ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೀ ಕೃಪೆ ಮಾಡೋ ಹರಿಯೇ ಲೋಕವಿನುತ ಸಿರಿಯೇ ಪ ಶ್ರೀಕರ ಭಾಸ್ವರಾ ಭಕ್ತಸುಧಾಕರ ಶೋಕಹರಣಾ ನೀ ಶೂರಾ ಅ.ಪ ನಡು ನೀರೋಳೆನ್ನ ಕೈಯ ಬಿಡಬೇಡ ಮಾರನಯ್ಯ ಅಡಿಗೆರಗುವೆನಯ್ಯ ಕೊಡು ನಿನ್ನ ನಾಮಾವಳಿಯ ದೃಢದೆ ಭಜಿಪೆನಯ್ಯ ಮೃಡನುತಾನೇ ಗೋವಿಂದಯ್ಯ 1 ಕಳೆದ ದುರಿತಾವೃತ ಉಳಿದುದು ವೋವರಾ ಅಳಿವ ಕಾಲವಿದಿನ್ನು ಬಳಲಿಸೋಲುವೆ[ನಯ್ಯ] ಘಳಿಲನೆ ನಿನ್ನ ನಾಮಾವಳಿಯ ಸ್ಮರಣೆಯ 2 ಅನ್ಯರ ಭಜಿಸೆನು ಅನ್ಯರ ನುತಿಸೆನು ಅನ್ಯರಿಗೆರಗೆನು ಅನ್ಯರ [ಪೂಜಿ]ಸೆನು [ಅ ನನ್ಯ ಶರಣನೆ ಮನ್ನಿಸೊ ಶರಣುಬಂದಿಹೆನು] 3 ಕಾವಧೀರನು ಇನ್ನು ಅವನೇ ಶ್ರೀಹರಿ ಸೇವಕರಿಗೆ ನಾನು ಸೇವಕನೆನ್ನುತಾ ಭಾವಿಸೋ ದೇವದೇವಾ ಮಾವಿನಾಕೆರೆರಂಗ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸನುಮತವೆಂಬುದಿಲ್ಲ ಅನುನಯವಿಲ್ಲ ಪ ಮಮತೆಯೆಂಬುದು ಇಲ್ಲ ಇನಿತುಗುಣವಿಲ್ಲ ವನಜನಾಭನ ನೆನೆವಾ ತನುವೆನ್ನೊಳಿಲ್ಲಾ ಅ.ಪ ಪಂಚಭೂತಗಳೆಲ್ಲ ಸಂಚು ಮಾಡುತಲಿಪ್ರ ಪಂಚದ ಸುಖದೊಳು ಪಂಚೇಂದ್ರಿಯಗಳಾ ಹಂಚುತೆ ಮನವನು ಚಂಚಲಗೈದುವಲ್ಲ ಅಂಚೆಯಿಲ್ಲದ ಸರಸಿಯಂತಾಗಿಯೆನ್ನ 1 ಹರಿಯ ನೋಡುವ ನೇತ್ರ ಪರನಾರಿಯರ ಸೊಬಗ ಹರಿಯ ಪೂಜಿಪ ಹಸ್ತ ಪರರ ವಿತ್ತಂಗಳರಸಿ ಹರಿ ತುಳಸಿಯ ತೊರೆದು ಪರಿಮಳವ ನಾಸಿಕವಾಂತು ಹರಿಗೆರಗುವ ಶಿರವು ಗರುವವ ಬಯಸಿದೆ 2 ಚಕ್ರಪಾಣಿಯಮರೆದು ತಕ್ರಾನ್ನವನು ಸವಿದು ಮುಕ್ತಿ ಚರಿತೆಯ ತೊರೆದು ಅಕ್ಕರೆಯಿಂದಾ ಕರ್ಣ ಠಕ್ಕು ಕೌಳಿಯ ಮೆದುಳು ಸೊಕ್ಕಿ ಬಯಸುತಲಿವೆ ದಿಕ್ಕಾರೋ ಯೆನಗೇ 3 ಸುಡುಯಿದುರ್ನೇತ್ರವ ಕೊಡು ದಿವ್ಯದೃಷ್ಟಿಯ ತೊಡೆ ಯೀ ದುರಿಂದ್ರಯಗಳ ಕೊಡು ಸತ್ವಗುಣವಾ ದೃಢಗೈದು ಒಮ್ಮೆ ಮಾತ್ರ ಅಡಿಗೆರಗುವೆನಯ್ಯ ಬಿಡಬೇಡ ಎನ್ನ ಕೈಯ ಮಾವಿನಾಕೆರೆರಂಗಾ 4
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್