ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಪಾಲಧರ ತ್ರಯತಾಪರಿಹಾರ ಭ ಜಿಪೆ ಕಾಪಾಡು ಕೃಪೆ ಪಾಲಿಸಿ ಪ ಅಪಾರ ಪತಿವ್ರತಾಶಾಪವಿಮೋಚನ ಗೋಪ ಗೋಪತಿ ನಮಿತ ಗೋಪಾಲನೊಲಿಸೆನಗೆ ಅ.ಪ ಅಗಜಾವಲ್ಲಭ ಸುಗುಣರಘದೂರ ಜಗದೊಡೆಯ ಮಗುವಿನ ಮೊರೆ ಪಾಲಿಸು ವಿನುತ ಅಗಣಿತಾಗಣಿತಮಹಿಮೆ ಬಗೆದೆನ್ನ ನುಡಿಯಾಲಿಸು ನಗಧರ ಖಗರೂಢ ಜಗರಕ್ಷ ಹರಿನಾಮ ಅಗಣಿತ ಮತಿ ನೀಡೊ 1 ಅಜಭವಸುರ ನಮಿತ ರಜತಾದ್ರಿಮಂದಿರ ನಿಜಜ್ಞಾನ ದಯಮಾಡೊ ಮೃಡ ಗಜಚರ್ಮಾಂಬರ ಜಗದ ಗೋಜು ಮುಂದೆನಗೆ ಬೇಡೊ ಸುಜನ ಸಂರಕ್ಷಕ ಪಾದ ನಿಜಧ್ಯಾನ ಸ್ಥಿರಕೊಡೋ 2 ಮೃತ್ಯುವಿಜಯ ಸತ್ಯ ಚಿತ್ತ ನಿರ್ಮಲ ನಿತ್ಯ ಸತ್ಯರ ಸಖ್ಯ ನೀಡೊ ಸತ್ಯಸದ್ಭಕ್ತಿನಿತ್ತು ಮತ್ರ್ಯರಿಂದುಳಿಸೆನ್ನ ಚಿತ್ತ ಪರಿಶುದ್ಧ ಮಾಡೊ ಭಕ್ತವತ್ಸಲ ನಿಜಮುಕ್ತಿದಾಯಕ ಮಮ ಕರ್ತ ಶ್ರೀರಾಮನ ಭಕ್ತನೆಂದೆನಿಸೆನ್ನ 3
--------------
ರಾಮದಾಸರು
ತಾತ್ವಿಕ ಹಿನ್ನೆಲೆ ಅಗಣಿತಾಗಣಿತ ಮಹಿಮ ಜಗದೊಳು ನಿಮ್ಮ ಬಗೆ ತಿಳಿಯುವರಾರಮಮ ಪ ಮಗನ ಮಗನಿಗೆ ಒಲಿದು ಮಗಳಧಾರೆಯನೆರದಿ ಮಗಳಮಗನ್ವೈರಿಯ ನಿಗಯಿಟ್ಟು ಸಲಹಿದಿ ಅ.ಪ ಓಂಕಾರದಾಚೆಗಿರ್ದ ಅಮಲರೂಪ ಓಂಕಾರದೊಳು ನೆಲೆಸಿದಿ ಅಂಕುರಿಸಕ್ಷರ ತ್ರಯಲಂಕಾರದಿಂ ಸೃಷ್ಟಿ ಸಂಕಲ್ಪಗೈದು ನಿಷ್ಕಲಂಕನೆಂದೆನಿಸಿದಿ 1 ಸೃಷ್ಟಿ ಉತ್ಪತ್ತಿಗೈದಿ ಉದರದಿ ಇಟ್ಟು ರಕ್ಷಕನೆಂದೆನಿಸಿದಿ ಶಿಕ್ಷಕೆನಿಸಿ ಸರ್ವಸಾಕ್ಷಿನೀನೆಯಾಗಿ ಮೋಕ್ಷ ನೀಡುವ ಮದಧ್ಯಕ್ಷನೆಂದೆನಿಸಿದಿ 2 ಮೇದಿನಿಗೆ ಪತಿಯೆನಿಸಿದಿ ದಾಸರ ಪ್ರಿಯ ಮೇದಿನಿಸುತೆ ಮದುವ್ಯಾದಿ ವೇದಸಮ್ಮತಗೈದಿ ಸಾಧುಜನಕಹುದಾದಿ ಆದಿಶ್ರೀರಾಮ ಮಮ ಬೌದ್ಧದೇವನಾದಿ 3
--------------
ರಾಮದಾಸರು
ಮನದಣಿ ನೋಡಿದೆನೊ ಸನಕಾದಿನಮಿತ ಮನದಣಿ ನೋಡಿದೆನು ದೃಢದಿ ಪ ನಿನಗೆ ಸರಿಯಿಲ್ಲ ಭುವನತ್ರಯದಿ ಮನಕೆ ಬೇಸರವಿಲ್ಲದನುದಿನ ತನುವನಪ್ಪಿಹಿಡಿದು ಭಕುತರ ಮನದ ವರಗಳನಡೆಸಿ ಸಲಹುವ ಕನಿಕರಾರ್ಣವ ವಿಠಲ ನಿನ್ನಡಿ ಅ.ಪ ಒಂದು ದಿನ ಆ ತ್ರೇತಾಯುಗದಲ್ಲಿ ಋಷಿಗಡಣ ಕೂಡಿ ಬಂದು ನಿಮ್ಮಯ ಚರಣಸನ್ನಿಧಿಲಿ ಭಯಭಕುತಿಯಿಂದ ವಂದಿಸಾಲಿಂಗನೆಯ ಕೋರುತಲಿ ಅಭಯ ಬೇಡುತಲಿ ನಿಂದ ಋಷಿಗಳಿಗ್ಹಲವು ಪರಿಯಲಿ ತಂದೆ ನೀ ಸಮ್ಮತವ ಪೇಳಿ ಬಂದು ದ್ವಾಪರಾಂತ್ಯಯುಗದಲಿ ಒಂದು ಅರಲವ ಅಗಲದಲೆ ನಿಮ್ಮ ಪೊಂದಿ ಆಲಿಂಗನವನೀಯುವೆ ನೆಂದು ವರವಿತ್ತ ವಿಠಲ ನಿಮ್ಮಡಿ 1 ಅಪಾರಮಹಿಮಜಾಲ ಅವತರಿತಿಸಿದಿ ದ್ವಾಪರಯುಗದಿ ಬಾಲಕೃಷ್ಣ ನೀನಾಗಿ ಶ್ರೀಪತಿ ಸುಜನಪಾಲ ದನುಜಕುಲಕಾಲ ಪಾಪಸಂಹಿತ ಅಮಿತಲೀಲ ಶಾಪಪರಿಹಾರ ವೇಣುಲೋಲ ತಾಪಸೋತ್ತಮರಿಷ್ಟ ನೀಡಲು ಗೋಪಿಕಾಸ್ತ್ರೀಯರೆನಿಸಿ ಪುಟ್ಟಿಸಿ ಗೌಪ್ಯದಾಲಿಂಗನವನಿತ್ತ ಭೂಪ ಭೂಪತಿ ವಿಠಲ ನಿಮ್ಮಡಿ 2 ಸುಗುಣ ಸಂತರಹೃದಯಸಂಚಾರ ದಾಸಾನುದಾಸರು ಪೊಗಳಿ ಭಜಿಸುವ ಗಾನಪ್ರಿಯಕರ ಮೌಲಕೌಸ್ತುಭ ಜಗದಜೀವನ ಪಾವನಾಕಾರ ಪರಮಸುಖಕರ ಅಗಣಿತಾಗಣಿತಮಹಿಮಭರಿತ ಪೊಗಳಲಳವೆ ನಿಮ್ಮ ಚರಿತ ತ್ರಿ ಜಗನಾಟಕ ಸುಲಭದಲಿ ನೀ ಅಗಲದನವರತಸಮ ಈ ಕಲಿ ಯುಗದಿ ಭಕ್ತರಿಗಾಲಿಂಗನೀಯುವ ನಿಗಮಗೋಚರ ವಿಠಲ ನಿನ್ನಡಿ 3 ಮಂದಹಾಸ ಮಂದರೋದ್ಧಾರ ಸುರಕಲ್ಪಧೇನು ಇಂದಿರೆಯರ ಪ್ರಾಣ ಮನೋಹರ ಹೇ ದೀನಬಂಧು ಸುಂದರಾಂಗ ಸುಗುಣಗುಣಹಾರ ಬಂಧನಿವಾರ ಸಿಂಧುಕಲಕಿದಪಾರ ಶೂರ ಕುಂದದೆ ಮೊರೆಕಾಯ್ದ ಸುರರ ಹೊಂದಿಭಜಿಸುವ ಭಕುತಜನಕಾ ನಂದ ನೀಡುತ ಚಂದನೋಡುತ ಸಿಂಧುನಿಲಯ ಮುಕ್ಕುಂದ ಮುರಹರಿ ಅಂದಮಾದ ವಿಠಲ ನಿಮ್ಮಡಿ 4 ಸುತ್ತಮುತ್ತ ಭಕ್ತರಾಲಯವು ಹಿಂಭಾಗದಲ್ಲಿ ಸತ್ಯಭಾಮ ರುಕ್ಮಿಣೀಕಾಂತನು ಮುಂಭಾಗದಲಿ ನಿತ್ಯನಿರ್ಮಲ ಚಂದ್ರಭಾಗಿನಿಯು ನಡುಮಧ್ಯ ರಂಗವು ಭಕ್ತಗೊಲಿದು ಭೂವೈಕುಂಠವ ಸತ್ಯವೆನಿಸಿ ಮೀರಿ ಮೆರೆವ ಭಕ್ತಜನರ ಕೈಯೆತ್ತಿ ಸಾರುವ ಪೃಥ್ವಿಗಧಿಕ ಮಹ ಪಂಢರಾಪುರ ಮುಕ್ತಿ ತವರೆಂಬ ಮಂದಿರದಲ್ಲಿ ಕರ್ತುಶ್ರೀರಾಮ ವಿಠಲ ನಿನ್ನಡಿ5
--------------
ರಾಮದಾಸರು