ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರುದ್ರ (ಶಿವ) ಸ್ತುತಿ ಲೋಕರಕ್ಷಕನೆಂಬೊ ಹರ ಗಂಗಾಧರಗೆ ಪ ನೀಕಮಲಮುಖಿ ಅಖುವೈರಿ ಅ- ನೇಕ ಮೈಯೊಳು ಸುತ್ತಿಕೊಂಡು ವಿ- ವೇಕವಿಲ್ಲದೆ ವಿಷವನುಂಡ ಪಿ- ನಾಕಧರನಿಗೆ ಸೋಲುವುದೆ ಅ.ಪ ಶಿರದೊಳು ಶಶಿಯ ಕೆಂಜಡೆಯಿಪ್ಪಭೋಗಿ ಸ್ಮರನದಹಿಸಿ ಭಸ್ಮ ಹಣೆಗಿಟ್ಟಯೋಗಿ ಇರುವೊಡೆ ಸ್ಥಳವಿಲ್ಲ ದಂತೆ ತಾ ಪೋಗಿ ಬೆರೆವ ಸ್ಮಶಾನ ಮಂದಿರ ಸುಖವಾಗಿ ಬರಿದೆ ಒಲಿವುದೆ ಗರುವೆ ಪಾರ್ವತಿ1 ಜಾಹ್ನವಿ ಶಶಿಯನ್ನೆ ಮಾಡಿ ರುಂಡಮಾಲೆಗಳ ಕೊರಲೊಳಗಿಟ್ಟು ಆಡಿ ಕುಂಡಲಗಳ ಧರಿಸಿರುವನ ನೋಡಿ ಖಂಡಪರಶುವೆಂದು ಅವನ ಕೊಂಡಾಡಿ ದಿಂಡೆಯಾಹ ಪ್ರಾಯದವಳು ನೀ ಕಂಡು ನೀನವ ಗಂಡನೆಂದು ಪ್ರಾ- ಚಂಡಗೊಲಿದಿಹೆ ಸರಿಯೆ ಪಾರ್ವತಿ 2 ವಿರಚಿಸುವ ಲೀಲಾವಿನೋದನ ವರದ ಶ್ರೀ ಗುರುರಾಮವಿಠಲನ ಪರಮ ಪ್ರಿಯ ಪರಮೇಶ ಶಿವಗೆ 3
--------------
ಗುರುರಾಮವಿಠಲ