ಜಯಜಾನಕೀರಮಣ ಜಯಕೌಸ್ತುಭಾಭರಣ ಪ
ಜಯ ಪಾವನಚರಣ ಜಯ ಕೌಸಲ್ಯಾನಂದವರ್ಧನ
ಜಯ ಭಕ್ತಾಭರಣ ಅ.ಪ.
ಜಗದೋದ್ಧರಣ ಅಪಾರಕರುಣಾ ಅಗಜರ್ಚಿತ ಚರಣ
ಖಗೇಶಗಮನ ಜಲನಿಧಿಶಯನ ಸುರರಿಪು ಸಂಹನನ 1
ಸೂನೃತಪಾಲ ಜಾನಕೀಲೋಲ ದೀನಜನಾವಾಲ
ದಾನವಕಾಲಾ ಶ್ರೀವನಮಾಲಾ ಮಾನಿತ ಗುಣಶೀಲಾ 2
ವಾಸವ ಪರಿತೋಷ
ದೋಷವಿನಾಶ ದಶಶಿರಧ್ವಂಸ ಮುನಿಜನ ಮಾನಸಹಂಸ 3