ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವದೇವರಿಗುಂಟೀ ವೈಭವ ಪ ಸಾರ್ವಭೌಮ ನೀನೆ ಸಕಲ ಭಾವಜನಯ್ಯ ಅ.ಪ ಸಿರಿಯರೆಂಟುಮಂದಿ ನಿನಗೆ ಅರಸಿಯರು ಕರುಣಶರಧಿ ಸುರರು ಮೂವತ್ತು ಮೂರು ಕೋಟಿ ಚರಣಸೇವಕರಯ್ಯ ಹರಿಯೆ1 ಅನುದಿನವು ಎಡೆಬಿಡದೆ ಮನು ಸುಜನ ಸಂತತಿ ಘನವೇದಘೋಷದಿಂದ ನೆನೆದು ಪೂಜಿಪರಪರಿಮಿತ ಲೀಲೆ 2 ಕೋಟಿಸೂರ್ಯಪ್ರಕಾಶ ನಿನ್ನ ಆಟ ಬಲ್ಲವರಾರು ಜಗದಿ ಆಟವಾಡುವಿ ಅಗಮ್ಯಚರಿತ ಸಾಟಿಯಿಲ್ಲದೆ ಧನವ ಕಲಸಿ 3 ಕರೆಸಿ ಅಸಮಭಕುತ ಜನರ ವರವ ನೀಡಿ ಮುಡಿಪುಗೊಂಡು ಮೆರೆವಿ ಪರಮ ಉತ್ಸವದೊಡನೆ ಗಿರಿಯ ಭೂವೈಕುಂಠಮೆನಿಸಿ 4 ಕಿಂಕರ ಜನರ ಪೊರೆಯಲೋಸುಗ ವೆಂಕಟಾದ್ರಿಯಲ್ಲಿ ನಿಂದಿ ವೆಂಕಟೇಶ ಕಿಂಕರಜನರ ಸಂಕಟಹರ ಶ್ರೀರಾಮಪ್ರಭೋ 5
--------------
ರಾಮದಾಸರು