ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಾಕರಾ ಕಮಲಾರಮಣ ಕರಿರಾಜ ಬಂಧನ ಹರಣಾ ಸುರ ಬ್ರಹ್ಮ ಮುಖಾರ್ಚಿತ ಚರಣಾ ಶರಣಾಗೆಲೋ ದೀನೋದ್ಧರಣಾ ಪ ಅತಿಸುಂದರ ನಂದ ಕುಮಾರಾ ಸುತ ನಾಗೈ ತಂದನು ಮಾರಾ ಅತನೇ ಕುಸುಮದ ಶರೀರಾ ಸುತ ಸದ್ಗುಣ ಗಣ ಮಂದಾರಾ ಪ್ರತಿಯುಗದಲಿ ಧರಿಸೈವತಾರಾ ಕ್ಷಿತಿಯೊಳು ಪಾಲಿಪ ಸುರನಿಕರಾ 1 ಜಲಧಿ ಯೊಳಗೆರಡು ರೂಪಾದೆ ಸಲೆ ವೇದಾಮೃತವನು ತಂದೆ ಬಲಿದೀ ಕ್ರೂರಾಂಗವ ವಿಡಿದೆ ಇಳೆಸಲೆ ಪ್ರಲ್ಹಾದರ ಹೊರೆದೆ ನೆಲೆ ಪ್ರಥಮಾಶ್ರಮದಲಿ ನಿಂದೇ ಬಲಿ ಜಮದಗ್ನ್ಯರ ತೋಷಿಸಿದೆ 2 ಎರಡನೆ ವರ್ಣದೊಳಗೆ ಜನಿಸಿ ಸುರ ಪಾಂಡವರೇಳಿಗೆ ಬಲಿಸಿ ನೆರೆ ಅಂತ್ಯಯುಗದಿ ಅವತರಿಸಿ ಪುರಹರ ದ್ವಿಜರಭಿಮತ ಸಲಿಸಿ ಗುರು ಮಹಿಪತಿ ಪ್ರಭು ಕರುಣಿಸಿ ಹೊರಿಯೋ ನಿನ್ನೆಚ್ಚರ ನಿಲಿಸಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯರಾಘವ ಜಯರಾಘವ ಜಯರಾಘವ ರಾಮಾ| ಶ್ರಯಕಾರಣಸುಖಪೂರಣ ಭವತಾರಣ ನಾಮಾ ಪ ಜಗಪೋಷಣ ಮೃದುಭಾಷಣ ಸುರತೋಷಣಕಾರಿ| ಅಘಶೋಷಣ ಕುಲಭೂಷಣ ಖರದೂಷಣ ಹಾರಿ 1 ಅತಿಸುಂದರ ಗುಣ ಮಂದಿರ ದಶಕಂದರ ಹರಣಾ| ಧೃತಮಂದಿರ ಗಜೇಂದರ ಪ್ರಯಾ ಸಾಂದರ ಕರುಣಾ 2 ಪತಿ ವಾಣೀಪತಿ ದಿವಸಾಪತಿ ಧೇಯ| ಗುರುಮಹೀಪತಿ ಸುತಸಾರಥಿ ಸೀತಾಪತಿರೇಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವೆಂಕಟ ನರಸಿಂಹ ದೇವಾ ಎನ್ನ ಸಂಕಟ ಪರಿಹರಿಸುವಾ ಶಂಕೆಯಿಲ್ಲದ ಬಿರುದಾಂಕ ಮಹಿಮನಾದ ಪಂಕಜನಾಭ ಶ್ರೀ ಪರಮಾತ್ಮ ಪರಬ್ರಹ್ಮ ಪ ಸÀಕಲಲೋಕ ಕರ್ತನಾದ ಶ್ರೀಲಕುಮಿರಮಣ ವೇಣುನಾದ ಮುಕುತಿದಾಯಕ ಕೃಷ್ಣ---ಲ್ಲಾ ಮೂರ್ತಿ ಅಮಿತ ಪರಕ್ರಾಮ ಸುಜನ ರಕ್ಷಕ ಹರಿ 1 ಸಿಂಧುಶಯನ ಜಗದೀಶ ಆನಂದ ಪರಿಪೂರ್ಣ ವಿಲಾಸ ಮಂದರಧರ ಮುಕುಂದ ಅತಿಸುಂದರ ರೂಪ ಗೋವಿಂದ ಅನುದಿನ ಇಂದು ಇರುವಾ 2 ಆದಿ ಮಧ್ಯಾಂತ ರಹಿತ ಸಕಲ ವೇದಾಂತರ ಪ್ರಖ್ಯಾತ ಸಾಧು ಸಜ್ಜನರೊಡೆಯಾನೀತಾ ಅತಿ ಮೋದದಲಿರುವಂಥ ದಾತಾ ಮಾಧವ ವೈಕುಂಠ ಮನಿಯಾಗಿ ಇರುವಂಥಾ 3
--------------
ಹೆನ್ನೆರಂಗದಾಸರು