ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಸೂಯೆ ಬಿಡಿಸೆನ್ನ ಮನಸಿನ ಅಸೂಯೆ ಬಿಡಿಸೆನ್ನ ಪ ಅಸೂಯೆ ಬಿಡಿಸೆನ್ನ ಹೇಸಿಮನಸಿನ ಈಶ ನಿನ್ನಪಾದ ದಾಸಾನುದಾಸೆನಿಸೋ ಅ.ಪ ಕೊಟ್ಟರು ಅಷ್ಟೆಯೆನಿಸೋ ಕೊಡದೊದ್ದು ಅಟ್ಟಿದರಷ್ಟೆನಿಸೋ ಕೊಟ್ಟು ಕೊಡದವರೆಲ್ಲ ಅಷ್ಟೆನಿಸೆನ್ನಗೆ ಶಿಷ್ಟಗುಣಿತ್ತು ಪೊರೆ ಸೃಷ್ಟಿಮೇಲೆ ಹರಿ 1 ಕಡುಸಿರಿ ಅಷ್ಟೆನಿಸೋ ಎನಗೆ ಬಂದ ಬಡತನ ಅಷ್ಟೆನಿಸೋ ಕಡುಸಿರಿ ಬಡತನ ಅಷ್ಟೇಯೆನಿಸಿ ನಿನ್ನ ಅಡಿದೃಢವಿತ್ತು ಪೊರೆ ಪೊಡವಿ ಮೇಲೆ ಹರಿ2 ದೂಷಣ ಅಷ್ಟೆಯೆನಿಸೋ ಜಗದೊಳು ಭೂಷಣ ಅಷ್ಟೆನಿಸೋ ದೂಷಣ ಭೂಷಣ ಅಷ್ಟೇಯೆನಿಸಿ ನಿನ್ನ ಧ್ಯಾಸದಿಟ್ಟು ಪೊರೆ ಶ್ರೀಶ ಶ್ರೀರಾಮ ತಂದೆ 3
--------------
ರಾಮದಾಸರು
ಗಿI. ಲೋಕ ನೀತಿ ಅಮೃತ ಸುರಿದಂತೆ ಸಜ್ಜನರ ಸಂಗ ಅಮೃತ ಸುರಿದಂತೆ ಪ ಅಮೃತುಂಡಿತಿಹ್ಯ ಸಾಮ್ರಾಜ್ಯದಲಿ ಬಂದು ನಮ್ರತೆಯಿಂದಪಮೃತ್ಯು ಗೆಲಿಸುವಂಥ ಅ.ಪ ಮಾಯ ಮುಸುಕು ತೆಗೆಸಿ ನಿರುತ ಕಾಯಕರ್ಮ ಕೆಡಿಸಿ ಭಾವಶುದ್ಧಮಾಡಿ ಸಾವಧಾನವಿತ್ತು ಸಾವು ಹುಟ್ಟಳುಕಿಸಿ ಪಾವನವೆನಿಸುವ ದಿವ್ಯ 1 ಆಶಪಾಶಕಡಿದು ವಿಷಯ ದ್ವಾಸನೆಯನು ತೊಡೆದು ದೋಷರಾಶಿಗಳ ನಾಶಮಾಡಿ ಭವ ಘಾಸಿ ತಪ್ಪಿಸಿ ಮಹ ಶಾಶ್ವತಪದವೀವ2 ಅಡರಿಕೊಂಡು ಬರುವ ಸಂಸಾರ ತೊಡರು ಕಡಿವ ಪೊಡವಿತ್ರಯಂಗಳ ಒಡೆಯ ಶ್ರೀರಾಮನ ಅಡಿದೃಢವಿತ್ತು ಮುಕ್ತಿಗೊಡೆಯನೆನಿಸುವಂಥ 3
--------------
ರಾಮದಾಸರು