ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಪನ್ನ ರಕ್ಷಕ ಎನ್ನ ಪಾಲಿಸೊ ಪ. ಪನ್ನಗಾದ್ರಿನಿವಾಸ ಸಂಪನ್ನ ಶ್ರೀಶಾ ಶ್ರೀನಿವಾಸ ಅ.ಪ. ಆದಿ ಮೂರುತಿ ವೇದ ವಂದ್ಯ ಪಾದ ನಂಬಿದೆ ಅಗಾಧರೂಪ ನಾರಸಿಂಹ ಆದರದಿಂದ ಮೋದ ಕೊಡುತ ಎನ್ನ ಪಾಲಿಸು 1 ನೊಂದೆನಯ್ಯ ಈ ಭವದಿ ಸಿಲುಕಿ ತಂದೆ ಎನ್ನ ಕಾವರಿಲ್ಲ ಬಂಧ ಬಿಡಿಸಿ ಈ ಭವದಿಂದ ನಿನ್ನ ಸಂದರುಶನವಿತ್ತು ಸಲಹಿ ಎನ್ನ 2 ನಿನ್ನ ನಂಬಿದ ಭಕ್ತರ ಪೊರೆಯೆ ಇನ್ನು ಸಂಶಯವ್ಯಾಕೊ ದೇವಾ ಚೆನ್ನಗಿರಿಯ ವೆಂಕಟೇಶಾ ಮನ್ನಿಸೆನ್ನ ಶ್ರೀ ಶ್ರೀನಿವಾಸ ಎನ್ನ 3
--------------
ಸರಸ್ವತಿ ಬಾಯಿ