ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮುತ್ತು ಕೊಳ್ಳಿರೋ ಉತ್ತುಮರೆಲ್ಲ ಧ್ರುವ ಜ್ಞಾನ ಸಮುದ್ರಲಿನ್ನು ಧ್ಯಾನವೆಂಬ ಸಿಂಪಿನೊಳು ಘನಗುರುಕರುಣದ ಮಳಿಯಾದ ಮುತ್ತು ಕೊಳ್ಳಿರೋ 1 ಪಿಂಡ ಬ್ರಹ್ಮಾಂಡವೆಂಬ ಗಡ್ಡೆಯೊಳಿನ್ನು ಪುಟ್ಟಿ ಭಕ್ತಿಭಾವ ಹಡಗದೊಳು ಬಂದ ಮುತ್ತು ಕೊಳ್ಳಿರೋ 2 ಸಾಧುಸಜ್ಜನರೆಂಬ ಮುತ್ತಿನ ಜೋಹರೇರ ಕೈಯ ನಿಜಹಸ್ತಸ್ಪರ್ಶವಾದು ನೀವು ಮುತ್ತು ಕೊಳ್ಳಿರೋ 3 ಅತ್ತಲಿತ್ತಲಾಗದೆ ಈ ಮುತ್ತು ಜತನಮಾಡಿ ನಿಮ್ಮ ಚಿತ್ತ ಮನದೊಳು ಇಟ್ಟುಕೊಳ್ಳಿರೋ 4 ತನುಮನಧನವನರ್ಪಿಸಿಕೊಂಡಿಹ ಮುತ್ತು ಮಹಿಪತಿ ಇಹರಪವಸ್ತು ಮುತ್ತು ಕೊಳ್ಳಿರೋ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹೊತ್ತು ವ್ಯರ್ಥಾ ಹೋಗುತಿದಕೋ ಮುತ್ತಿನಂಥಾ ಪ ಹೋಗುತಿದೆ ಮುತ್ತಿನಂಥಾ ದಿನದೊಳು | ಚಿತ್ತ ಸ್ವಸ್ಥ ಮಾಡಿ ಪುರುಷೋತ್ತಮನ್ನ ನೆನೆಯಿರೋ ಅ.ಪ ಉತ್ತುಮರ ಸಂಗಡದಲ್ಲಿ | ನಿತ್ಯ ಶ್ರವಣಮನನ ಮಾಡಿ | ಅತ್ತಲಿತ್ತಲಾಗದೆ | ಸು | ವೃತ್ತಿಯೊಳು ಬೆರಿಯಿರೋ 1 ಪಗಡಿ ಪಂಚಿಯಾಡಿ ಪರರಾ | ಬಗಲಿ ಕಳೆದು ಕಳೆವದೇನು | ಯುಗುತಿ ಹೀನ ರಾಗದೆ | ಪಥ ಪಡಿಯಿರೋ 2 ಮಂದ ಮತಿಯ ಕೊಂಡ್ಯಾಡಿ | ಮಂದ ಮತ್ತೆ ದೊರೆಯದಿದ್ದ | ಇಂದು ನಾಳೆಗೆನ್ನದೇ ಮು | ಕುಂದ ನಾಮವ ನೆನೆಯಿರೋ 3 ಇಂದು ನರದೇಹದಿಂದ | ಬಂದು ಬರಡ ಮಾಡಬ್ಯಾಡಿ | ತಂದೆ ಮಹಿಪತಿ ದಯ | ದಿಂದ ಮುಕ್ತಿಯ ಪಡೆಯಿರೋ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು