ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತಜನ ಪಾಲಕ - ಭಕ್ತಿಸುಖದಾಯಕ ಮುಕ್ತೀಶ ದೀನಬಂಧು ಕೃಷ್ಣ ಪ ಯುಕ್ತಿಯಲಿ ನಿನ್ನಂಥ ದೇವರನು ನಾಕಾಣೆ ಸತ್ಯವತಿ ಸುತÀನೆ ಕಾಯೋ ಕೃಷ್ಣ ಅ.ಪ. ಆನಂದತೀರ್ಥ ಮುನಿಯ ಧ್ಯಾನಿಪರ ಸಂಗ | ಆನಂದದಲಿ ನಿಲಿಸೊ ಕೃಷ್ಣ || ದೀನಜನ ಮಂದಾರ ನೀನೆಂದು ನಂಬಿದೆನೊ | ಸಾನುರಾಗದಲಿ ಕಾಯೋ ಕೃಷ್ಣ 1 ಕೆಟ್ಟ ಜನರ ಸಂಗ ಇಷ್ಟು ದಿನವೂ ಮಾಡಿ | ಭ್ರಷ್ಟನಾಗಿ ಪೋದೆನೋ ಕೃಷ್ಣ || ಬೆಟ್ಟದೊಡೆಯನೆ ನಿನ್ನ ಮುಟ್ಟಿ ಭಜಿಸುವ ಭಾಗ್ಯ | ಇಷ್ಟಗಳ ಎನಗೆ ಕೊಡಿಸೋ ಕೃಷ್ಣ 2 ಅಜಜನಕ ಗಜವರದ ಭುಜಗಶಯನನೆ ನಿನ್ನ | ಭಜಿಪ ಭಾಗ್ಯವನೆ ಕೊಡಿಸೊ ಕೃಷ್ಣ || ನಿಜವಾಗಿ ನಿನ್ಹೊರುತು ಸಲಹುವರ ನಾ ಕಾಣೆ |ವಿಜಯವಿಠ್ಠಲರೇಯ ಕೃಷ್ಣ 3
--------------
ವಿಜಯದಾಸ
ಯತಿವರೇಣ್ಯರ ಮನುಜ ಸತತ ಭಜಿಸೆಲೊ ಪ ಸತತ ವಿಮಲ ಚರಿತ ಸತ್ಯವತಿಯ ಸುತರ ಮನವರಿತ ಅ.ಪ ಅಜಜನಕನ ಮಹಿಮೆ ಮರೆತು ಸುಜನರೆಲ್ಲ ಬಳಲುತಲಿರೆ ಭುಜಗಶಯನನಾಜ್ಞೆಯಿಂದ ರಜತಪುರದೊಳವತರಿಸಿದ 1 ವಾಸುದೇವ ನಾಮದಿಂದ ಶೈಶವವನು ಕಳೆದು ತುರಿಯ ಆಶ್ರಮವನು ಸ್ವೀಕರಿಸಿದ 2 ಜೀರ್ಣವಾದ ನಿಗಮಾರ್ಥಗಳ ನಿರ್ಣಯಿಸಿದ ಜ್ಞಾನಾನಂದ ಪೂರ್ಣವ್ಯಾಸರೊಳ್ ಶ್ರವಣಮಾಡಿ ಪೂರ್ಣಪ್ರಜ್ಞರಾಗಿ ಮೆರೆದ3 ನರಿಯುತಕುತಿಗಳಿಂದ ಬೋಧಿಪ ದುರುಳವಾದಗಳನು ಮುರಿದು ಹರಿಸರ್ವೋತ್ತಮನೆಂದರುಹಿದ4 ಶುಕ್ತಿರಜತ ಜ್ಞಾನದಂತೆ ವಿಶ್ವವೆಲ್ಲ ಮಿಥ್ಯಾವೆಂಬೊ ಯುಕ್ತಿಗಳನೆ ಖಂಡಿಸಿ ಜಗತ್ ಸತ್ಯವೆಂದು ದೃಢದಿ ತೋರಿದ 5 ಬ್ರಹ್ಮನು ಗುಣಶೂನ್ಯನೆಂದು ದುರ್ಮತಗಳ ಹರಡುವವರ ಹಮ್ಮು ಮುರಿದು ಜಗದಿ ಶಾಸ್ತ್ರ ಮರ್ಮಗಳನು ವಿವರಿಸಿದ 6 ದೂಷ್ಯವಾದ ಇಪ್ಪತ್ತೊಂದು ಭಾಷ್ಯಗಳನು ಮುರಿದು ಶುದ್ಧ ಸಾರ ಪೇಳಿದ 7 ಶ್ರವಣ ಮನನ ಧ್ಯಾನಗಳಿಂ ಸಿರಿರಮಣನ ಜ್ಞಾನ ಪೊಂದಿ ವರ ಕರುಣವ ಪಡೆಯುವುದೇ ನಿರತ ಸುಖಕೆ ಪಥವೆಂದರುಹಿದ 8 ಹನುಮ ಭೀಮ ಮಧ್ವ ರೂಪದಿ ರಾಮ ಕೃಷ್ಣ ವೇದವ್ಯಾಸರ ನಿರತ ಸೇವೆ ಮಾಡಿ ಶ್ರೀಹರಿಯೊಲಿಮೆಯಿಂದ ಪ್ರಸನ್ನರಾದ 9
--------------
ವಿದ್ಯಾಪ್ರಸನ್ನತೀರ್ಥರು
ರಂಗನಾಥನ ನೋಡುವ ಬನ್ನಿ ಶ್ರೀ- ಪ ರಂಗನ ದಿವ್ಯ ವಿಮಾನದಲ್ಲಿಹನಅ.ಪ. ಕಮನೀಯಗಾತ್ರನ ಕರುಣಾಂತರಂಗನಕಾಮಿತಾರ್ಥವೀವ ಕಲ್ಪವೃಕ್ಷನಕಮಲದಳನೇತ್ರನ ಕಸ್ತೂರಿ ರಂಗನಕಾಮಧೇನು ಕಾವೇರಿ ರಂಗನ1 ವಾಸುಕಿಶಯನನ ವಾರಿಧಿನಿಲಯನವಾಸುದೇವ ವಾರಿಜನಾಭನವಾಸವಾದಿ ಭಕ್ತ ಹೃದಯಾಂಬುಜದಲ್ಲಿವಾಸವಾಗಿರುತಿಹ ವಸುದೇವಸುತನ2 ಮಂಗಳಗಾತ್ರನ ಮಂಜುಳಭಾಷನಗಂಗಾಜನಕ ಅಜಜನಕನಸಂಗೀತಲೋಲನ ಸಾಧುಸಮ್ಮತನರಂಗವಿಠಲ ರಾಜೀವನೇತ್ರನ 3
--------------
ಶ್ರೀಪಾದರಾಜರು
ಸರಿಯೆ ಮರೆವುದು ಮುರಹರ ಪ ಚರಣ ಸೇವಕರ ದಾಸನ ಮುರಹರ ಅ.ಪ ಶರಣಾಗತಜನ ಭರಣನೆಂದರಿತು ನಾ ಚರಣ ಕಮಲಗಳಿಗೆರಗಿದೆನೊ ಕರುಣಾಮಯ ಕಾರಣ ಕಾರಣ ಹರಣ ಮಾಡದೆ 1 ಗಜವರನನು ಕಾಯ್ದ ನಿಜಚರಿತೆಯ ಸದಾ ಭಜಿಸುತಿರುವೆನೊ ಅಜಜನಕ ಸುಜನೋದ್ಧಾರ ತ್ಯಜಿಸದಿರೆಲೊ ಎನ್ನ ಭುಜಪುಂಗರಿಪು ಧ್ವಜ ಹರಿ ಎನ್ನನು 2 ಎನ್ನಲಿ ದಯದಿ ಪ್ರಸನ್ನನಾಗೊ ನಿನ್ನ ಸೇವಕನನು ಧನ್ಯನ ಮಾಡದೆ 3
--------------
ವಿದ್ಯಾಪ್ರಸನ್ನತೀರ್ಥರು
ನಿಜವಿರಬೇಕು ಸಜ್ಜನರಿಗೆ ಒಂದು ಪಅಜಜನಕಾನೆ ಈ ತ್ರಿಜಗಕೆ ಒಡೆಯನೆಂದು ಅ.ಪಉದಯಾಸ್ತಮಾನ ಮಾಡುವ ವ್ಯಾಪಾರವುಪದುಮಾಕ್ಷ ಕೃಷ್ಣನ ಸೇವೆಯೆಂದುಸುದತಿಯೊಡನೆ ಕೂಡಿ ಮಧುರ ಮಾತುಗಳಾಡಿಮಧುವೈರಿಚರಿತೆಯ ಮುದದಿ ಕೇಳುವಂಥ1ಮಡದಿ ಮಕ್ಕಳು ತನ್ನ ಒಡಹುಟ್ಟಿದವರೆಲ್ಲಒಡೆಯನ ಅಡಿಗೆ ಸೇವಕರು ಎಂದುದೃಢದಿ ತಿಳಿದು ಮೃಡನೊಡೆಯನ ಪಾದವಬಿಡದೆ ಭಜಿಸುವಂಥ ದೃಢ ಬುದ್ಧಿ ಎಂಬುವ 2ಮಾತಾಪಿತರು ಸುತ ಭ್ರಾತರಿಷ್ಟಾಬಂಧುವ್ರಾತರೆಲ್ಲರು ಹರಿಗೆ ದೂತರೆಂದುಮಾತುಳಾಂತಕತಂದೆಮುದ್ದುಮೋಹನವಿಠಲಖ್ಯಾತಾನೆಂದು ಪ್ರೀತಿ ಪೊಂದುವುದಕ್ಕೆ 3
--------------
ತಂದೆ ಮುದ್ದುಮೋಹನ ವಿಠಲರು