ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಾ ಪೊಂದಿರೆ ಕೊರತೆಗಳುಂಟೆ ಶ್ರೀ ನರಹರಿಯ ಪ ನರಿಗಳ ಕೂಗಿಗೆ ಹುಲಿಯಂಜುವುದೆ ಬಿರುಗಾಳಿಗೆ ದೊಡ್ಡ ಗಿರಿ ನಡುಗುವುದೆ ಅ.ಪ ನಾನು ತಾನೆಂದು ಕುಣಿಯುತಲಿದ್ದ ಮಾನವರನು ಜರಿದು ನೀನೆ ಸೇವೆಯನು ಮಾಡೆಂದೆನುತ ತಾನೊಲಿಯುತಲಿ ಹೀನ ಜನರು ಅಪಮಾನವ ಬಯಸಲು ನಾನಿಹೆನೆನ್ನುವ ಜಾನಕಿನಾಥನ 1 ಬಂಧುಗಳೆನ್ನ ನಿಂದಿಸುತಿಹರು ಒಂದನೂ ಕೊಡೆಯೆಂದು ಹಿಂದು ಮುಂದೆನಗೆ ಕುಂದು ಕೋರುವರು ಒಂದನರಿಯರು ಮುಂದೆ ಎನಗೆ ಬಲು ತೊಂದರೆಗಳಿರುವು ವೆಂದು ಪೇಳುವರು ಮಂದರಧರನ 2 ಧನಿಕನಲ್ಲೆಂದು ಅಲ್ಲಗೆಳೆಯುವರು ಧನವಿಲ್ಲದಿರಲು ಘನತೆ ಎಂತೆಂದು ಜರಿಯುತಲಿಹರು ಮನವನರಿಯರು ಧನ ಪಿಶಾಚಿಯನು ಮನದಿಂದ ತೊಲಗಿಸಿ ಮನದಲಿ ನೆಲಸಿಹ ವನರುಹ ನಯನನ 3 ನಂಬಿದರೆಮ್ಮ ಧನಕನಕಗಳ ತುಂಬುವೆವೆಂಬ ಜಂಭದ ಮಾತ ನಂಬದೆ ಇರಲು ಹಂಬಲಿಸುವರು ನಂಬುವ ಭಕುತರ ಹಿಂಬಾಲಿಸುತಲಿ ಬೆಂಬಲಿವೀಯುತವ ಅಂಬುಜನಾಭನ 4 ಚತುರನಲ್ಲೆಂದು ಅತಿದೂರುವರು ಹಿತರಂತೆ ನಟಿಸಿ ಮಿತಿಮೀರಿ ಎನಗೆ ಬೋಧಿಸುತಿಹರು ಮನ್ಮತಿಯನರಿಯರು ರತಿಪತಿಯೆನ್ನನು ಪ್ರಸನ್ನನಾಗಿ ದಿವ್ಯ ಗತಿ ತೋರುತಲಿರೆ ಚತುರತೆಯೇತಕೆ 5
--------------
ವಿದ್ಯಾಪ್ರಸನ್ನತೀರ್ಥರು
ಪದ್ಮನಾಭ ಪದ್ಮನಾಭ ಉಡುಪಿನ ಶ್ರೀಕೃಷ್ಣಜಯ ದುರ್ಜನರಿಗೆ ಅತಿದೂರ ಸುವ್ವಿಸುವ್ವಿ ಸುವ್ವಾಲೆ ಪ. ಸುರರ ಶಿರೋರನ್ನ ಗರುಡವಾಹನನೆ ಕರುಣಸಂಪನ್ನ ಉಡುಪಿನಕರುಣಸಂಪನ್ನ ಉಡುಪಿನ ಶ್ರೀಕೃಷ್ಣಶರಣಾಗು ಧನ್ಯ ಜನರಿಗೆ1 ಮುಖ್ಯಪ್ರಾಣ ಭಾರತೀರಮಣಗೆ ಎರಗುವೆ 2 ರಾಮನಂಘ್ರಿಯ ಸೇವೆ ಪ್ರೇಮದಿಂ ಮಾಡಿದಶ್ರೀಮಂತ ನಮ್ಮ ಹನುಮಂತಶ್ರೀಮಂತ ನಮ್ಮ ಹನುಮಂತನೆಂದವಗೆಕಾಮಿತಾರ್ಥಗಳ ಕೊಡುವನೆ 3 ಭಾರತ ಯುದ್ಧದಲಿ ಬಾಹುಬಲ ತೋರಿದಧಾರಿಣೀಶ್ವರ ತಿಲಕನೆಧಾರಿಣೀಶ್ವರ ತಿಲಕನೆ ಶ್ರೀ ಭೀಮಸಾರಿದ ಜನರ ಸಲಹುವ 4 ಶುದ್ಧಶಾಸ್ತ್ರಗಳಿಂದ ಗೆದ್ದು ವಾದಿಗಳನು ಹೊದ್ದಿದ ಜನರ ಕರುಣದಲಿಹೊದ್ದಿದ ಜನರ ಕರುಣದಲಿ ಹೊರೆವ ಶ್ರೀಮಧ್ವಮುನಿಪನ ಭಜಿಸುವೆ 5 ಹರಿಯ ಸತ್ಕರದಲ್ಲಿ ಕರುಣಂಗಳೊಡನೆದುರುಳ ವಾದಿಗಳ ಗೆಲಿದನೆÀದುರುಳ ವಾದಿಗಳ ಗೆಲಿದನೆ ಹೃಷಿಕೇಶಗುರುಗಳಂಘ್ರಿಗೆ ನಮಿಸುವೆ 6 ದೇಶ ದೇಶದೊಳುಳ್ಳ ದೂಷಿವಾದಿಗಳನ್ನು ದೂಷಿಸಿ ಹರಿಯ ಮಹಿಮೆಯನುದೂಷಿಸಿ ಹರಿಯ ಮಹಿಮೆಯ ಮೆರೆದ ಶ್ರೀನೃಸಿಂಹತೀರ್ಥಯತಿರಾಯ7 ಅದ್ವೈತವಾದಿಗಳ ಗೆದ್ದು ನಿರ್ಮಲವಪ್ಪಮಧ್ವಮಾರ್ಗವನು ಜಗಕೆಲ್ಲಮಧ್ವಮಾರ್ಗವನು ಜಗಕೆಲ್ಲ ತೋರಿದ ಜ-ನಾರ್ದನತೀರ್ಥಯತಿರಾಯ8 ಇಂದಿರೆಯರಸನ ಎಂದೆಂದು ಪೂಜಿಸಿಮಂದಮಾಯಿಗಳ ಕುಮತವಮಂದಮಾಯಿಗಳ ಕುಮತವ ಗೆಲಿದ ಉ-ಪೇಂದ್ರÀತೀರ್ಥಯತಿರಾಯ9 ಈ ಮಹಿಯೊಳಗುಳ್ಳ ತಾಮಸ ಜನರನ್ನುಶ್ರೀಮಧ್ವ ಮುನಿಪನ್ನ ಮತದಿಂದಶ್ರೀಮಧ್ವಮುನಿಪನ್ನ ಮತದಿಂದ ಖಂಡಿಸಿವಾಮನತೀರ್ಥರೆಸೆದರು 10 ಧೀರ ತಾಪಸರಾಗಿ ಗುರುಮಧ್ವಮುನಿಯಚಾರುಚರಣಂಗಳ ಪಿಡಿದಿರ್ದಚಾರುಚರಣಂಗಳ ಪಿಡಿದಿರ್ದ ಶ್ರೀವಿಷ್ಣು-ತೀರ್ಥರಡಿಗೆ ನಮಿಸುವೆ11 ಕಾಮನ ನೆರೆ ಅಟ್ಟಿ ಶ್ರೀಮಹಾವಿಷ್ಣುವೇ ಸ್ವಾಮಿ ಎಂಬುದನು ಜಗಕ್ಕೆಲ್ಲ ಸ್ವಾಮಿ ಎಂಬುದನು ಜಗಕ್ಕೆಲ್ಲ ತೋರಿದ ರಾಮತೀರ್ಥಯತಿರಾಯ12 ಮನುಮಥನಯ್ಯನ ಘನತೆಯ ತೋರಿಸಿನರ ಮೋಹಗಳ ಬಿಡಿಸಿದಜನರ ಮೋಹಗಳ ಬಿಡಿಸಿದ ಅಧೋಕ್ಷಜಮುನಿಕುಲಾಗ್ರಣಿಗೆ ನಮಿಸುವೆ13 ಮಧ್ವಕಿಂಕರರಾದ ಪದ್ಮನಾಭಾರ್ಯರವಿದ್ಯಾವೈಭವಗಳ ಪೊಗಳುವವಿದ್ಯಾವೈಭವಗಳ ಪೊಗಳುವ ಕವಿಯಾರುಶುದ್ಧ ಮುನಿಗಳಿಗೆ ಅಳವಲ್ಲ 14 ಸ್ವದೇವ ಹಯವದನನ ಆವಾಗ ಪೂಜಿಪ ಪಾವನ್ನ ಮಧ್ವಮುನಿಪನಪಾವನ್ನ ಮಧ್ವಮುನಿಪನ ಶಿಷ್ಯರಾದದೇವತೆಗಳ ಮರೆಹೊಕ್ಕೆ 15
--------------
ವಾದಿರಾಜ
ಬಾನ್ದಳದ ಬುಡವೆನಗೆ ಅತಿದೂರ ಬೆಳಕೇ ಮನ್ದಿರವು ಶುದ್ಧವಿದೆ ಬಾ ಇದರತಳಕೆ ಪ ಸುಂದರದ ಕಾಂತಿಯನು ಚೆಲ್ಲು ಈ ಮನೆಗೆ ಇಂದು ಬಾ ನಾಳೆಯೆನಬೇಡ ನನ್ನೆಡೆಗೆ ಅ.ಪ ಜನುಮದಂಚಿನ ಬೆಳಕು ನಿನ್ನದೇ ಗೊತ್ತು ನಲಿದು ಬಂದಿಹೆನೊಳಗೆ ನಾ ನಿನ್ನ ಸೊತ್ತು ನಿಲುಕದೆಡೆ ನಿಲಬೇಡ ಬಾ ನನ್ನ ಮುಪ್ಪೆ ಬಲಯುತನ ಮಾಡೆನ್ನ ಸುಜ್ಞಾನಚಿತ್ತೆ 1 ನೀ ಮಾತ್ರವಿತ್ತಲಿರೆ ನನ್ನೈದು ಗೆಳೆಯರು ನೇಮಯುತರಾಗುವರು ಸೊಗಬಾಳ್ವರು ನಾ ಮಾಳ್ಪುದೆಲ್ಲವೂ ನಿನ್ನದೇ ಆಗುವುದು ರಾಮಕೃಷ್ಣರ ನೆನಪು ನನಗೆ ದೊರಕುವುದು 2 ನೀನಿರದ ನನ್ನ ಮನೆ ಕಡುಕತ್ತಲೆಯ ಕೋಣೆ ನೀನಿರದೆ ನಾನಿರಲು ಫಲವೇನು ಕಾಣೆ ಕಾನನದ ಹೂವಿನಂತಿದ್ದೇನು ಫಲವಿಲ್ಲ ಜ್ಞಾನ ಹೊಂಬೆಳಕೆ ಮಾಂಗಿರಿರಂಗ ನೋಡೆ ಭಯವಿಲ್ಲ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮಾನಿಸರಿಗೊಶವಲ್ಲ ಪೊಗಳಿ ಪೇಳುವುದು ಪ ಮೇಧಾದಿ ಮುನಿ ತನ್ನ ತಪೋಸಿದ್ಧಿಗೆ ಸರ್ವ | ಮೇದಿನಿ ತಿರುಗಿ ಬರುತಲಿ ಇತ್ತಲು | ಸಾಧನಕೆ ಸೌಮ್ಯವಾದ ಭೂಮಿಯನು ನೋಡಿ ಇವ | ಮಣಿ ಮುಕ್ತಿ ತೀರದಲಿ1 ನೆಸಗಿದ ತಪಕೆ ಮೆಚ್ಚಿ ಹರಿ ಒಲಿದ ತೀವ್ರದಲಿ | ಬಿಸಿಜದಳ ಲೋಚನೆ ಲಕುಮಿಯಿಲ್ಲೀ || ಎಸೆವ ಮಂಜರಿ ವೃಕ್ಷದಲಿ ವಾಸವಾಗಿ | ವಸುಧಿಯೊಳು ವಾಸವಾಗಿ ಅಗ್ರದಲಿ ಮೆರೆದನು 2 ಪರಮೇಷ್ಠಿ ಬಂದು ಈ ಕ್ಷೇತ್ರದಲಿ ನಿಂದು ಚ ಪರಮ ಗತಿ ಕೊಡು ಎಂದು ಸ್ತುತಿಸಿದನು ಹರಿಯ3 ಇಲ್ಲಿಗೆ ಬಂದು ಸತ್ಕರ್ಮವನು ಮಾಡಿದಡೆ | ಎಲ್ಲ ಕ್ಷೇತ್ರದಲಿ ಮಾಡಿದ ಫಲಕಿಂತ | ಎಳ್ಳಿನಿತು ಮಿಗಿಲೆನಿಸಿ ಪುಣ್ಯ ತಂ | ದುಣಿಸುವುದು | ಎಲ್ಲೆಲ್ಲಿ ಇದ್ದರು ಸ್ಮರಣೆ ಮಾಡಿರೊ ಜನರು 4 ಸುಗಂಧ ಪರ್ವತವಾಸ ಪುರುಷೋತ್ತಮ | ನಿಗಮಾದಿಗಳಿಗೆ ಅತಿದೂರತರನೋ | ಸುಗುಣನಿಧಿ ವಿಜಯವಿಠ್ಠಲರೇಯ ಸರ್ವದ | ಗಗನದಲಿ ಪೊಳೆವನು ಬ್ರಹ್ಮಾದಿಗಳ ಸಹಿತಾ 5
--------------
ವಿಜಯದಾಸ