ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇ ಸಂಧಿಸಿ ಧರ್ಮ ಭೇದಸಿ ಗುರುವರ್ಮ ಶೋಧಿಸಿ ನೋಡಲಿಕ್ಕೆ ಛೆÉೀದಿಸಿಹೋಗುದು ಭವಕರ್ಮ ಧ್ರುವ ಕಾಣಾದ ಕಾಣಬ್ಯಾಡಿ ಕಾಣಿಸುವದು ನೋಡಿ ಕಾಣಿಸಿ ಕಾಣಗೊಡದಿಹ್ಯದ ಖೂನ ನಿಜಮಾಡಿ 1 ದೋರದ ನೋಡಬ್ಯಾಡಿ ದೋರಿಸುವದು ನೋಡಿ ದೋರಿಸಿದೋರಗುಡದಿಹುದ ಖೂನ ನಿಜಮಾಡಿ 2 ಕೇಳದ ಕೇಳಬ್ಯಾಡಿ ಕೇಳಿಸುವದ ನೋಡಿ ಕೇಳಿಸಿ ಕೇಳೆಗೊಡದಿಹುದ ಖೂನ ನಿಜಮಾಡಿ 3 ಆಡದ ನೋಡಬ್ಯಾಡಿ ಅಡಿಸುವದ ನೋಡಿ ಅಡಿಸಿ ಆಟ ನೋಡಗೂಡದ ಖೂನ ನಿಜಮಾಡಿ 4 ನುಡದ ನೋಡಬ್ಯಾಡಿ ನುಡಿಸುವದ ನೋಡಿ ನುಡಿಸಿ ನುಡಿ ತಿಳಿಯಗುಡದ ಖೂನ ನಿಜಮಾಡಿ 5 ಮಾಡದ ನೋಡಬ್ಯಾಡ ಮಾಡಿಸೂವದ ನೋಡಿ ಮಾಡಿಸಿ ಮಾಡದೋರಗುಡದ ಖೂನ ನಿಜಮಾಡಿ 6 ತಿಳುಹದ ನೋಡಬ್ಯಾಡಿ ತಿಳುಹಿಕುಡದ ನೋಡಿ ತಿಳುವಿಸುವದ ತಿಳುವದೆ ಮಹಿಪತಿವಸ್ತ ನೋಡಿ7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮಾನವ ನಿನ್ನಾ | ಪಡೆದು ಕೊ ಸದ್ಗತಿಯನು ಪ ತಡಿಯದೇ ಸದ್ಗುರು ಅಡಿಗಳ ಪೂಜಿಸಿ | ಒಡನೆ ಭವಾಂಭವಾಂಬುಧಿ ಥಡಿಯವ ಸಾರೆಲೋ ಅ.ಪ ಪತ್ರೇಂದ್ರವಾಹನನು | ಮಣಿಗಣ ಸೂತ್ರದಂದದಿ ಜೀವನು | ಚಿತ್ರ ವಿಚಿತ್ರದಲಿ ಅಡಿಸುವ | ಗು | ಣತ್ರಯ ವಾದಲಿ | ಕಳತ್ರ ಸುಮಿತ್ರ ಸಮಂಧ | ಧತ್ರಿಲಿ ಮಾಯ ಚರಿತ್ರವಿದೆಂದು 1 ತಾನಾರು ತನುವಾರದು ತನುವಿನ | ತಾನೀ ಸಂಮಂಧವಾರದು | ಜ್ಞಾನಿಗಳನು ಮತದಿ ತಿಳಿದು ನೋಡು | ಸ್ವಾನುಭವದ ಬೋಧದೀ | ಹಾನಿ ಯಶ _ ಸುಖ ಮಾನಾಪಮಾನವು | ಮಾನವರಿಗೆ ಪ್ರಾಚೀನ ಫಲೆಂದು 2 ಹಿಂದಾದ ನೆನಹಿಸದೇ ವಾಸನೆಗಳ | ಮುಂದೇನು ಕಾಮಿಸದೇ | ಕ | ನಸಿನಾನಂದ ವಿದೆಂದು ಭಾವಿಸೀ | ತಂದೆ ಮಹಿಪತಿ ಕಂದಗ ಸಾರಿದ | ದ್ವಂದ್ವಗೆಲಿದು ಗೋವಿಂದ ನೆನೆಯುತ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು