ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಜ ಬಿಂಬಾನನೆ ಕಂಜ ಸತ್ಕೂಲಪರ ಕಂಜ ಸಾಸಿರ ಶಿರನಾ | ತಂದು ತೋರೇ ಪ ಕೂಡಾ ನಿತ್ಯದಿ ಕ್ರೀಡಿಪನಾ | ನೆತ್ತಿಯೊಳನುಹಾನೆ ಇಪ್ಪಳ ಸಂಗಡ ಅತ್ತಿತ್ತಗಲ ದವನಾ | ಚಿತ್ತೆದೊಲ್ಲಭ ನೈಯನಾ | ಬಂದ ಸತ್ಯ ಶಾಶ್ವತನ ತೋರೆ 1 ಚಿನಿಗಡಿದ ಕುವರನಾ | ಹಿರಿಯಳಿಯನಾ ತಂದೆಯಾ ಪಿತನಾ | ವನವ ಶರಭಿ ಧಾನ | ಶ್ರೀ ವನಜನಾಭನಾ ತಂದು ತೋರೆ 2 ಸರಸಿಜ ಸಖ ಸುತನಾ | ಅಸುರನ ಮಾತೆಯರಸನಾ | ಕರದಿಂದ ಸಂದಿದ್ದ ದೇಹಿಯ ಕೊಳೆ ಭಕ್ತರ ದುರಿತರ್ಹಿಸಿದನಾ | ಗುರುವರ ಮಹಿಪತಿ ಸುತನ ಅಭಯವಿತ್ತು ಪೊರೆವನ ತಂದು ತೋರೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮರುಳು ಮಾಡಿದನಲ್ಲೇ ಏಣಾಕ್ಷಿ ಪ ಘವ ಘವಿಸುವಾಯವಿಯಾ ನೋಟದಿ ನೋಡಿ|| ಸವಿಸವಿಯಾದಾ ಮಾತನಾಡೀ 1 ಚಿತ್ತರ ಮಿಸುವಂತೆ ರೂಪವ ದೋರಿ| ಅತ್ತಿತ್ತಗಲದ್ಹಾಂಗ ನಿಜ ಬೀರಿ 2 ಗುರುವರ ಮಹಿಪತಿ ನಂದ ನೊಡೆಯನಾ| ಅರಫಳಿಗಿರಲಾರೆ ಅಗಲಿನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಾಗ್ಯದ ಲಕ್ಷ್ಮೀ ಬಾರಮ್ಮಾ - ನಮ್ಮಮ್ಮಾ ನೀ ಸೌ-ಭಾಗ್ಯದ ಲಕ್ಷ್ಮೀ ಬಾರಮ್ಮಾ ಪಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ |ಗೆಜ್ಜೆಯ ಕಾಲಿನ ಧ್ವನಿಯ ಮಾಡುತ ||ಸಜ್ಜನ ಸಾಧು ಪೂಜೆಯ ವೇಳೆಗೆ |ಮಜ್ಜಿಗೆಯೊಳಗಿನ ಬೆಣ್ಣೆಯಂತೆ 1ಕನಕವೃಷ್ಟಿಯ ಕರೆಯುತ ಬಾರೆ |ಮನಕೆ ಮತಿಯ ಸಿದ್ದಿಯ ತೋರೆ ||ದಿನಕರಕೋಟಿ ತೇಜದಿ ಹೊಳೆಯುತ |ಜನಕರಾಜನ ಕುಮಾರಿ ಸೀತೆ 2ಸಂಖ್ಯೆಯಿಲ್ಲದಾ ಭಾಗ್ಯವ ಕೊಟ್ಟು |ಕಂಕಣ ಕೈಯಾ ತಿರುವುತ ಬಾರೆ ||ಕುಂಕುಮಾಂಕಿತೇ ಪಂಕಜಲೋಚನೆ |ವೆಂಕಟರಾಯನ ಮೋಹದ ರಾಣಿ 3ಅತ್ತಿತ್ತಗಲದೆ ಭಕ್ತರ ಮನೆಯಲಿ |ನಿತ್ಯಮಂಗಲವುನಿತ್ಯಮಹೋತ್ಸವ ||ಸತ್ಯವ ತೋರುವ ಸಜ್ಜನರಿಗೆ ನೀ |ಚಿತ್ತದಿ ಹೊಳೆಯುವ ಪುತ್ಥಳಿಗೊಂಬೆ 4ಸಕ್ಕರೆ ತುಪ್ಪದ ಕಾಲವೆ ಹರಿಸಿ |ಶುಕ್ರವಾರದ ಪೂಜೆಯ ಕೊಂಬೆ ||ಆಕ್ಕರವುಳ್ಳ ಅಳಗಿರಿ ರಂಗನಶಕ್ತಪುರಂದರವಿಠಲನ ರಾಣಿ5
--------------
ಪುರಂದರದಾಸರು