ದುಗ್ಗಾಣಿಯು ದೊಡ್ಡದಲ್ಲಾ ನಿನ್ನ
ಪೆಗ್ಗೆಗೆ ಯವiನಾಳು ಹೊರಿಸ್ಯಾರು ಕಲ್ಲಾ ಪ
ಬಗ್ಗಿಸಿ ಆರೆಂಟು ನುಗ್ಗಿ ನೋಡಿ ಬರುವ
ಪೆಗ್ಗೆಯನಳಿದವರ ಅಗ್ಗದಿಂದಾಡಿದರು ಅ.ಪ
ಒಂದೆರಡು ಮೂರೆಂಬ ಅಂದವು ಗುರುವಿನೊಳು
ಚಂದದಿಂ ಕೇಳಿಕೊಳ್ಳೆಲೊ ಮಂಕುಜೀವಿ
ಮುಂದೀಗ ಬರುವಂಥ ದುಂದುಗಾರರ ಕಂಡು
ಕೊಂದುಹಾಕಲು ಚಂದ್ರಾಯುಧವ ಹಿಡಿದವಗೆ 1
ಒಂಬತ್ತು ಗೇಟಿನಾ ಮೋಟದೊಳು ನೋಡಯ್ಯ
ಅಂಬಿಹರುಳುವಂತ ದುಂಬಿಗಳ ಕಾಟಾ
ಅಂಬಾರಿಯೇರಲು ನಂಬೀಗೆ ಕೊಟ್ಟಿರ್ಪ
ಶಂಭುನುತ ಶ್ರೀ ತುಲಸಿ ಕಂಬವ ಹಿಡಿದವಗೆ2