ಒಟ್ಟು 18 ಕಡೆಗಳಲ್ಲಿ , 4 ದಾಸರು , 18 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ನಮ್ಮಮನಿಲ್ಯಾನಂದ ಇಂದಿರೇಶನೆ ಬಂದ ಸಂದಲ್ಯಾಗೇದ ಸ್ವಾನಂದ ಸಂದಿಸಿ ತುಂಬೇದ ಸುಖ ಸಾಂದ್ರ ಧ್ರುವ ಅತಿಶಯಾನಂದ ಕಂದ ಪತಿತಪಾವನ ಮುಕುಂದ ಹಿತದೋರಲಿಕ್ಕೆ ಬಂದ ಸತತ ಸುದಯದಿಂದ 1 ಪುಣ್ಯದಿರಿಟ್ಟತು ಈಗ ಎನ್ನೊಡಿಯ ಬಂದಾಗ ಧನ್ಯಗೈಸಿದೆನಗೆ ಚೆನ್ನಾಗಿ ಬಂದು ಮನೆಗೆ 2 ಮನಮಂದಿರಕೆ ಬಂದ ಅನುಕೂಲವಾಗಿ ಗೋವಿಂದ ಘನಗುರು ಕೃಪೆಯಿಂದ 3 ಬಾಹ್ಯಾಂತ್ರ ಭಾಸುವ ಕ್ರಮ ಮಹಾಗುರುವಿನ ಧರ್ಮ ಮಹಿಪತಿಯ ಸಂಭ್ರಮ ಇಹಪರಾನಂದೋಬ್ರಹ್ಮ 4
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಉಂಬುವ ಬನ್ನಿರೋ ನೀಟ ಅನುಭವದೂಟ ಧ್ರುವ ಎಡಿಯು ಬಡಿಸಿಪೂರ್ಣ ಗೂಡಿನೊಳಿಟ್ಟಿದೆ ಖೂನ ನೋಡಿ ನಿಮ್ಮೊಳು ನಿಧಾನ ಮಾಡಿ ಭೋಜನ 1 ತುತ್ತುಕೊಂಬುದು ಬ್ಯಾಗೆ ಸತ್ಸಂಗದಲಿ ನೀವೀಗ ಅತಿಶಯಾನಂದ ಭೋಗ ಉತ್ತಮ ಯೋಗ 2 ಕಲ್ಪನೆಂಬುದು ನೊಣ ಬೀಳಗೊಡದೆ ಜತನ ಬಳೆದುಕೊಂಡುಂಬುವ ಜಾಣ ಕಳೆದನುಮಾನ 3 ಸವಿಸವಿಮಾಡಿಕೊಂಡು ಸೇವಿಸುವದು ಮನಗಂಡು ಪಾವನಾಗಬೇಕು ಉಂಡು ಸವಿಸೂರೆಗೊಂಡು 4 ಉಂಡು ಮಹಿಪತಿ ನೋಡಿ ಕೊಂಡಾದಿಡಾನಂದಗೂಡಿ ಮಂಡಲದೊಳಿದೇ ಮಾಡಿ ಬಿಡದೆ ಸೂರ್ಯಾಡಿ5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯ ಕರುಣಾಕರ ಗುರುದೇವ ವಾಸುದೇವ ಧ್ರುವ ಮುನಿಜನ ಪಾಲಕ ದೀನ ದಯಾಳ ಅನಾಥ ಬಂಧು ಶರಣಾಗತ ವತ್ಸಲ ಸನಕಾದಿಗಳೊಂದಿತ ಸಿರಿಸುಖಲೋಲ ಅನುದಿನ ಅಣುರೇಣುಕ ನೀನೆ ಸುಕಾಲ 1 ಪತಿತ ಪಾವನ ಪರಮ ಉದಾರ ಭಕ್ತವತ್ಸಲ ಮಾಮನೋಹರ ಅತಿಶಯಾನಂದ ಸುಜ್ಞಾನಸಾಗರ ಚತುರ್ದಶ ಭುವನಕೆ ನೀ ಸಹಕಾರ 2 ದೇಶಿಕರಿಗೆ ದೇವ ನೀನೇ ನಿಧಾನ ವಿಶ್ವಪಾಲಕ ಸ್ವಾಮಿ ನೀ ಸುಗುಣ ಭಾಸ್ಕರ ಕೋಟಿ ತೇಜ ನೀನೇ ಪೂರ್ಣ ಲೇಸಾಗ್ಹೊರಿಯೊ ದಾಸ ಮಹಿಪತಿ ಪ್ರಾಣ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯ ಮಂಗಳ ಮಹಿಮ ಸುದಾತ ಜಯ ಜಯ ಸ್ವಾಮಿ ಶ್ರೀಗುರು ಅವಧೂತ ಧ್ರುವ ನೀನಹುದೊ ಮುನಿಜನ ಪ್ರತಿಪಾಲ ಅನಾಥ ಬಂಧು ದೀನದಯಾಳ 1 ಪತಿತಪಾವನ ಯತಿಜನಪ್ರಿಯ ಅತಿಶಯಾನಂದ ನೀನಹುದೊ ನಮ್ಮಯ್ಯ 2 ಭಾವಿಕರಿಗೆ ನೀ ಜೀವಕೆ ಜೀವ ಅವಗೆ ಮಹಿಪತಿ ಕಾವ ನೀ ದೈವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ಜಯ ಮಂಗಳ ಮುನಿಜನ ಪಾಲ ಜಯ ಜಯ ಸ್ವಾಮಿ ಸದ್ಗುರು ಕೃಪಾಲ ಧ್ರುವ ತೇಜ:ಪುಂಜವು ನಿಮ್ಮ ಘನಸುಖಸಾಂಧ್ರ ರಾಜ ತೇಜೋನಿಧಿ ರಾಜ ರಾಜೇಂದ್ರ ಸುಜನರ ಹೃದಯ ಸುಜ್ಞಾನ ಸಮುದ್ರ ಅಜಸುರವಂದ್ಯ ಶ್ರೀ ದೇವದೇವೇಂದ್ರ 1 ಪತಿತ ಪಾವನ ಪೂರ್ಣ ಅತಿಶಯಾನಂದ ಯತಿ ಮುನಿಗಳಿಗೆ ನೀ ದೋರುವೆ ಚಂದ ಪಿತಾಮಹನ ಪಿತನಹುದೊ ಮುಕುಂದ ಸತತ ಸುಪಥದಾಯಕ ನೀ ಗೋವಿಂದ 2 ದೇಶಿಕರಿಗೆ ದೇವ ನಿಮ್ಮ ಸ್ವಭಾವ ಋಷಿ ಮುನಿಗಳಿಗೆ ನೀ ಜೀವಕೆ ಜೀವ ದಾಸ ಮಹಿಪತಿಗೇನಹುದೊ ಮನದೈವ ವಾಸುದೇವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಜಯ ದೇವ ಜಯ ದೇವ ಜಯ ಜಗಜೀವನ ಕರ ರತ್ನ ಧ್ರುವ ಅಜ ಸುರ ಮುನಿ ಪ್ರಾಣ ರಾಜೀವ ನಯನ ಸುಜನ ಸುಭೂಷಣ ತ್ರಿಜಗ ಪಾವನ 1 ಭಕ್ತ ಜನ ಉದ್ಧಾರ ಘನಗುರು ದಾತಾರ ಪತಿತಪಾವನಮೂರ್ತಿ ಮುನಿಜನ ಮಂದಾರ ಅತಿಶಯಾನಂದ ಅನುಪಮ ವ್ಯಾಪಕ ನಿರ್ಧಾರ ಸತತ ಸುಪಥ ಸದ್ಗುರು ಸಹಕಾರ 2 ಸಹ್ಯಾದ್ರಿ ಗಿರಿವಾಸ ಶ್ರೀಗುರು ಸರ್ವೇಶ ಬಾಹ್ಯಾಂತ್ರ ಪರಿಪೂರ್ಣ ಜಗದೀಶ ಮಹಿಪತಿಸ್ವಾಮಿ ಶ್ರೀ ದೇವದೇವೇಶ ದಾತ ಭಾಸ್ಕರಕೋಟಿ ಪ್ರಕಾಶ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೇವನೀತ ಅವಧೂತ ಜೀವ ಜೀವ ಭಾವಭೋಕ್ತ ಕಾವ ದೈವ ಪ್ರಾಣನಾಥ ದೇವಾಧಿದೇವನೆ ಈತ 1 ಶ್ರೀದೇವ ದೇವ ನಿರ್ವಿಕಲ್ಪ ನಿರಾಕಾರ ನಿರ್ವಿಶೇಹ ನಿರಂತರ ಸರ್ವಸಾಕ್ಷಿ ಸರ್ವಾಧಾರ ಸರ್ವಾತೀತ ಸರ್ವೇಶ್ವರ 2 ಸಾಧುಜನರ ಹೃದಯ ಸದೋದಿತಾನಂದೋದಯ ಆದಿ ಅನಾದಿ ನಿಶ್ಚಯ ಇದೆ ಇದೆ ವಸ್ತುಮಯ 3 ಪತಿತಪಾವನ ಪೂರ್ಣ ಅತಿಶಯಾನಂದಗುಣ ಭಕ್ತಜನರುದ್ಧರÀಣ ಸತತ ಸುಖನಿಧಾನ 4 ಙÁ್ಞನಗಮ್ಯ ಗುಣಾತೀತ ಅನಾಥಬಂಧು ಗುರುನಾಥ ದಾತ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಗುರೋರಧಿಕಂ ನಗುರೋರಧಿಕಂ ನಗುರೋರಧಿಕೆಂಬುದೆ ಪಂಥ ಬಗೆದನುಭವ ಜಗದೊಳು ನೆಲೆಗೊಂಬುದಿದೊಂದೆ ಪಂಥ ನಿಗಮಗಳಿಗೆ ಸುಗಮಾಗಿ ತೋರುವ ಪಥ 1 ಖರೆ ಮಾಡುವದಿದೊಂದೆ ಪಥ ಯತಿ ಮುನಿಜನ ಮನೋಹರ ಮಾಡುವದಿದೊಂದೆ ಪಥ ಅತಿಶಯಾನಂದನುಪಮವಾಗಿಹ ನಿಜ ಸತ್ಯ ಸನಾತನ ಗುರುಪಥ 2 ಅನಾಥನಾಥನಾಗ್ಯನುಭವ ತೋರುವದಿದೊಂದೆ ಪಥ ಅಣು ರೇಣುಕ ಪರಿಪೂರ್ಣವಾಗಿಹದಿದೊಂದೆ ಪಥ ದೀನ ಮಹಿಪತಿಗೆ ಸನಾಥ ಮಾಡುವ ಪಥ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನಹುದೋ ಶ್ರೀ ಹರಿ ಮುನಿಜನರ ಸಹಕಾರಿ ಅನಾಥÀರಿಗಾಧಾರಿ ನೀನೆವೆ ಪರೋಪರಿ ಧ್ರುವ ಪತಿತ ಪಾವನ ಪೂರ್ಣ ಅತಿಶಯಾನಂದ ಸುಗುಣ ಸತತ ಸುಪಥ ನಿಧಾನ ಯತಿ ಜನರ ಭೂಷಣ1 ಬಡವರ ನೀ ಸೌಭಾಗ್ಯ ಪಡೆದವರಿಗೆ ನಿಜ ಶ್ಲಾಘ್ಯ ದೃಢ ಭಕ್ತರಿಗೆ ಯೋಗ್ಯ ಕುಡುವದೇ ಸುವೈರಾಗ್ಯ 2 ಭಾಸ್ಕರ ಕೋಟಿ ಲಾವಣ್ಯ ಭಾಸುತಿಹ್ಯ ತಾರ್ಕಣ್ಯ ದಾಸ ಮಹಿಪತಿ ಜನ್ಮ ಧನ್ಯ ಲೇಸುಗೈಸಿದಿ ನಿನ್ನ ಪುಣ್ಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪತಿತಪಾವನ ಪರಮದಯಾಳು ಶ್ರೀನಾಥ ಅತಿಶಯಾನಂದಾತ್ಮ ಸದ್ಗುರು ಭಕ್ತಹೃತ್ಕಮಲಾಂಕಿತ ಧ್ರುವ ನಿತ್ಯಾನಂದ ನಿಜಗುಣ ನಿರ್ಗುಣರೂಪ ಶ್ರೀದೇವ ಉತ್ತಮೋತ್ತಮ ಸತ್ಯಶಾಶ್ವತ ಭಕ್ತಜನ ಉದ್ಧಾರಕ ಯತಿಜನಾಶ್ರಯಾನಂತಮಹಿಮ ಕೃಪಾಲ ಅತೀತ ತ್ರಿಗುಣ ಸತತ ಸುಪಥದಾಯಕ 1 ಅಚ್ಯುತಾನಂತ ಮುಚುಕುಂದವರದ ಮುಕುಂದ ನಿಶ್ಚಯಾನಂದೈಕ್ಯ ನಿರ್ಗುಣ ನಿಶ್ಚಲಾತ್ಮ ಕನುಪಮ ಸಚ್ಚಿದಾನಂದ ಸದ್ಗುಣ ಸಾಂದ್ರ ಸರ್ವಾತ್ಮ ಮಚ್ಛ ಕೂರ್ಮಾನಂತರೂಪ ಭಕ್ತವತ್ಸಲ ಶ್ರೀಧರ 2 ಅಚ್ಯುತ ಪಕ್ಷಪಾಂಡವ ಪಕ್ಷಿವಾಹನ ರಕ್ಷರಕ್ಷ ಜನಾರ್ದನ ಮೋಕ್ಷದಾಯಕ ಕರಿರಾಜವರದ ಕೇಶವಾಲಕ್ಷ ನಿಜ ಸು- ಬಿಕ್ಷ ಮಹಿಪತಿಗಿತ್ತು ಕಾಯೋ ಲಕ್ಷ್ಮೀಪತೆ3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪತಿತಪಾವನಹುದೋ ಸ್ವಾಮಿ ಧ್ರುವ ಯತಿಮುನಿಜನವನ ಅತಿಶಯಾನಂದ ನೀ ಶ್ರುತಿಗಗೋಚರನಹುದೋ ಸ್ವಾಮಿ 1 ಕ್ಷಿತಿಯೊಳು ಗೌತಮ ಸತಿಯಳುದ್ಧರಿಸಿದ ಅತಿ ದಯಾಳನಹುದೋ ಸ್ವಾಮಿ 2 ನಷ್ಟಾ ಜಮಿಳನ ದೃಷ್ಟಿಸಿ ನೋಡಿನ್ನು ಶಿಷ್ಟತನವ ಮಾಡಿದ್ಯೋ ಪ್ರಾಣಿ 3 ಎಷ್ಟೆಂದು ಪೊಗಳಲಿ ಸೃಷ್ಟಿಯೊಳಗೆ ನಿಮ್ಮ ದುಷ್ಟಮರ್ದನನಹುದೋ ಸ್ವಾಮಿ 4 ಅತಿ ಮಂದಮತಿ ಮಹಿಪತಿಗೆ ಸದ್ಗೈಸಿನ್ನು ಪತಿತಪಾವನ ಮಾಡಿದ್ಯೋ ಸ್ವಾಮಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಪದವ ಕಲಿಸೆನಗೆ ಶ್ರೀಹರಿ ಪದವ ಕಲಿಸೆನಗೆ ಪ ಪದವ ಕಲಿಸಯ್ಯ ಪದುಮನಾಭ ಪದದ ಮಹಿಮೆಯೆಂಬ ಸುಧೆಯು ಭರಿತವಾದ ಅ.ಪ ನಾಗಶಾಯಿಯ ವಿಮಲನಾಮವೆಂಬ ರಾಗಕಲಿಸು ಮಿಗಿಲು ಭೋಗ ಭಾಗ್ಯದಾಸೆ ನೀಗಿಸಿ ಈ ಭವ ರೋಗ ಗೆಲಿದು ತಲೆದೂಗಿ ನಲಿಯುವಂಥ 1 ದೋಷದೂರನ ಚರಿತರಸದಿಂ ಸೂಸಿ ಹರಿವ ಕವಿತ ಶ್ಲೇಷ ನೀಗಿಸಿ ಪ್ರಪಂಚ್ವಾಸನದುಳಕಿಸಿ ಸಾಸಿರನಾಮ ಹುಸಿ ತಾಳದಿ ಪಾಡುವಂಥ 2 ಯತಿತತಿಗಳು ಪೊಗಳ್ವ ಬಿಡದತಿ ಮತಿಮಾನ್ಯರು ಪಾಡ್ವ ರತಿಪತಿಪಿತ ಶ್ರೀರಾಮ ನಿನ್ನಡಿಭ ಕ್ತ್ಯತಿಗಣಕೂಡಿದ ಅತಿಶಯಾನಂದಕರ 3
--------------
ರಾಮದಾಸರು
ಪರಿ ನಿರ್ದಯಗೈದಿರಿ ತಂದೆ ಶ್ರೀ ಗುರುವೆ ಪೇಳಿ ಪ. ನೊಂದೆನು ಈ ದಿನ ನಿಮ್ಮ ವಾರ್ತೆ ತಿಳಿಯದೆ ಕುಂದೇನು ತೊರಿತೋ ಎನ್ನಿಂದ ಕ್ಷಮಿಸಿರಿ ಅ.ಪ. ಪ್ರತಿದಿನದಲಿ ನಿಮ್ಮ ಹಿತವಾರ್ತೆ ಕೇಳುತ ಅತಿಶಯಾನಂದವ ಪಡುತಲಿದ್ದೆ ಇಂದು ಅತಿಶಯದ ನಿಮ್ಮ ಹಿತವಾರ್ತೆ ತಿಳಿಯದೆ ಮತಿ ಹೀನಳಾಗಿಹೆ 1 ಉಲ್ಲಾಸಗೊಳಿಸುವ ಪುಲ್ಲನಾಭವ ಮಹಿಮೆ ಸೊಲ್ಲು ಸೊಲ್ಲಿಗೆ ನುಡಿಸಿ ಭವದಾಟಿಸಿ ಒಲ್ಲೆನು ನಾನೊಂದು ಇಹಪರ ಸೌಖ್ಯವು ನಿಲ್ಲಲಿ ಎನ್ನಮನ ನಿಮ್ಮ ಪಾದದಿ ನಿರುತ 2 ತನುಮನ ಒಪ್ಪಿಸಿ ಮನದಿ ಧ್ಯಾನಿಸುವುದು ಘನಮನಕಿನ್ನೀಗ ಬರಲಿಲ್ಲವೆ ವನಜಜಾಡಂಡದೊಳಿನ್ನು ಎನ್ನ ರಕ್ಷಿಸುವರ ಮನದಿ ನಾ ಕಾಣೆನು ವನಜಾಕ್ಷ ಬಲ್ಲನು 3 ಮೊರೆಯ ಕೇಳುತಲೀಗ ತ್ವರಿತದಿಂ ಬನ್ನಿರಿ ಸರಸಿಜಾಕ್ಷನ ತೋರಿ ಹರುಷವಿತ್ತು ದುರಿತವ ತೊಲಗಿಸಿ ಕರಕರಗೊಳಿಸದೆ ಪರಮಪ್ರಿಯರು ಎಂಬೊ ಬಿರುದುಳ್ಳ ಶ್ರೀ ಗುರುವೆ 4 ತಡಮಾಡದೆ ಭವಕಡಲ ದಾಟಿಸಿ ಈಗ ಮೃಡಸಖನನು ತೋರಿ ದೃಢ ಮನದಿ ಒಡೆಯ ಶ್ರೀ ಗೋಪಾಲಕೃಷ್ಣವಿಠ್ಠಲ ಜಗಕೆ ಬಿಡದೆ ಪೊರೆಯುವನೆಂಬೊ ದೃಢವೆನಗೆ ಕರುಣಿಸಿ 5
--------------
ಅಂಬಾಬಾಯಿ
ಭಜಿಸು ಮನವೆ ಭಜಿಸು ಮನವೆ ಅಜ ಸುರ ಮುನಿ ವಂದಿತ ಪಾದ ಪೂಜಿಸು ನಿಜಸ್ವರೂಪ ನಿತ್ಯ ಸುಜನ ಮನೋಹರನ 1 ಪರಮಪುರುಷ ಪರಂಜ್ಯೋತಿ ಪಾರಾವಾರ ಹರಿಗೋಪಾಲ ಕರುಣಾಕೃಪಾಲ ಮೂರುತಿ ಸ್ವಾಮಿ ಸಿರಿಲೋಲನ 2 ಅತೀತ ಗುಣಾನಂತಮಹಿಮ ಪತಿತಪಾವನ ಪೂರ್ಣ ಸತತ ಸದೋದಿತ ಪಾದ ಅತಿಶಯಾನಂದನ3 ಅವ್ಯಕ್ತ ಅವಿನಾಶ ಸು ದಿವ್ಯ ಸುಪವಿತ್ರದಾಗರ ಘವಘವಿಸುವ ದಿವ್ಯ ತೇಜ ರವಿಕೋಟಿ ಕಿರಣನ 4 ಅನಾಥಬಂಧು ಅನುದಿನ ಅಣುರೇಣು ತೃಣಪೂರ್ಣ ಪ್ರಾಣದೊಡೊಯ ಮಹಿಪತಿ ದೀನದಯಾಳುನಾ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸಕಲಾಗಮ ಪೂಜಿತ ಏಕೋ ದೇವನೀತ ಏಕಾಕ್ಷರ ಬ್ರಹ್ಮೀತ ಹಂಸನಾಥ 1 ರವಿಕೋಟಿ ತೇಜನೀತ ಸಂವಿತ ಸುಖ ಸಾಕ್ಷಾತ ಪವಿತ್ರ ಪ್ರಣವನೀತ ಹಂಸನಾಥ 2 ಯತಿ ಮುನಿವಂದಿತ ಪಿತಾಮಹನ ಪಿತ ಅತಿಶಯಾನಂದನೀತ ಹಂಸನಾಥ 3 ಸನ್ಮಾತ್ರ ಸದೋದಿತ ಉನ್ಮನ ವಿರಹಿತ ಚಿನ್ಮಯನಹುದೀತ ಹಂಸನಾಥ 4 ಅನುದಿನ ಸಾಕ್ಷಾತ ಘನಗುರು ಶ್ರೀಕಾಂತ ಹಂಸನಾಥ 5 ವಿಶ್ವ ವ್ಯಾಪಕನೀತ ವಿಶ್ವರೂಪ ನಿರ್ಮಿತ ವಿಶ್ವಾತ್ಮನಹುದೀತ ಹಂಸನಾಥ 6 ಇಡದು ತುಂಬಿಹನೀತ ಮೂಢಮಹಿಪತಿ ದಾತ ಒಡಿಯನಹುದೀತ ಹಂಸನಾಥ7
--------------
ಕಾಖಂಡಕಿ ಶ್ರೀ ಮಹಿಪತಿರಾಯರು