವದೆ ಕೋವಿದರಿಗೆ ಬಲು ``ಜೀವಮ್ಮ'' 14 ಭಾವದೊಳಗೆ ಪರದೇವನೆ ಪತಿಯೆಂದು ಪಡಿ ``ಭೋಗಮ್ಮ'' 15 ಭೇದಜ್ಞಾನ ಸಂಪಾದಿಸು ಕ್ಷಮಿಸುವ ಶ್ರೀಧರ ನಿನ್ನಾಪ ``ರಾಧಮ್ಮ'' 16 ಕೋಪದಿ ಪರರಿಗೆ ತಾಪವ ಬಡಿಸಲು ಲೇಪವಾಗುವದು ``ಪಾಪಮ್ಮ'' 17 ಇಂಗಡಲಾತ್ಮಜನಂಘ್ರಿ ಸರೋಜಕೆ ಸತಿ ``ತುಂಗಮ್ಮ'' 18 ದಾಸಜನರ ಸಹವಾಸದೊಳಿರುವದೆ ಕಾಶಿಗಿಂತ ವಿ``ಶೇಷಮ್ಮ'' 19 ಕಲಿಯುಗದಲಿ ಸಿರಿನಿಲಯನ ನೆನೆದರೆ ಸುಲಭ ಮುಕ್ತಿ ತಿಳಿ ``ಕಂದಮ್ಮ'' 20 ಪತಿಯು ಸದ್ಗತಿಗೆ ಗತಿ ಎಂದರಿತಹ ಮತಿಯುತ ಸತಿಯೆ ``ಯವನಮ್ಮ'' 21 ಮಧ್ವಸಿದ್ಧಾಂತದ ಪದ್ಧತಿ ತಪ್ಪದೆ ಇದ್ದರೆ ಹರಿಗತಿ ``ಮುದ್ದಮ್ಮ'' 22 ಸೋಗಿಗೆ ನೀ ಮರುಳಾಗಿ ನಡೆದರೆ ಯೋಗಿ ಜನರ ಮನ ``ಕಲ್ಲಮ್ಮ'' 23 ಶೀಲೆ ಗುಣದಿ ಪಾಂಚಾಲೆಯು ಎಲ್ಲ ಬಾಲೆಯರೊಳು ``ಮೇಲಮ್ಮ'' 24 ನೇಮದಿ ನಡೆದರೆ ಪ್ರೇಮದಿ ಸಲಹುವ ಶಾಮಸುಂದರನು ``ಸತ್ಯಮ್ಮ'' 25
--------------
ಶಾಮಸುಂದರ ವಿಠಲ
ಹರಿ ನಿನ್ನ ರೋಮ ಕೂಪದಲಿ ಜೀವಿಪಸರಸಿಜ ಭವಾಂಡ ಕೋಟಿಯಲಿ ಪ ತುರುಗಿಪ್ಪ ಬ್ರಹ್ಮರುದ್ರಾದಿ ಜೀವರುಗಳುಹರಿ ನಿನ್ನ ಮಹಿಮೆಯ ಪೇರ್ಮೆಯ ಬಲ್ಲರೆ ಅ.ಪ. ಅತ್ತಿಯ ಮರದಿಂದುದುರುವ ಫಲಂಗಳಮೊತ್ತದಲಿರುತಿಪ್ಪ ಮಶಕಂಗಳುಕತ್ತೆಯ ಬಳಗಗಳೆಲ್ಲವು ಕೂಡಿಕೊಂಡುಅತ್ತಿಯ ತರುವಿನಾದ್ಯಂತವ ಬಲ್ಲವÉ 1 ಐವತ್ತು ಕೋಟಿ ಯೋಜನ ವಿಸ್ತರವಾದಭೂವಲಯದ ತಮ್ಮ ಗೂಡಿನಲಿಆವಾಸವಾಗಿಪ್ಪ ಕ್ಷುದ್ರ ಪಿಪೀಲಿಕಜೀವರು ಧರಣಿಯ ಮೇರೆಯ ಬಲ್ಲರೆ 2 ನೊರಜು ಮೊದಲಾಗಿ ಗರುಡ ಪರಿಯಂತಪರಿಪರಿ ಜಾತಿಯ ಪಕ್ಷಿಗಳು ತೆರದಲಿ ಹಾರುವರಲ್ಲದೆ ಗಗನದ ಪರಿಣಾಮವೆಂತೆಂದು ಬಲ್ಲವೆ ಶ್ರೀ ಕೃಷ್ಣ3
--------------
ವ್ಯಾಸರಾಯರು