ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅ. ಮುಂಡಿಗೆಗಳು ಪೌರಾಣಿಕ ವಾವೆವರಸೆಯ ಮುಂಡಿಗೆಗಳು 254 ಇಂದು ನೀ ಕರೆದು ತಾರೆ - ಬಾರದೆ ಶ್ರೀಗೋ-ವಿಂದ ತಾ ಮುನಿದಿಹರೆ - ವಿರಹ ಬೇಗೆಯಲಿಬೆಂದು ಸೈರಿಸಲಾರೆ - ಸಖಿ, ನೀನು ತಂದು ತೋರೆ ಪ ನೊಂದರೂ ಮನದಾನಂದದಿಂದನಂದನಂದನನೆಂದು ಸೈರಿಸಿಎಂದಿಗೂ ಅಗಲಿರಲಾರೆ ಕರೆತಂದುಹೊಂದುಗೂಡಿಸೆ ಮಂದಗಮನೆ ಅ ಅಮೃತ ಗಜ ಉನ್ಮತ್ತಕಾಲಿನಿಂದಲಿ ಕೊಲುವ ರೂಪದಿಕಾಲಿನಲಿ ರಿಪುವನು ಸೀಳಿದಕಾಲಿನಲಿ ತಾನಳೆದ ಮೇದಿನಿಕಾಲಿನಲಿ ನಡೆದ ಭಾರ್ಗವಕಾಲಿನಲಿ ವನವಾಸ ಪೋದನಕಾಲಿನಲಿ ಕಾಳಿಯನ ಮರ್ದಿಸಿದನಕಾಲಿನಲಿ ತ್ರಿಪುರರ ಗೆಲಿದನಕಾಲಿಗೆರಗುವೆ ತೇಜಿರೂಢನ 1 ಎವೆಯಿಕ್ಕದೆ ನೋಡಿದ - ತಲೆಯ ತಗ್ಗಿಸಿಕವಲು ಕೋರೆದಾಡೆಯೊಳಾಡಿದ - ಕಂಬದಿ ಮೂಡಿದತವಕದಿಂದಲಿ ಬೇಡಿದ - ಭೂಭುಜರ ಕಡಿದಶಿವನ ಬಿಲ್ಲನು ಮುರಿದ _ ದೇವಕಿಕುವರ ನಗ್ನ ಹಯವನೇರಿದವಿವಿಧಾಬ್ಧಿಯೊಳಾಡಿ ಗಿರಿಧರಸವಿದು ಬೇರನು ಬಾಲಗೊಲಿದನಅವನಿ ಬೇಡಿ ಕೊಡಲಿ ಪಿಡಿದನಸವರಿ ದಶಶಿರನ ಬೆಣ್ಣೆ ಕದ್ದನಯುವತಿಯರ ವ್ರತಗೆಡಿಸಿ ಕುದುರೆಯ ಹವಣುಗತಿಯಲಿ ಏರಿದಾತನ2 ಮತ್ಸ್ಯ ಸೂಕರ ವಿಪ್ರ ಕೂರ್ಮ ವರಹನರಹರಿ ದ್ವಿಜ ಕೊರಳ ಕೊಯ್ದವನ ನೆಲಮಗಳ ವರಶೌರಿ ಬುದ್ಧನ ತುರಗವೇರಿದ ಆದಿಕೇಶವನ3
--------------
ಕನಕದಾಸ
ಅಗಲಿರಲಾರೆನೊ ಹರಿಯೆ ನಿನ್ನನು ಪ ಹಗಲು ಇರಳು ಸಮ್ಮೊಗದಲಿರುತಿಹ ಮಿಗೆ ಭಾಗ್ಯವ ಕೊಡೊ ನಗೆಮೊಗದರಸನೆ ಅ.ಪ. ಅನುದಿನ ನಿನ್ನಯ ಚರಣ ವನಜಕೆ ಮಣಿಯುವುದೆನಗಾಭರಣ ಅನಿಮಿಷರೊಡೆಯನೆ ಅನಿಮಿತ್ತ ಬಂಧುವೆ ಪ್ರಣತ ಜನ ಮಂದಾರ ಮುಕುಂದನೇ 1 ಮಾರ ಜನಕ ಎನ್ನ ಕರುಣದ ಪಾರ ಪ್ರಭುವರೇಣ್ಯ ಸಾರಸನಯನ ಉದಾರ ಹೃದಯ ಗಂ ಭೀರ ಗುಣಾಂಬುಧಿ ಸಾರಸನಾಭನೇ 2 ಮಂಗಳಾಂಗ ಹರಿಯೇ- ತವಪದ ಭೃಂಗನೆನಿಸೊ ದೊರೆಯೆ ರಥಾಂಗ ಪಾಣಿ ಭವ ಭಂಗ ಕರಿಗಿರಿ ನೃಸಿಂಗ ಶುಭಾಂಗನೆ 3
--------------
ವರಾವಾಣಿರಾಮರಾಯದಾಸರು
ಹ್ಯಾಗೆ ಒಲಿಯುವನೊ ಎನ್ನೊಡೆಯ ರಂಗ ಹ್ಯಾಗೆ ಒಲಿಯುವನೊ ಪ ಹ್ಯಾಗೆ ಒಲಿಯುವ ಜಾಣೆ ಪೇಳಮ್ಮ ನಾಗಶಾಯಿ ನಿಗಮಾಗಮೊಂದಿತ ರಾಘವೇಶನು ಬೇಗ ಒಲಿಯದಿರೆ ನೀಗುವೆನು ಪ್ರಾಣ ಕೇಳೆ ಸಖಿಯೆಅ.ಪ ಧಣಿಯು ಇಲ್ಲದ ದುರ್ದೈವ ಬಾಳು ಹೆಣನ ಸಮವಿದು ಮನ್ನಿಸೆ ಕೆಳದಿ ಗಣನೆಯಿಲ್ಲದ ಜನಮವ್ಯಾಕಿದು ಸನಕಸನಂದರೆಣಿಕೆಯಿಲ್ಲದೆ ಮಣಿದು ಆತಗೆ ಧನ್ಯರಾದದ್ದು ನೆನೆಸಿ ಮನದೊಂದು ದಿನಸುವಾಗುವುದು ಚಿನಮಯಾತ್ಮನ ಕಾಣದಿರಲಾರೆ 1 ನೀರೆ ಬೇಗಿನ್ನು ಕರೆತಂದು ತೋರೆ ಸಾರಸಾಕ್ಷನ್ನ ಅಗಲಿರಲಾರೆ ವಾರಿಧಿಶಾಯಿನ್ನ ಹರಣದೊಡೆಯನ್ನ ಮಾರ ಸುಂದರಪಾರ ಮಹಿಮನ ಬಾರಿಬಾರಿಗೆ ಸ್ಮರಿಸಿ ಮನ ಬಲು ಘೋರ ಬಡುತದೆ ವಾರಿಜಾಕ್ಷಿ ಕರೆ ತಾರೆ ಶೀಘ್ರದಿ ನಾರಸಿಂಹನ 2 ಕಡಲೊಳಿರುವನೋ ದೃಢದಿ ಕರೆಯಲು ಒಡನೆ ಬರುವನೋ ಜಡಜಾಕ್ಷಿ ಕೇಳೆ ಜಡಜನಾಭನೋ ದೃಢಕರೊಡೆಯನೋ ಬಿಡದೆ ಆತಗೆ ಮಿಡುಕಿ ಮಿಡುಕಿ ಹಿಡಿಕಿಯಾಯಿತು ದೇಹ ಸೊರಗಿ ಒಡೆಯ ಶ್ರೀರಾಮನಡಿಗೆ ಹೊಂದಿ ನಾ ತೊಡರಿನೊಳಗಿಂದ ಕಡೆಗೆ ನಿಲ್ಲುವೆ 3
--------------
ರಾಮದಾಸರು