ಕಪಾಲಧರ ತ್ರಯತಾಪರಿಹಾರ ಭ
ಜಿಪೆ ಕಾಪಾಡು ಕೃಪೆ ಪಾಲಿಸಿ ಪ
ಅಪಾರ ಪತಿವ್ರತಾಶಾಪವಿಮೋಚನ
ಗೋಪ ಗೋಪತಿ ನಮಿತ ಗೋಪಾಲನೊಲಿಸೆನಗೆ ಅ.ಪ
ಅಗಜಾವಲ್ಲಭ ಸುಗುಣರಘದೂರ
ಜಗದೊಡೆಯ ಮಗುವಿನ ಮೊರೆ ಪಾಲಿಸು
ವಿನುತ ಅಗಣಿತಾಗಣಿತಮಹಿಮೆ
ಬಗೆದೆನ್ನ ನುಡಿಯಾಲಿಸು
ನಗಧರ ಖಗರೂಢ ಜಗರಕ್ಷ ಹರಿನಾಮ
ಅಗಣಿತ ಮತಿ ನೀಡೊ 1
ಅಜಭವಸುರ ನಮಿತ ರಜತಾದ್ರಿಮಂದಿರ
ನಿಜಜ್ಞಾನ ದಯಮಾಡೊ
ಮೃಡ ಗಜಚರ್ಮಾಂಬರ ಜಗದ
ಗೋಜು ಮುಂದೆನಗೆ ಬೇಡೊ
ಸುಜನ ಸಂರಕ್ಷಕ
ಪಾದ ನಿಜಧ್ಯಾನ ಸ್ಥಿರಕೊಡೋ 2
ಮೃತ್ಯುವಿಜಯ ಸತ್ಯ ಚಿತ್ತ ನಿರ್ಮಲ
ನಿತ್ಯ ಸತ್ಯರ ಸಖ್ಯ ನೀಡೊ
ಸತ್ಯಸದ್ಭಕ್ತಿನಿತ್ತು ಮತ್ರ್ಯರಿಂದುಳಿಸೆನ್ನ
ಚಿತ್ತ ಪರಿಶುದ್ಧ ಮಾಡೊ
ಭಕ್ತವತ್ಸಲ ನಿಜಮುಕ್ತಿದಾಯಕ ಮಮ
ಕರ್ತ ಶ್ರೀರಾಮನ ಭಕ್ತನೆಂದೆನಿಸೆನ್ನ 3