ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರಾರಮಣನ ಮಂದಿರದಲ್ಲೆ ನಾ- ರಂದ ತಾ ಬರುತಿರಲು ಕಂಡು ಕೃಷ್ಣನು ಕರೆತಂದು ಮನ್ನಿಸಿ ಬಂದಕಾರಣವೇನೆಂದನು 1 ಕಾರಣವೇನುಂಟು ಕಾರಣಪುರುಷನ ಕಾಣಬೇಕೆಂದೆನುತ ಕಾಮಿಸಿಬಂದೆನೊ ಕೊರಳ ತುಳಸಿ ಮಾಲೆ ನೀಡೊ ನೀ ಎನಗೆಂದನು2 ಏನು ಬೇಡಿದರು ನಾ ಕÉೂಡುವೆನು ನಾರಂದ ಪ್ರಾಣಪದಕ ತುಳಸಿ ನೀಡಲಾರೆನೊ ಮುತ್ತಿನ್ಹಾರವ ಕೊಡುವೆ- ನೆಂದು ಹೇಳುತಿದ್ದನು ಹರಿಯು 3 ನೀಡದಿದ್ದರೆ ನಾನು ಬೇಡಿ ಬಿಡುವನಲ್ಲ ನೋಡಿಕೋಯೆಂದೆನುತ ಆಡಿದ ಮಾತು ತಪ್ಪುವರುಂಟೆ ಶ್ರೀಕೃಷ್ಣ ಹೋಗಿಬರುವೆನೆಂದನು 4 ಸತ್ಯಭಾಮೆಯ ಮನೆ ಹೊಕ್ಕನು ನಾರಂದ ಹೆತ್ತಮ್ಮ ಕೇಳೆನುತ ಸುತ್ತಿಬಂದೆನು ಸುರಲೋಕದ ವಾರ್ತೆಯ ವಿಸ್ತರಿಸ್ಹೇಳುವೆನು 5 ಇಂದ್ರಲೋಕದಲಿ ದೇವೇಂದ್ರ ಶಚಿಯ ಕೂಡ್ಯಾ ನಂದದಿ ಕುಳಿತಿದ್ದನೆ ಅ- ಲ್ಲಿಂದ ಕೈಲಾಸ ಮಾರುದ್ರ ಪಾರ್ವತಿದೇವಿ ಚೆಂದವನ್ವರಣಿಸಲೆ 6 ಸತ್ಯಲೋಕದಿ ಸರಸ್ವತಿ ಕೂಡಿ ಬ್ರಹ್ಮ ಭಾ ಳುತ್ಸವದಿಂದಿದ್ದನೆ ಹಸ್ತಿನಾವತಿಯ ಪಾಂಡವರು ದ್ರೌಪದಿದೇವಿ ಅರ್ಥಿಯ ನೋಡಿ ಬಂದೆ 7 ದ್ವಾರಾವತಿಗೆ ಬಂದೆ ದೇವಿ ನಿಮ್ಮರಸನು ನಾರಿ ರುಕ್ಮಿಣಿ ಸಹಿತ ಭಾಳ ಸಂಭ್ರಮದಿಂದ ಕುಳಿತಿದ್ದ ಕಣ್ಹಬ್ಬವಾಗಿ ನಾ ಬಂದೆನಿಲ್ಲೆ 8 ಕರೆದು ರುಕ್ಮಿಣಿ ಕರದಿಂದೆ ಆಲಂಗಿಸಿ ತೊಡೆಯಮ್ಯಾಲಿಟ್ಟಿದ್ದನೆ ಅರಳುಮಲ್ಲಿಗೆ ತುರುವಿ(ಬೀ) ನಲ್ಲಿಟ್ಟು ನಿನಗಿನ್ನು ಸರಿಯಿಲ್ಲವೆಂತೆಂಬನೆ 9 ಹಾರಪದಕ ಇಬ್ಬರಿಟ್ಟಾಭರಣ ಬ್ಯಾರೆ ಬ್ಯಾರಾಗಿ ತೋರವಲ್ಲೆ ಸೂರ್ಯಚಂದ್ರರು ಕೂಡಿದಂಥ ಮುಖವು ನೋಡಿ ನಾ ಬೆರಗಾಗಿದ್ದೆನೆ 10 ಸತ್ಯಭಾಮೆಯೆ ನಿನ್ನ ಹೆತ್ತ ತಾಯಿತಂದೆ ಮಿರ್ತಾಗಿದ್ದರೆ ನಿನಗೆ ಕೊಟ್ಟರೀ ಕಪಟನಾಟಕ ದಯಹೀನಗಿ- ನ್ನೆಷ್ಟು ನಾ ಸೈರಿಸಲೆ 11 ಒಂದೊಂದು ಗುಣಗಳ ವರಣಿಸಲಿಕ್ಕೆ ಹ ನ್ನೊಂದೊ (ದ್ವ?) ರುಷವು ಸಾಲದೆ ಕಂಡು ಬಂದ್ವಾರ್ತೆಯ ಖರೆಯ ನಾ ಹೇಳುವೆ ಸಂದೇಹ ಮಾಡದಿರೆ 12 ಕೇಳಿ ಸತ್ಯಭಾಮೆ ತಾಳಲಾರದೆ ಮುನಿ ಪಾದದ ಮ್ಯಾಲೆ ಬಿದ್ದು ಹೇಳಿ ಉಪಾಯ ಮುಂದಕೆ ಪೋಗೊ ಶ್ರೀ- ಕೃಷ್ಣ ತಾನೊಲಿದಿರುವಂದದಿ13 ದಾನವಾಂತಕÀನ ನೀ ದಾನವÀ ಮಾಡಲು ದಾವಜನ್ಮಕÀು ನಿನ್ನನು ತಾನಗಲದೆ ಮುಂದೆ ಸೇರಿಕೊಂಡಿರುವೊ ಉಪಾಯ ಹೇಳುವೆನೆಂದನು 14 ರಂಗರಾಯನ ಕರೆತಂದುಕೊಟ್ಟವರಿಗೆ ಹಿಂಗದೆ ಸೌಭಾಗ್ಯವ ಎಂದೆಂದಿಗವರ ರಕ್ಷಿಸುವೋನೆಂದೆನುತಲಿ ಅಂಗನೆಯರನಟ್ಟಿದಳು 15 ದೂತೇರ ಸಹಿತಾಗಿ ಬಂದು ತಾ ಭರದಿಂದೆ ಪ್ರೀತಿಲೆ ಸತ್ಯಭಾಮ ಮಾತುಳಾಂತಕ ನಮ್ಮ ಮನೆಗೆ ಬಾರೆನುತ ಶ್ರೀ- ನಾಥನೆಯೇಳೆಂದಳು16 ಮಡದಿ ರುಕ್ಮಿಣಿ ಭಾಮೆ ಮಂದಿರಕ್ಕೊ ್ಹೀಗುವೆ ಕಡುಕೋಪ ಮಾಡದಿರೆ ತಡೆಯದೆ ನಾಳೆ ಬರುವೆನೆಂದು ಶ್ರೀಕೃಷ್ಣ ಗ- ರುಡನ ಹೆಗಲೇರಿದ 17 ವಾರಕಾಂತೆಯರು ಬಾಜಾರ ಮಧ್ಯದಿ ಸೋಳಸಾವಿರ ಸತಿಯರನೆ ವಾರೆನೋಟದಿ ನೋಡಿ ನಗುತ ಸತ್ಯಭಾಮೆ ಬಾಗಿಲ ಮುಂದಿಳಿದ 18 ಎದುರಿಗೆ ನಿಂತು ತಾ ಚೆದುರೆ ಸತ್ಯಭಾಮೆ ಪದುಮ ಪಾದಕೆ ಎರಗಿ ಮುದದಿಂದ ಮುದ್ದು ಶ್ರೀಕೃಷ್ಣನ ಮುಂಗೈಯ್ಯ ಪಿಡಿದು ತಾ ನಡೆದಳಾಗ 19 ಕೃಷ್ಣರಾಯನೆ ನಿನ್ನ ಕೊಟ್ಟೇನು ದಾ ನವ ಬಿಟ್ಟೆನ್ನ ಅಗಲದಂತೆ ಸತ್ಯಭಾಮೆಯ ನೋಡಿ ನಗುತ ಈ ಕಾರ್ಯ ಅ- ಗತ್ಯಮಾಡೆಂದೆನುತ 20 ಎರೆದು ಪೀತಾಂಬರವುಡಿಸಿ ಮಾಣ Âಕ್ಯದ ಆ- ಭರಣವ ತಂದಿಟ್ಟಳು ತರಿಸಿ ತಾಂಬೂಲ ದಕ್ಷಿಣೆಯನ್ನು ಬ್ರಾಂಬರ ಕÀರೆಸಿದಳಾಕ್ಷಣದಿ 21 ಆಚಾರ್ಯ ನೀವ್ ಬನ್ನಿ ವಾಸುದೇವನ ದಾನ ಈ ಕ್ಷಣದಲ್ಲೆ ಕೊಡುವೆ ನಾಶರಹಿತ ನಮ್ಮ ಮನೆಯೊಳಗಿರಲಿಕ್ಕೆ ಗ್ರಾಚಾರವೇನೆಂದರು 22 ವಿದ್ಯಾರ್ಥಿಗಳು ಬನ್ನಿ ಮುದ್ದು ಶ್ರೀಕೃಷ್ಣನ ವಿಧ್ಯುಕ್ತದಲಿ ಕೊಡುವೆ ಮೂರ್ಜಗದೊಡೆಯ ತಾ ಮಂದಭಾಗ್ಯರ ಮನೇಲಿದ್ದಾನ್ಯಾತಕೆ ಎಂದಾರೆ 23 ಭಟ್ಟರೆ ನೀವ್ ಬನ್ನಿ ಸೃಷ್ಟಿಪತಿಯ ದಾನ ಕೊಟ್ಟು ಬಿಡುವೆನೆಂದಳು ಅಷ್ಟದರಿದ್ರರಿಗಾಲಕ್ಷ್ಮೀವಲ್ಲಭ ದಕ್ಕುವೋನಲ್ಲೆಂದರು 24 ಯತಿಗಳೆ ನೀವ್ ಬನ್ನಿ ಪೃಥಿವಿಗೊಡೆಯ (ನನು) ಹಿತದಿ ದಾನವ ಕೊಡುವೆ ಗತಿಯಿಲ್ಲ ನಮಗೆ ಶ್ರೀಪತಿ ಸಲಹÀಲು ನಿನ್ನ ಪತಿ ಬ್ಯಾಡ ನಮಗೆಂದರು&
--------------
ಹರಪನಹಳ್ಳಿಭೀಮವ್ವ
ಗಟ್ಟಿ ಮನವ ಕೊಡೊ ಹರಿ ಹರಿ ಗಟ್ಟಿ ಮನವ ಕೊಡೊ ಪ ಸೃಷ್ಟಿಕರ್ತನೆ ನಿನ್ನ ಶಿಷ್ಟ ಪಾದದೆನಗೆ ನಿಷ್ಠೆ ಭಕ್ತಿಯ ನೀಡು ಬಿಟ್ಟು ಅಗಲದಂತೆ ಅ.ಪ ದುರಿತದೋಷಗಳು ಕಡಿದು ಬರುವ ಕಂಟಕವನ್ನು ಪರಹರಿಸೆನಗೆ ಅರಿವು ನಿಲಿಸಾತ್ಮನ ಕುರಹು ತಿಳಿಸುಸಿರಿವರನೆ ಕರುಣದಿ 1 ಚಲನವಲನಗಳನು ಕಳೆದು ನಿಲಿಸು ಜ್ಞಾನವನ್ನು ಹೊಲೆಯ ದೇಹದ ನೆಲೆಯ ತಿಳಿಸಿ ಎನ ಗಳುಕಿಸು ಭವದಾಸೆ ಘಳಿಲನೆ ಒಲಿದು 2 ತಾಪತ್ರಯಗಳನು ಛೇದಿಸಿ ಪಾಪಶೇಷಗಳನ್ನು ಲೋಪಮಾಡಿ ಇಹದ್ವ್ಯಾಪರದೊಳಗಿಂದ ನೀ ಪೊರೆ ಭವನಿರ್ಲೇಪನೆ ದಯದಿ 3 ಕಟ್ಟಿ ಕಾದುತ್ತಿರುವಸಂಸಾರ ಕೆಟ್ಟಬವಣೆಜನ ಬಟ್ಟ ಬಯಲು ಮಾಡಿಕೊಟ್ಟು ನಿಜಾನಂದ ಶಿಷ್ಟರೊಳಾಡಿಸೆನ್ನ ಸೃಷ್ಟೀಶ ದಯದಿಂ 4 ನೀನೆ ಕರುಣದಿಂದ ಬಿಡಿಸಯ್ಯ ಯೋನಿಮಾರ್ಗ ತಂದೆ ಧ್ಯಾನದಿರಿಸಿ ನಿನ್ನ ಮಾಣದ ಪದ ನೀಡು ದೀನದಯಾಳು ಶ್ರೀ ಜಾನಕಿರಾಮ 5
--------------
ರಾಮದಾಸರು
ಗುರುವೆ ನಿಮ್ಮಯ ಕರುಣ ವೃಕ್ಷ ನೆಳಲೊಹೊರತಾದ ಕಾರಣದಿ ಹೀನನಾದೆ ಪ ಉದ್ಧವ ಖ್ಯಾತಿ ದ್ರೋಣನು ಕಲಿಯುಗದಿ ನಾನಾ ||ಭೌತಿಕಗಳ ಧರಿಸಿ ಪ್ರಾರ್ಥಿಸಿದ ಸಜ್ಜನರಆರ್ತಗಳ ಪರಿಹರಿಸಿ ಸರ್ವಾರ್ಥಗರೆವ1 ಶರಧಿ ಮುಣುಗಿದ ಮಹಾಪರಮ ಕರುಣಾನಿಧಿಯ ದೇವಮಣಿಯೆ2 ನಿರ್ಜನರು 3 ಆವಾವ ಕಾಲದಲಿ ನಿನ್ನ ದಯದಿಂದಲ್ಲಿದೇವಾರ್ತಿಗಳನೈದು (ದಿ) ಸೌಖ್ಯಬಡುವೆ ||ಕಾವ ಕರುಣೆಯೆ ಎನ್ನ ಅವಗುಣಗಳೆಣಿಸದಲೆಸಾವಧಾನದಲೆನ್ನ ಸಲಹಬೇಕು4 ಬಾಲಕನ ಅಪರಾಧ ಅನಂತವಿರಲಿನ್ನುಪಾಲಿಸಬೇಕಯ್ಯ ನೈಜಗುರುವೆ ||ಪಾಲಸಾಗರಶಾಯಿ ಗುರು ವಿಜಯ ವಿಠ್ಠಲರೇಯಕಾಲಕಾಲಕೆ ಅಗಲದಂತೆ ವರವೀಯೋ 5
--------------
ಗುರುವಿಜಯವಿಠ್ಠಲರು
ತುಳಸಿ205ಎಲ್ಲಿ ಶ್ರೀ ತುಳಸಿಯ ವನವು |ಅಲ್ಲೊಪ್ಪುವರು ಸಿರಿ-ನಾರಾಯಣರು ಪಗಂಗೆ ಯಮುನೆ ಗೋದಾವರಿ ಕಾವೇರಿ |ಕಂಗೊಳಿಸುವ ಮಣಿಕರ್ಣಿಕೆಯು ||ತುಂಗಭದ್ರೆ ಕೃಷ್ಣವೇಣಿ ತೀರ್ಥಗಳೆಲ್ಲ |ಸಂಗಡಿಸುತ ವೃಕ್ಷಮೂಲದಲ್ಲಿರುವುವು 1ಸರಸಿಜಭವಭವಸುರಪಪಾವಕಚಂ-|ದಿರಸೂರ್ಯಮೊದಲಾದವರು ||ಸಿರಿರಮಣನ ಆಜೆÕಯಲಿ ಅಗಲದಂತೆ |ತರುಮಧ್ಯದೊಳುನಿತ್ಯನೆಲಸಿಪ್ಪರು2ಋಗ್ವೇದ ಯಜುರ್ವೇದಸಾಮಅಥರ್ವಣ |ಅಗ್ಗಳಿಸಿದ ವೇದಘೋಷಗಳು ||ಅಗ್ರಭಾಗದಲಿವೆ ಬೆಟ್ಟದೊಡೆಯನಲ್ಲಿ |ಶ್ರೀಘ್ರದಿ ಒಲಿವ ಶ್ರೀಪುರಂದರವಿಠಲ3
--------------
ಪುರಂದರದಾಸರು
ದೇವಿವರಲಕ್ಷ್ಮಿ ಭಕ್ತರ ಕಾಯ್ವಿಕರುಣದಿ ವರವ ನೀಡಿ ಪ.ಸಿಂಧುಶಯನನ ದಯೆಎಂದೆಂದು ಬಿಡದಂತೆಚಂದದಿ ಕರುಣಿಸೆ ಇಂದಿರೆÉ ನಮಗೆ 1ಮಂದಗಮನೆಯರು ತಂದಮಂದಾರಮಲ್ಲಿಗೆಗಂಧ ಕುಂಕುಮದಿಂದ ಚಂದಾಗಿ ಅರ್ಚಿಸೆದೇವಿ 2ಮಿತ್ರವಿಂದಾದಿಗಳಿಂದಮತ್ತೊಮ್ಮೆ ಲಕುಮಿಯೆಮುತ್ತು ರತ್ನದ ವಸ್ತ ವಸ್ತ್ರ ವೀಳ್ಯವ ಕೊಳ್ಳದೇವಿ 3ನಗಧರರಾಮೇಶನುಅಗಲದಂತೆ ನಮ್ಮಮುಗಿದೇವ ಕರಗಳ ನಗೆಮುಖದ ಗೌರಿ ನೀ ದೇವಿ 4
--------------
ಗಲಗಲಿಅವ್ವನವರು