ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನುಗತಿ ಏನುಗತಿ ಇನಕುಲೇಶ ಹೀನ ವಿಷಯದಿ ಮನ ಶ್ವಾನನಂತಿಟ್ಟ ಎನಗೇನು ಪ ಮೂರು ಗುಣಗಳಿಂದ ಮೂರು ತಾಪಗಳಿಂದ ಮೂರು ಈರೆರಡೊಂದು ಮದಗಳಿಂದ ಮೂರು ಐದಾರಿಂದ ಮರೆತು ತನು ಮೂಲಗಳ ಸ್ಮರಿಸದೇ ನರಹರಿಯ ನರಕಕ್ಕೆ ಗುರಿಯಾದ ಎನಗೆ 1 ಅತಿಥಿಗಳಿಗನ್ನ ಬಲು ಹಿತದಿ ಕೊಡದೆಲೆ ಪರ ಸತಿಯ ಸಂಗದಿ ನೆಲಸಿ ಹಿತವ ಮರೆದು ರತಿಪತಿಪಿತ ನಿನ್ನ ಸ್ತುತಿಸದೆ ಮತಿಗೆಟ್ಟು ಕ್ಷಿತಿಯೊಳಗೆ ನಾನೊಬ್ಬ ಯತಿಯಂತೆ ಚರಿಪ 2 ಇನ್ನಾದರೆನ್ನ ಪಾವನ್ನ ಮಾಡಲು ನಿನ್ನ ಘನ್ನ ಉಪಕೃತಿ ಮರಿಯೆ ಶ್ರೀ ನರಹರಿಯೆ ನಿನ್ನ ಪೊರತನ್ಯರನು ಮನ್ನಿಸುವರ ಕಾಣೆ ಬೆನ್ನ ಬಿದ್ದೆನೊ ದಯವನ್ನು ಮಾಡೆಲೋ ಬೇಗ3
--------------
ಪ್ರದ್ಯುಮ್ನತೀರ್ಥರು
ಇಷ್ಟುಪಾಪವನು ಮಾಡಿದುದೆ ಸಾಕೊ |ಸೃಷ್ಟಿಗೀಶನೆ ಎನ್ನನುದ್ಧರಿಸಬೇಕೊ ಪಒಡಲಕಿಚ್ಚಿಗೆ ಪರರ ಕಡು ನೋಯಿಸಿದೆ ಕೃಷ್ಣ |ಕೊಡದೆ ಅನ್ಯರ ಋಣವನಪಹರಿಸಿದೆ |ಮಡದಿಯ ನುಡಿಕೇಳಿಒಡಹುಟ್ಟಿದವರೊಡನೆ |ಹಡೆದ ತಾಯಿಯ ಕೂಡಹಗೆಮಾಡಿದೆ1ಸ್ನಾನಸಂಧ್ಯಾನಜಪ ಮಾಡದಲೆ ಮೈಗೆಟ್ಟೆ |ಜ್ಞಾನಮಾರ್ಗವನಂತು ಮೊದಲೆ ಬಿಟ್ಟೆ ||ಏನ ಹೇಳಲಿ ಪರರ ಮಾನಿನಿಗೆ ಮನಸಿಟ್ಟೆ |ಶ್ವಾನ- ಸೂಕರನಂತೆ ಹೊರೆದೆ ಹೊಟ್ಟೆ2ವ್ರತ ನೇಮ ಉಪವಾಸ ಒಂದು ದಿನ ಮಾಡಲಿಲ್ಲ |ಅತಿಥಿಗಳಿಗನ್ನವನು ನೀಡಲಿಲ್ಲ |ಶೃತಿ ಶಾಸ್ತ್ರ ಪುರಾಣ ಕಥೆಗಳನು ಕೇಳಲಿಲ್ಲ |ವೃಥವಾಗಿ ಬಹುಕಾಲ ಕಳೆದನಲ್ಲ 3ಶುದ್ಧ ವೈಷ್ಣವ ಕುಲದಿ ಉದ್ಭವಿಸಿದೆನೋ ನಾನು |ಮಧ್ವ ಮತಸಿದ್ದಾಂತ ಪದ್ಧತಿಗಳ ||ಬುದ್ಧಿಪೂರ್ವಕ ತಿಳಿದು ಪದ್ಮನಾಭನು ದಿನದಿ |ಕದ್ದುಂಡು ಕಾಯವನು ವೃದ್ಧಿಮಾಡಿದನಯ್ಯ 4ತಂದೆ - ತಾಯ್ಗಳ ಸೇವೆ ಒಂದು ದಿನ ಮಾಡಲಿಲ್ಲ |ಮಂದಭಾಗ್ಯದಬವಣೆತಪ್ಪಲಿಲ್ಲ ||ಹಿಂದೆ ಮಾಡಿದ ದೋಷ ಬಂದುಳಿಯದರುಹಿದೆನು |ತಂದೆ ಪುರಂದರವಿಠಲ ಮುಂದೆನ್ನ ಕಾಯೊ 5
--------------
ಪುರಂದರದಾಸರು