ಒಟ್ಟು 5 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆನೆಸಿ ನೆನೆಸಿ ನಗುವರಮ್ಮಯ್ಯಮನಸಿಜನಯ್ಯನ ಮಿತ್ರಿ ಧೇನಿಸಿಧೇನಿಸಿ ಹೇಳಿ ಬರೆಸಿದ ಚಿತ್ತಾರವ ಕಂಡು ನೆನೆಸಿ ನೆನೆಸಿ ನಗುವರಮ್ಮ ಪ. ಅತ್ತಿಗೆಯರು ಕುಳಿತಲ್ಲೆ ಅರ್ಥಿಯ ನೋಡುವ ಬರೆಬತ್ತಲೆ ಗೊಂಬೆ ಬಗೆ ಬಗೆ ಬತ್ತಲೆ ಗೊಂಬೆ ಬಗೆ ಬಗೆ ಕುಶಲರ್ಥಚಿತ್ತಾರವ ಯಾರು ಬರೆಸಿಹರು 1 ಜಾತಿ ಹಂಸ ಪಕ್ಷಿಗಳು ಮಾತಿನ ಗಿಳಿವಿಂಡುನೂತನ ನವಿಲು ಬರೆಸಿಲ್ಲನೂತನ ನವಿಲು ಪಕ್ಷಿ ಬರೆಸಿಲ್ಲಹನುಮನೆಂಬೊ ಕೋತಿ ಯಾಕೆ ಬರೆಸಿಹರು2 ಭೇರುಂಡ ಮೃಗವ ತಿದ್ದಿ ತಾನುಬರೆಸಿಲ್ಲ ಬಿದ್ದು ಜನರೆಲ್ಲ ನಗುವಂತೆ ಬಿದ್ದು ಜನರೆಲ್ಲ ನಗುವಂತೆ ತಾನುಮುದಿಹದ್ದ ಯಾಕೆ ಬರೆಸಿಹರು 3 ಎಂಟು ದಿಕ್ಕಿಗೊಪ್ಪೊ ಬಂಟರ ಬರೆಸಿಲ್ಲಕುಂಟ ಸಾರಥಿಯ ವಶವಾಗಿ ಕುಂಟ ಸಾರಥಿಯ ವಶವಾಗಿ ತಿರುಗಾಡುವ ಸೊಟ್ಟ ಸೂರ್ಯನ ಚಿತ್ತಾರ ಬರೆಸಿಹರು 4 ಸುಂದರ ಸುಂದರ ವೃಂದಾರಕರನೆಲ್ಲ ಬಿಟ್ಟುಬಂದ ಜನರೆಲ್ಲ ನಗುವಂತೆ ಬಂದ ಜನರೆಲ್ಲ ನಗುವಂತೆ ಕಳೆಗುಂದಿದಚಂದ್ರನ ಚಿತ್ತಾರ ಬರೆಸಿಹರು 5 ರೂಢಿಗೊಡೆಯನ ಮನೆಯ ಗೋಡೆ ಮ್ಯಾಲಿನ ಗೊಂಬೆ ನೋಡಿದವರೆಲ್ಲ ನಗುವಂತೆನೋಡಿದವರೆಲ್ಲ ನಗುವಂತೆ ತಾತನ ಕೋಡು ಇಲ್ಯಾಕೆ ಬರೆಸಿಹರು 6 ಚೆನ್ನ ರಾಮೇಶನ ಹೊನ್ನ ಗೋಡೆಯ ಮ್ಯಾಲೆ ಮುನ್ನೆ ಜನರೆಲ್ಲ ನಗುವಂತೆ ಮುನ್ನೆ ಜನರೆಲ್ಲ ನಗುವಂತೆ ರುಗ್ಮನ ಪನ್ನಿ ವಿಸ್ತಾರ ಬರೆಸಿಹರು ಚಿತ್ತಾರ 7
--------------
ಗಲಗಲಿಅವ್ವನವರು
ಬಂದಾರೆ ಅತ್ತಿಗೆಯರು ಚಂದನೋಡಿರೆಚಂದ ನೋಡಿರೆ ಇಂದಿರೇಶನ ಮುದ್ದುತಂಗಿಯರು ಕರೆಯಲು ಬಂದಾರೆ ಪ. ಸಾಲು ದೀವಿಗೆಯಂತೆ ಬಾಲೆಯರು ನಿಂತಾರೆ ಮ್ಯಾಲೆ ಸುಭದ್ರೆ ದ್ರೌಪತಿಯೆ ಇಂದೀವರಾಕ್ಷಿಮ್ಯಾಲೆ ಸುಭದ್ರೆ ದ್ರೌಪತಿ ನುಡಿದಳು ಮೇಲೆಂದು ನಿಮ್ಮ ದೊರೆತನ ಇಂದೀವರಾಕ್ಷಿ 1 ಕೃಷ್ಣನ ಮಡದಿಯರು ಎಷ್ಟು ದಯವಂತರು ಅಷ್ಟೂರಲ್ಲಿದ್ದ ಗರುವನೆಅಷ್ಟ್ಟೂರಲ್ಲಿದ್ದ ಗರುವನೆ ತುರುಬಿಗೆ ಮಲ್ಲಿಗೆ ಮಾಡಿ ಮುಡಿದಾರೆ2 ಫುಲ್ಲನಯನರ ದೈವ ಎಲ್ಲಿವರ್ಣಿಸಬೇಕುಎಲ್ಲರಲ್ಲಿದ್ದ ಗರುವನೆ ಎಲ್ಲರಲ್ಲಿದ್ದ ಗರುವನೆ ತಮ್ಮಲ್ಲಿಟ್ಟುಕೊಂಡಾರೆವಿನಯದಿ ಸಖಿಯೆ ಇಂದೀವರಾಕ್ಷಿ 3 ಹಿರಿಯ ಅತ್ತಿಗೆ ತಾನು ಗರುವಿನ ಸೀರೆಯನುಟ್ಟುಬರಿಯ ಬಿಂಕದ ಕುಪ್ಪುಸವ ತೊಟ್ಟುಬರಿಯ ಬಿಂಕದ ಕುಪ್ಪುಸವ ತೊಟ್ಟುಕರೆಯಲಿ ನಮ್ಮ ಇದುರಿಗೆ ಇಂದೀವರಾಕ್ಷಿ4 ಮಡದಿ ಸತ್ಯಭಾಮೆ ಬಡಿವಾರದ ಸೀರೆಯನುಟ್ಟುಕಡುಕೋಪವೆಂಬೊ ಕುಪ್ಪುಸವಕಡುಕೋಪವೆಂಬೊ ಕುಪ್ಪುಸವ ತೊಟ್ಟುಒಡಗೂಡಿ ನಮ್ಮ ಕರೆಯಲು ಇಂದೀವರಾಕ್ಷಿ5 ಅಷ್ಟು ಮಡದಿಯರು ಅತಿ ಸಿಟ್ಟಿನ ಸೀರೆಯನುಟ್ಟುಅಷ್ಟ ಮದವೆಂಬೊ ಕುಪ್ಪುಸವಅಷ್ಟ ಮದವೆಂಬೊ ಕುಪ್ಪುಸವ ತೊಟ್ಟುಧಿಟ್ಟಯರು ನಮ್ಮ ಕರೆಯಲು ಇಂದೀವರಾಕ್ಷಿ6 ಭಾಪುರಿ ಅತ್ತಿಗೆಯರು ಕೋಪದೊಸ್ತಗಳಿಟ್ಟುಭೂಪರಾಮೇಶನ ಮಡದಿಯರುಭೂಪರಾಮೇಶನ ಮಡದಿಯರು ಬಂದರೆದ್ರೌಪತಿ ದೇವಿಯ ಕರೆಯಲು ಇಂದೀವರಾಕ್ಷಿ 7
--------------
ಗಲಗಲಿಅವ್ವನವರು
ಏನಾದರೂ ಒಂದಾಗಲಿ - ನಮ್ಮ -ಮನೆತುಂಬ ದೇವರು ಮರತುಂಡು ಕಲ್ಲು ಪಅತ್ತೆಯ ಕಣ್ಣೊಂದು ಹರಿಯಲಿ |ಮತ್ತೆ ಮಾವನ ಕಾಲು ಮುರಿಯಲಿ ||ಹಿತ್ತಲಗೋಡೆಯು ಬಿರಿಯಲಿ - ಕಾ -ಳ್ಗತ್ತಲೆಯಾದರೂ ಕವಿಯಲಿ ಹರಿಯೆ 1ಮನೆಯಗಂಡ ಮಾಯವಾಗಲಿ |ಉಣಬಂದ ಮೈದುನ ಒರಗಲಿ -ಸಿರಿ -ಮನೆಯು ಹಾಳು ಹಾಳಾಗಲಿ - ನಾ -ದಿನಿ ಅತ್ತಿಗೆಯರು ಸಾಯಲಿ ಹರಿಯೆ........... 2ಕಂದನ ಕಣ್ಣೊಂದು ಮುಚ್ಚಲಿ | ಆಚಂದ್ರಂಗೆ ಹಾವು ಕಚ್ಚಲಿ ||ದ್ವಂದ್ವಾರ್ಥವನು ಬಿಚ್ಚಲಿ ಪು -ರಂದರವಿಠಲ ಮೆಚ್ಚಲಿ ಹರಿಯೆ............ 3
--------------
ಪುರಂದರದಾಸರು
ಸಂಜೆಯೊಳಿಂತು ಬರುವರೆ | ಶಬ್ದ ಹೊರುವರೆ | ಜನಕಂಜದಲಿಹರೆ ಪಸಂಧ್ಯಾಕಾಲವು ಗೋವು ಬಾರವೆ,ವತ್ಸಬಳಲವೆ, ಹೀಗೆ ಬರುವುದು ಥರವೆ |ಅಂದಾರು ಅತ್ತಿ ಅತ್ತಿಗೆಯರು, ಇಷ್ಟು ಸಹಿಸಾರು, ಪತಿಗಳು ಸುಮ್ಮನಿರರು ||ಕಂದಗಳೆರೆವ ಸಮಯವಿದು, ಬಿಟ್ಟು ಬರುವುದು, ಚರ್ಯೆ ನೋಡಲ್ಕರಿದು |ಬಂದೊಂಧೆಳಲೆ ಮನೆಯೊಳು ದೀಪ, ಹಚ್ಚದಿರೆ ಪಾಪ, ಮಾಡಬೇಡಿರಿ ಕೋಪ 1ಗಂಡನೇ ದೈವ ಹೆಂಗಸರಿಗೆ, ತಿಳಿಯದೆ, ಹೀಗೆ ಬರುವರೆ ಯನ್ನ ಬಳಿಗೆ |ಬಂಡುಇದೇನಿರೆ ಬತ್ತಲೆ, ಬಂದಿರೆಲ್ಲೆಲೆ, ಆಭರಣವೆಲ್ಲಿವಲ್ಲೆ ||ಕಂಡ ಕಂಡಲ್ಲೆ ಹುಡುಕುವರು, ನಿಮ್ಮನ್ನಾಳ್ವರು, ಕಾಣದಲೆ ಮಿಡುಕುವರು |ತುಂಟಾಟ ಕಲಿಯಬಾರದು ಇಷ್ಟು, ಪೇಳುವಿನೆ ಒಟ್ಟು, ಕೇಳಿರೆ ಮನವಿಟ್ಟು 2ಆಯಿತು ನಾ ಗಂಡನಾದೇನೆ, ತಿಳಿಯದರೇನೆ, ಕಂಡವರು ನಗರೇನೆ |ಕಾಯೋ ಪ್ರಾಣೇಶ ವಿಠಲ ಎಂದು, ಯನ್ನ ಪದರೆಂದು, ನಮಸ್ಕರಿಸಿರೆ ಬಂದು ||ಈಯಾಟ ಸಲ್ಲ, ನಿಮ್ಮನೆಗೀಗ, ಸಾಗಿರೆ ಬೇಗ, ಪತಿಗಳ ಕೂಡಭೋಗ|ಆಯಾಸವಿಲ್ಲದೆ ಮಾಡಿರೆ, ಮಾತು ಕೇಳಿರೆ, ಭ್ರಾಂತರಾಗಬೇಡಿರೆ 3
--------------
ಪ್ರಾಣೇಶದಾಸರು