ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೆ ಚಂದಿರವದನೆ ಮಂದಗಮನೆ ಕಂದರ್ಪ ಕೋಟಿ ಲಾವಣ್ಯೆ ಪ ಮಂದನಾಗಿ ಭವಸಿಂಧುವಿಲಿ ಪೊಂದಿದೆ ಬಂದು ನೀ ಕರಪಿಡಿದು ಮುಂದಕೆ ಕರೆಯೆ ಅ.ಪ. ನಾಗವೇಣಿಯೆ ಸುರಶ್ರೇಣಿ ಅಗಣಿತಗುಣಮಣಿಯ ಹೊಗಳುವ ಮತಿ ನೀಡೆ ಕಲ್ಯಾಣಿ ಹಗಲಿರುಳು ನಡೆಯುವ ಬಗೆ ಬಗೆ ಕ್ರಿಯೆಗಳು ನಗಧರನೆ ಮಾಳ್ಪಾನೆಂಬ ಮಿಗೆ ಜ್ಞಾನ ಪಾಲಿಸೆ 1 ಸರಸಿಜೋದ್ಭವ ಮಾತೆ ವಿಖ್ಯಾತೆ ನಿಕರ ಸನ್ನುತೆ ಕಂಕಣಾಭರಣ ಭೂಷಿತೆ ಕರೆ ಕರೆಗೊಳಿಸುವ ಅಹಂ ಮಮತೆ ಶರಧಿಯು ತೆರೆಯಂತೆ ಬರುವುದು ಮರೆಸಿ ನೀ ಪೊರೆಯೆ 2 ಹರಿಗುಣ ಮಣಿಯೆಣಿಸುವ ಧೀರೆ ಪರಿಪರಿ ಅಲಂಕಾರೆ ಸ್ಮರಿಸದವರಿಗೆ ದೂರೆ ಅರಿದೂರ ವಿಜಯ ರಾಮಚಂದಿರವಿಠಲನ ನಿರುತ ಧೇನಿಸುವಂತೆ ಮರೆಯದೆ ಮಾಡೆ ತಾಯೆ 3
--------------
ವಿಜಯ ರಾಮಚಂದ್ರವಿಠಲ
ಜ್ಜನನಿ ಪೊರೆಯೆ ರುದ್ರಾಣಿ ಪ. ಅಘಸಂಹಾರಿಣಿ | ಮೃಗಪತಿವಾಹಿನಿ || ಅಗಣಿತಗುಣಮಣಿ | ಭಗವತಿ ಶ್ರೀ ಜಗ ಅ.ಪ. ಸಿರಿ ಕಾತ್ಯಾಯಿನಿ | ಗೌರಿ ಭವಾನಿ || ಪರಮಪಾವನೆ | ಪರಮೇಶ್ವರಿ ಜಗ 1 ಶುಂಭಧ್ವಂಸಿ | ನಿಶುಂಭನಿಷೂದಿನಿ || ಅಂಬುಜಮುಖಿ ಮೂ | ಕಾಂಬಿಕೆ ಶ್ರೀ ಜಗ 2 ಗಾನವಿನೋದಿನಿ | ದಾನವ ಮಥಿನಿ || ದೀನಜನಾವಳಿ | ಪಾಲಿನಿ ಶ್ರೀ ಜಗ 3 ಜಟಾಮುಕುಟಸುರ|ತಟನೀಧರಸತಿ || ನಿಟಿಲಾಂಬಕಿ ಶ್ರೀ | ಕಟಿಲೇಶ್ವರಿ ಜಗ 4
--------------
ವೆಂಕಟ್‍ರಾವ್
ಲಕ್ಷ್ಮೀದೇವಿ 13 ಭಾಗ್ಯವ ಕೊಡು ತಾಯೆ ಪ ಭಾರ್ಗವಿ ನಿನ್ನಯ| ಪದಯುಗಕೆರಗುವೆ| ಭಾಗ್ಯದ ಲಕ್ಷ್ಮೀ ಸೌ| ಭಾಗ್ಯದ ನಿಧಿಯೇ ಅ. ಪ ಸಾಗರಸಂಜಾತೆ| ದೇವಿ| ನಾಗವರದಪ್ರೀತೆ || ಯೋಗಿಜನಾವಳಿ| ಮಾನಸಪೂಜಿತೆ | ಅಗಣಿತಗುಣಮಣಿ| ತ್ರಿಜಗದ್ವಂದಿತೆ 1 ಸುರುಚಿರಸುಮಗಾತ್ರೆ | ದೇವಿ| ಹಿಮಕರನಿಭವಕ್ತ್ರೆ || ಕಿನ್ನರ | ಸುರಮುನಿ ಪೂಜಿತೆ | ಕಾಮಿತವೀಯುವ || ಕರುಣಾಕರೆಯೆ 2 ಜನನಿಯೆ ನಿರತವು ನೀ | ಪ್ರೇಮವ | ನಿರಿಸುತಲೆನ್ನೊಳು ನೀ | ಕನಕದ ವೃಷ್ಟಿಯ | ಕರೆಯುತಲನುದಿನ | ಮನ್ಮನದಿಷ್ಟವು | ಸಿದ್ಧಿಸುವಂದದ 3 ಅಹಿಪತಿ ಶಯನನಿಗೆ | ಮೋಹದ | ಮಹಿಷಿಯು ನೀನಾಗೆ || ಮಹಿಮಾಕರೆ ನೀ | ಮಹಿಯೊಳಗನಿಶವು | ಇಹಪರ ಸುಖವನು | ಭವಿಸುವ ತೆರದಾ 4 ಅಜಭವಸುರವಿನುತೆ | ದೇವಿ | ಸುಜನಾವಳಿಪ್ರೀತೆ || ಗಜವಾಹಿನಿ ವರ | ಮದಗಜಗಮನೆಯೆ | ವಿಜಯವಿಠಲಪ್ರಿಯೆ ಶ್ರೀ ಗಜಲಕ್ಷ್ಮಿಯೆ 5 ಶುಭ | ಮಂಗಳೆ ಸುಪವಿತ್ರೆ || ಮಂಗಳಾಂಗಿ ನರ | ಸಿಂಗನ ರಮಣಿಯೆ | ಮಂಗಳಕಾರ್ಯಗ | ಳನುದಿನವೆಸಗುವ 6 ಪಂಕಜದಳನೇತ್ರೆ | ದೇವಿ | ಕಿಂಕರನುತಿಪಾತ್ರೆ || ಶಂಖಚಕ್ರಾಂಕಿತ | ಶ್ರೀ ವೈಕುಂಠನ |ಅಂಕದಿ ಮೆರೆವಖಿ | ಳಾಂಕ ಮಹಿಮಳೇ 7
--------------
ವೆಂಕಟ್‍ರಾವ್