ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೆಚ್ಚಕುಂಟು ನಮಗೆ ಅಚ್ಯುತನಾಮ ನಿಶ್ಚಯದ ಧನವು ಧ್ರುವ ವೆಚ್ಚಮಾಡಿದರೆಂದಿಗೆ ಅಚ್ಚಳಿಯದು ನಿಶ್ಚಯದ ಬದಕು ಬಚ್ಚಿಟ್ಟುಕೊಂಡು ನಿಜ ಎಚ್ಚರಿಕಿಂದ ನಿಶ್ಚಿಂತದಲಿ ಉಂಬೆನು 1 ಸಂಚಿತ ಧನವು ಬಡತನವನು ಹಿಂಗಿಸಿತು ಒಡಿಯನಖಂಡ ಕೃಪೆಯಿಂದಲಿ 2 ಸಾದ್ಯವಾಯಿತು ಎನಗೆ ಸದ್ಗುರು ಕೃಪೆಯಿಂದ ನಿಜಧನವು ಮಾಡಿ ಸಾಧಿಸೊಕೊಂಬುವದು 3 ಕಟ್ಟಬಿಡಲಾಗುದು ವಿಟ್ಟಿ ಹ್ಯಧನಕೊಟ್ಟರೆಂದಿಗೆ ತೀರದು ಇಟ್ಟಿಹ ತನುಮನದಲಿ ಘಟ್ಯಾಗಿ ಕೇಳಿರೊ ಈ ಮಾತವ 4 ಅರುಹು ಅಂಜನವಿಟ್ಟಿ ತೋರಿದ ಗುರುಕರದಲಿ ಈ ಧನವು ಹರುಷವಾಯಿತು ಎನಗೆ ಧರೆಯೊಳು ತರಳಮಹಿಪತಿಗೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಹುಚ್ಚು ಹಿಡಿಯಬೇಕು ಭಜನೆಯ ರಚ್ಚೆ ತೊಡಗ ಬೇಕು ಪ [ಮೆಚ್ಚುತ] ಅಚ್ಯುತನಾಮವ ಉಚ್ಚರಿಸುತಲಿರೆ ಕಿಚ್ಚೂ ಮಂಜಹುದು ಅ.ಪ ನೇರುತಲಿರಬೇಕು ಊರುಹೆಜ್ಜೆಗೂ ನಾರಾಯಣ ನಾಮೋ ಚ್ಚಾರದ ಹಸಿವು ಬಾಯಾರಿಕೆಯಾಗುವತನಕ 1 ಕೀರ್ತನೆಯಲಿ ಮುಳುಗಿ ಕೃಷ್ಣನ ಮೂರ್ತಿಯ ಕಾಣುತಲಿ ಪಾರ್ಥಸಾರಥಿಯವ ಅನಾಥರಕ್ಷಕನೆಂಬ ಕೀರ್ತಿಯನಾಂತ ಮಾಂಗಿರಿಯ ಭಜನೆಯಾ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಾಲಗೆ ನಾಲಗೆ ನಾಲಗೆ -ಸಿರಿ - |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಲೋಲನ ನೆನೆ ಕಾಣೊ ನಾಲಗೆ ಪ.ವಾಸುದೇವನ ನಾಮ ನಾಲಗೆ - ನೀಲೇಸಾಗಿ ನೆನೆ ಕಾಣೊ ನಾಲಗೆ ||ಆಸೆಯೊಳಗೆ ಬಿದ್ದು ಮೋಸ ಹೋಗಲು ಬೇಡ |ಕೇಶವನ ನಾಮವ ನೆನೆ ಕಾಣೊ ಮರುಳೆ 1ಮಾತನಾಡುವಲ್ಲಿ ನಾಲಗೆ - ನೀ ಅ - |ನೀತಿ ನುಡಿಯದಿರು ನಾಲಗೆ ||ಆತನ ನಾಮವ ಗೀತದಿ ಪಾಡುತ |ಸೀತಾಪತಿ ರಘುನಾಥನ ನೆನೆ ಕಾಣೊ 2ಅಚ್ಯುತನಾಮವ ನಾಲಗೆ ನೀ - |ಬಿಚ್ಚಿಟ್ಟ ನೆನೆ ಕಾಣೊ ನಾಲಗೆ ||ನೆಚ್ಚಿ ಕೆಡಲಿ ಬೇಡನಿಚ್ಚ ಶರೀರವ |ಅಚ್ಯುತನಾಮವ ನೆನೆ ಕಾಣೊ ಮರುಳೆ 3ನನ್ನದು ತನ್ನದು ನಾಲಗೆ - ನೀ- |ನೆನ್ನದಲಿರು ಕಾಣೊ ನಾಲಗೆ |ಇನ್ನು ಮೂರು ದಿನದೀ ಸಂಸಾರದಿ |ಪನ್ನಗಶಯನನ ನೆನೆ ಕಾಣೊ ಮರುಳೆ 4ಅನುದಿನ ಹರಿನಾಮ ನಾಲಗೆ - ನೀ|ನೆನೆಯುತಿರು ಕಾಣೊ ನಾಲಗೆ ||ಘನಮಹಿಮ ನಮ್ಮ ಪುರಂದರವಿಠಲನ |ಕ್ಷಣ ಕ್ಷಣಕೊಮ್ಮೆ ನೆನೆ ಕಾಣೊ ಮರುಳೆ 5
--------------
ಪುರಂದರದಾಸರು