ಜಯ ಜಾನಕೀನಾಥ ಜಯ ಕುಶೀಲವ ತಾತ
ಜಾಮಾತ ಪ
ಜಯ ಜಯತು ಸುಖದಾತ ಜಯ ಜಗನ್ನಾಥ ಅ.ಪ
ಮರುತಸಂಭವ ಪಕ್ಷ ಮಹನೀಯ ಸುಕಲಾಕ್ಷ
ಸರಿಸಿಜದಳ ನಿಭಾಕ್ಷ ಸಾಧು ಸಂರಕ್ಷಾ
ಶರಧಿ ಬಂಧನದಕ್ಷ ಶಾತ್ರವನಿಕರ ಶಿಕ್ಷ
ವರವಿಶಾಲಸು ವಕ್ಷ ವಂದ್ಯ ಪಾಲಾಕ್ಷ 1
ಘೋರ ಪಾಪವಿದೂರ ಕುಜನಸಂಹಾರ
ಸಾರತತ್ವವಿಚಾರ ಸದಸದ್ವಿಹಾರ 2
ಶಿವವಿನುತ ಶುಭನಾಮ ಜೀಮೂತನಿಭಶ್ಯಾಮ
ನವತುಳಸಿದಳಧಾಮ ನತಜನಪ್ರೇಮ
ಅವನಿಪಾಲಲಲಾಮ ಅಖಿಳಾಮರಸ್ತೋಮ
ಕವಿಗೇಯ ಗುರುರಾಮವಿಠಲ ರಿಪುಭೀಮ3