ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾರಿ ಬೇರೆಂದೇಕೆ ಹಲುಬುವರು ಜಗದಿ ನಾರಿಯೇ ಮಕ್ಕಮಾರ್ಯೆಂದೆನ್ನಬಾರದೆ ಪ ಹಿತದೋರಿ ಮನಸೆಳೆದು ಮತಿಗೆಡಿಸಿ ವಿಧವಿಧ ದು ಷ್ಕøತ ಪೇಳಿ ಬಂಧುಗಳ ಹಿತವನೆ ಮರೆಸಿ ಸತತ ಬೆನ್ನ್ಹತ್ತಿ ಬಿಡದೆ ಕ್ಷಿತಿಮೇಲೆ ಅತಿಯಾಗಿ ವ್ಯಥೆಬಡಿಪ ಮಾರಿ ನಿಜಸ್ಥಿತಿ ವಿಚಾರಿಸದೆ 1 ಮನೆ ಧನ ಗುಣ ಸುಲಿದು ಘನತೆಯನು ಕೆಡಿಸಿ ಮ ತ್ತನುಕೂಲವನು ಇತ್ತು ತನುಶಕ್ತಿ ಹೀರಿ ಕುಣಿಕುಣಿಸಿ ಜಗದೊಳಗೆ ಬಿನಗುರಲಿ ಬಿನುಗೆನಿಸಿ ಘನ ಬಾಧಿಸುವ ಮಾರಿದಿನಿಸು ಕಾಣದಲೆ 2 ಸ್ವಾಮಿ ಶ್ರೀರಾಮನ ಪ್ರೇಮಕ್ಕೆ ದೂರೆನಿಸಿ ಭುವಿಯೊಳು ಮುಕ್ತಿಕಾಮಿನಿಯ ತೊರೆಸಿ ನೇಮವಿಲ್ಲದ ಕಷ್ಟ ನೇಮಿಯೊಳಳಿಸಲಿಕೆ ಯಮನೊಶಕೆ ಕೊಡುವಂಥ ಈ ಮಾರಿನೊದೆಯದೆ 3
--------------
ರಾಮದಾಸರು
ಮೊರೆಹೊಕ್ಕೆ ಹರಿ ನಿಮ್ಮ ಚರಣಕಮಲವ ನಾನುಮರೆಯದೆ ಸಲಹೆನ್ನ ವರದಾ ಪಕರಿ ಧ್ರುವ ಪ್ರಹ್ಲಾದ ವಿಭೀಷಣರ ರಕ್ಷಿಸಿದೆಪರಂದೇವಿ ವಲ್ಲಭನೆ ವರದಾ ಅ ಎಂಬತ್ತು ನಾಲ್ಕು ಲಕ್ಷ ಜೀವರಾಶಿ ಯೋನಿಯೊಳುಹಂಬಲಿಸಿ ನಾ ಬಂದೆ ವರದಾಅಂಬುಜೋದ್ಭವನ ಬರೆಹವ ಮೀರಲಾರದೆ ನರಬೊಂಬೆ ಗರ್ಭದೊಳಿದ್ದೆ ವರದಾ 1 ತುಂಬಿದ್ದ ಕೀವು ಮಲಮೂತ್ರ ರಕ್ತದಿಂ ಹೊರಳುವಸಂಭ್ರಮದೊಳಿದ್ದೆ ನಾ ವರದಾಒಂಬತ್ತು ಮಾಸವು ಕಳೆದು ಗುಂಡಿಯೊಳಿಳಿದು ಈಕುಂಭಿನಿಗೆ ನಾ ಬಂದೆ ವರದಾ 2 ನಸುನುಡಿಯನು ಕಲಿತು ನಸುನಗೆಗಳ ನಕ್ಕು ಈ ಕುಶಲದಾಟವ ಕಲಿತೆ ವರದಾಎಸೆವ ಯೌವನ ಬಂದು ಶಶಿಮುಖಿಯರೊಳು ಕಾಮತೃಷೆಗೆ ನಾನೊಳಗಾದೆ ವರದಾ 3 ನುಸುಳಿಸುವ ಚಾಂಡಾಲ ಗುಣವನೆಣಿಸದೆ ಕಾಮವಶನಾಗಿ ನಾನಿದ್ದೆ ವರದಾಉಸುರಲೆನ್ನಳವಲ್ಲ ಬೆಸನಿತ್ತು ಸಲಹೆನ್ನಬಿಸರುಹಾಕ್ಷನೆ ಕಂಚಿ ವರದಾ 4 ಗುರು ಹಿರಿಯರ ಕಂಡು ಸರಿಸಮಾನದಿ ನಾನುಬೆರೆದುಕೊಂಡಿದ್ದೆನೋ ವರದಾನರರ ಕೊಂಡಾಡಿ ನಾಲಗೆಯೊಣಗಿ ಅತಿಯಾಗಿನರನರಳಿ ಬೆಂಡಾದೆ ವರದಾ 5 ಕಾಸಿಗಾಸೆಯ ಪಟ್ಟು ಸಹಸ್ರ ಲಕ್ಷದ ಪುಸಿಯಬೇಸರಿಸದೆ ಬೊಗಳಿದೆ ವರದಾವಿಶೇಷ ನಿಮ್ಮಂಘ್ರಿಯ ನಂಬಲಾರದೆ ಕೆಟ್ಟದೋಷಕನು ನಾನಾದೆ ವರದಾ 6 ಪಂಚೇಂದ್ರಿಯಗಳೊಳಗೆ ಸಂಚರಿಸುವೀ ಮನವುಕೊಂಚ ಗುಣಕೆಳೆಯುತಿದೆ ವರದಾಪಂಚತ್ರಿಂಶತ್ಕೋಟಿ ಭೂಮಂಡಲದೊಳೆನ್ನಂಥಪಂಚಪಾತಕನುಂಟೆ ವರದಾ 7 ಮುಂಚೆ ಶ್ರೀ ಹರಿಯೆ ನಿಮ್ಮ ವರಧ್ಯಾನ ಮಾಡುವರಪಂಚೆಯಲ್ಲಿರಿಸೆನ್ನ ವರದಾಪಂಚಬಾಣನ ಪಡೆದ ನೆಲೆಯಾದಿ ಕೇಶವ ಈ ಪ್ರಪಂಚವನು ಬಿಡಿಸೆನ್ನ ವರದಾ 8
--------------
ಕನಕದಾಸ
ವೆಂಕಟೇಶ ವಿಠ್ಠಲನೆ ಉದ್ಧರಿಸೊ ಇವಳಾಪಂಕಜಾಸನ ವಂದ್ಯ ಪಂಕೇರು ಹಾಕ್ಷ ಪ ಪತಿ ವಿಯೋಗದ ದುಃಖ | ಅತಿಯಾಗಿ ತವಪಾದಗತಿಗಾಗಿ ಗಿರಿಯೇರಿ | ತುತಿಸುತಿರೆ ನಿನ್ನಾಗತಿಗೋತ್ರ ತೈಜಸನೆ ಪತಿರೂಪ ನಿನ್ನನುಪತಿಕರಿಸ ನಿನ್ನ ಮೃತ ಹಸ್ತ ನೆತ್ತಿಲಿ ಇಟ್ಟೇ 1 ಇಂದಿವಳ ಪ್ರಾರ್ಥನೆಯ ಛಂದದಲಿ ಮನ್ನಿಸುತಅಂದು ನೀನಾಗಿತ್ತ | ನಂದದಂಕಿತವಾಇಂದು ಊರ್ಜಿತ ಪಡಿಸಿ | ವಂದಿಸಿಹೆ ತವಪಾದವೃಂದಾರ ಕೇಂದ್ರ ಗುರು ನಂದ ಮುನಿ ವಂದ್ಯಾ 2 ಪಕ್ಷಿವಾಹನ ದೇವ | ದಕ್ಷಾರಿ ಪ್ರಿಯ ಸಖನೆದೀಕ್ಷಿತಳ ದಾಸಪಥ | ಲಕ್ಷಿಸುತಲಿದನಾಈಕ್ಷಿಪುದು ಕರುಣಾಕ | ಟಾಕ್ಷದಲೆಂದನುತಅಕ್ಷಾರಿ ವಂದ್ಯ ಹರಿ ಪಾರ್ಥಿಸುವೆ ನಿನ್ನಾ 3 ದೇಶ ದೇಶದ ಜನರ | ಆಶೆಗಳ ಪೂರೈಪ ಕೇಶವನೆ ಶ್ರೀ ವೆಂಕಟೇಶಾಖ್ಯ ಹರಿಯೇ |ದಾಸಿಯಳ ಹೃದಯಾ | ಕಾಶದೊಳು ತೋರೆಂದುಲೇಸು ಭಿನ್ನಪ ಸಲಿಸೊ | ಮೇಶ ಮಧ್ವೇಶಾ4 ಊರ್ವಿಯೊಳು ನಿನ್ಹೊರತು ಕಾವರನು ನಾಕಾಣೇಸರ್ವೋತ್ತಮೋತ್ತಮನೆ | ಶರ್ವ ವಂದ್ಯಾದರ್ವಿ ಜೀವಿಯ ಕಾವ | ಹವಣೆ ನಿನ್ನದಲ್ಲೇನೊ ಗುರ್ವಂತರಾತ್ಮ ಗುರು | ಗೋವಿಂದಾ ವಿಠಲಾ 5
--------------
ಗುರುಗೋವಿಂದವಿಠಲರು