ಶ್ರೀಶ ಕರುಣಾಭೂಷ ಶ್ರೀನಿವಾಸ ರಕ್ಷಿಸು
ವೀಶಗಮನ ಪ.
ತಂದೆ ತಾಯಿ ಸಹಜ ಮುಖ್ಯ ಬಂಧ ಬಳಗವೆಲ್ಲವು ನೀ-
ಇಂದು ನಂಬಿದೆ
ಇಂದಿರೇಶ ತನ್ನ ಮನಕೆ ಬಂದ ತೆರವ ಮಾಳ್ಪ ಭವ-
ಸಿಂಧು ಪೊತ್ತ ನಿನ್ನ ದಾಸನೆಂದು ತಿಳಿದಾನಂದಗೊಳಿಸು 1
ನಿಗಮವೇದ್ಯ ನಿನ್ನೊಳಿರುವ ಅಘಟಿತಘಟನ ಶಕ್ತಿ
ಬಗೆಯ ತೋರಿ ಪೊರೆವಿ ಎನ್ನ ಮಗುವಿನಂದದಿ
ಅಗಣಿತಾನಂದ ಚಿದಾತ್ಮ ಜಗದಿ ನಿನ್ನ ಪೋಲ್ವ ಕರುಣಾ
ಳುಗಳನೆಲ್ಯೂ ಕಾಣೆ ಶಕ್ರಾದಿಗಳು ಸೇರುವರು ನಿನ್ನನೆ 2
ಸರಸಿಜಾಕ್ಷ ಪಾದಪದ್ಮ ಸ್ಮರಣೆ ಮಾತ್ರದಿಂದ ಸರ್ವ
ಪುರುಷಾರ್ಥಂಗಳೆಲ್ಲ ಸೇರಿ ಬರುವುದೆಂಬುದಾ
ಅರಿಯದಂಥ ಮೂಢರೆಲ್ಲ ಬರಿದೆ ಬಯಲು ಭ್ರಾಂತಿಗೊಳಿಸುವ
ಉರಗ ಶಿಖರವಾಸ ನೀನೆ ದೊರೆಯೆಂದು ನಾನೊರೆವೆ ಶ್ರೀಶ 3