ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದೆಂದು ಎನಗೆ ನೀನೆ ಅಖಿಳದೊಳು ಎಂದೆಂದು ಎನಗೆ ನೀನೆ ಅಂದಿಗಿಂದಿಗೆ ಎನ್ನ ತಂದೆ ತಾಯಿಯು ನೀನೆ ಬಂಧು ಬಳಗವು ನೀಯೆನಗೆ ಹರಿಯೆ ಧ್ರುವ ಸುಖಸೌಖ್ಯದಲಿ ಸದಾನಂದ ಘನ ಬೀರುತಿಹ್ಯ ಭಗುತ ಜನರಿಗಹುದು ನೀ ಪ್ರೀಯ ಸಕಲದೇವಾದಿಗಳ ಕೈಯಲೊಂದಿಸಿಕೊಂಬ ಮಕುಟ ಮಣಿಯಹುದೊ ನೀ ಎನ್ನಯ್ಯ ಲೋಕಾಧಿಲೋಕಪಾಲನೆಂದು ಶ್ರುತಿಸ್ಮøತಿ ಅಖಿಳ ಭುವನದಲೆನ್ನ ಸಾಕಿ ಸಲಹುವ ಸ್ವಾಮಿ 1 ಏಕೋದೇವನೆ ನೀನದ್ವಿತೀಯ ಶ್ರೇಯಧೇನುವಾಗಿ ಸಾರಸಗರವುತಿಹ್ಯ ಸುಖ ದಾಯಕಹುದಯ್ಯ ನೀ ಸಾಕ್ಷಾತ ದಯಕರುಣದಿಂದಭಯಕರ ನಿತ್ಯಸಂಗಪೂರ್ಣ ತೋಯಜಾಕ್ಷ ನೀ ಪೂರ್ಣಪರಮ ಭಕ್ತರ ಪ್ರಾಣ ನಾಯಕನೆ ನೀನೆ ಪ್ರಖ್ಯಾತ ಕ್ಷಯರಹಿತನೆಂದು ಜಯವೆನಿಸಿಕೊಳುತಿಹ್ಯ ದಯಭರಿತನಹುದುಯ್ಯ ಸದೋದಿತ 2 ನೀನೆ ಗತಿಯೆಂದು ಧರೆಯೊಳು ಕೊಂಡಾಡುವ ನೆನಹುತಿಹ್ಯ ನÀಹುದುಯ್ಯ ಬಾಲಕನು ನಾ ನಿನ್ನ ಫನದೊಲವಿನಿಂದ ಪಾವನಗೈಸುತಲಿಹ್ಯ ದೀನ ದಯಾಳು ನೀನೆ ಎನ್ನ ಅನುದಿನದಲಾಧಾರಿ ಮುನಿಜನರ ಸಹಕಾರಿ ನೀನಹುದಯ್ಯ ಜಗಜ್ಜೀವನ ಮನೋಹರನ ಮಾಡುತಿಹ್ಯ ದಾಸ ಮಹಿಪತಿಸ್ವಾಮಿಭಾನುಕೋಟಿಯು ನೀನು ಪ್ರಸನ್ನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ಗುರುನಾಥ ಧ್ರುವ ಏನೆಂದ್ಹೇಳಲಯ್ಯ ನೀವು ಮಾಡಿದುಪಕಾರ ನಾನೇನುತ್ತೀರ್ಣಾದೇನು ಹೀನ ದೀನ ಕಿಂಕರ ನೀನೆ ತ್ರಿಭುವನಕೆಲ್ಲ ಸುಖವಿಡುದಾರ ಮುನಿಜನರ ಮಂದಾರ ಘನ ಸಹಕಾರ 1 ಉಪಕಾರಕ ನೀ ಬಂದ್ಯೊ ಉಪಮೆರಹಿತ ಉಪಾಯವದೋರಲಿಕ್ಕೆ ಕೃಪೆಯುಳ್ಳ ಸಮರ್ಥ ತಾಪತ್ರಯ ಹರಿಸುವ ಶಕ್ತ ನೀನೆ ಶ್ರೀನಾಥ ಈ ಪರಿಮಾಡುವರಿಲ್ಲ ಆಪ ನೀನೆ ಅನಂತ 2 ಸಕಳಕೆ ಸಿಲುಕದ ಸುಖ ನೀಡಿದೆ ಅಯ್ಯ ನೀ ಅಕಳಂಕ ನಿಜರೂಪ ಪ್ರಕಟಿಸಿದ ಅಯ್ಯ ಸುಕಾಲ ಸುಭಿಕ್ಷದಿಂದ ಮಾಡಿದ್ಯೋ ನೀ ದಯ ಅಖಿಳದೊಳು ಮಹಿಪತಿಯ ಪಿಡಿದ್ಯೊ ನೀ ಕೈಯ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಯ ನಿವಾರಣವು ಶ್ರೀಗುರು ದಿವ್ಯನಾಮ ನಿಮ್ಮ ನಾಮ ಧ್ರುವ ಕ್ಲೇಶಪಾಶವು ಕತ್ತರಿಸಿ ದೋಷನಾಶವನು ಗೈಸಿ ಪೋಷಿಸುವ ಕೇಶವ ನಿಮ್ಮ ನಾಮ 1 ನರಕ ಘೋರದ ಘಟವೆಂಬ ನರಜನ್ಮದುರ್ಘಟ ತಾರಿಸುವ ನಾರಾಯಣ ನಿಮ್ಮ ನಾಮ 2 ಮದಮತ್ಸರವ ಜರಿಸಿ ಭೇದಾಭೇದವು ಹರಿಸಿ ಮಾಧವ ನಿಮ್ಮ ನಾಮ 3 ಭವ ಹಿಂಗಿಸುವ ಗೋವಿಂದ ನಿಮ್ಮ ನಾಮ 4 ಇಷ್ಟಾರ್ಥಗಳ ಕೊಟ್ಟು ಕಷ್ಟಾರ್ಥ ಪರಿಹರಿಸಿ ದೃಷ್ಟಾಂತದಲಿ ಹೊರೆವ ವಿಷ್ಣು ನಿಮ್ಮ ನಾಮ 5 ಮೊದಲು ಮೂವಿಧಿಯಗಳು ಜರಿಸಿ ಸದಮಲ ಪುಣ್ಯ ಪದವೀವ ಮಧುಸೂದನ ನಿಮ್ಮ ನಾಮ 6 ತ್ರಿವಿಧಾಧ್ಯಾತ್ಮ ಸ್ಥಿತಿಗತಿಯ ಈವ ಶಾಸ್ತ್ರಗಳನರಿಸಿ ಭಾವಭಕ್ತೀವ ತ್ರಿವಿಕ್ರಮ ನಿಮ್ಮ ನಾಮ 7 ವರ್ಮಧರ್ಮವನರಿಸಿ ಕರ್ಮಪಾಶವ ಹರಿಸಿ ಜನ್ಮ ತಾರಿಸುವ ವಾಮನ ನಿಮ್ಮ ನಾಮ 8 ಶ್ರೀಕರವನಿತ್ತು ಸಿರಿಸಕಲ ಸೌಭಾಗ್ಯದಲಿ ಸೃಷ್ಟಿಯೊಳು ಹೊರೆವ ಶ್ರೀಧರ ನಿಮ್ಮ ನಾಮ 9 ಹರಿಸಿ ಸಂದೇಹ ಸಂಕಲ್ಪ ಬಾಧೆಯಗಳು ಹರುಷ ಗತಿನೀವ ಹೃಷೀಕೇಶ ನಿಮ್ಮ ನಾಮ 10 ಪಾತಕ ಹರಿಸಿ ಪದ್ಮನಾಭ ನಿಮ್ಮ ನಾಮ 11 ದುರಿತ ವಿಧ್ವಂಸನಿಯ ಮಾಡಿ ಧರೆಯೊಳು ದ್ಧರಿಸುವ ದಾಮೋದರ ನಿಮ್ಮ ನಾಮ 12 ಸಕಲ ಪದವಿತ್ತ ಸುಖಸಾಧನವ ತೋರುತಿಹ್ಯ ಅಖಿಳದೊಳು ಸಂಕುರುಷಣ ನಿಮ್ಮ ನಾಮ 13 ವಾಸನೆಯು ಪೂರಿಸುತ ಭಾಷೆ ಪಾಲಿಸುತಿಹ ಲೇಸಾಗಿ ಶ್ರೀವಾಸುದೇವ ನಿಮ್ಮ ನಾಮ 14 ಪ್ರಾಣಪ್ರಿಯವಾಗಿ ಪ್ರಸನ್ನವಾಗುವ ಪೂರ್ಣ ಪ್ರತ್ಯಕ್ಷವಿದು ಪ್ರದ್ಯುಮ್ನ ನಿಮ್ಮ ನಾಮ 15 ಅನುಮಾನ ಪರಿಹರಿಸಿ ಅನುಭವಾಮೃತ ಸುರಿಸಿ ಅನಿರುದ್ಧ ನಿಮ್ಮ ನಾಮ 16 ಪೂರ್ವಕರ್ಮವ ಹರಿಸಿ ಪೂರ್ಣಕಳೆಯೊಳು ಬೆರೆಸಿ ಪುಣ್ಯಪದವೀವ ಪುರುಷೋತ್ತಮ ನಿಮ್ಮ ನಾಮ 17 ಅಧ್ಯಾತ್ಮ ಸುಖವರಿಸಿ ಸಿದ್ಧಾಂತವನು ತೋರಿ ಅಧ್ಯಕ್ಷವಾಗುವಾಧೋಕ್ಷಜ ನಿಮ್ಮ ನಾಮ 18 ನರಜನ್ಮವನು ಹರಿಸಿ ಹರಿಭಕ್ತಿಯೊಳು ಬೆರೆಸಿ ಅರುವು ಕುರ್ಹುವ್ಹಿಡಿದ ನರಸಿಂಹ ನಿಮ್ಮ ನಾಮ 19 ಅರ್ಚನೆಯು ಪ್ರಾರ್ಥನೆಯು ಪರಮಪೂಜೆಯನರಿಸಿ ಅಚ್ಯುತ ನಿಮ್ಮ ನಾಮ 20 ಜನನ ಮರಣವನಳಿಸಿ ತನುಮದೊಳು ಬೆರಿಸಿ ಜನುಮ ಹರಿಸುವ ಜನಾರ್ದನ ನಿಮ್ಮ ನಾಮ21 ಉಪಮೆಯ ರಹಿತ ವಸ್ತುವುಪಾಯದಲಿ ತೋರಿ ಕೃಪೆಯಿಂದ ಹೊರೆವ ಉಪೇಂದ್ರ ನಿಮ್ಮ ನಾಮ22 ಹರಿಸಿ ಅಹಂಭಾವ ಅರಿಸಿ ಅನುಭವ ಪೂರ್ಣ ಸುರಿಸುವ ಸುಖ ಶ್ರೀಹರಿ ನಿಮ್ಮ ನಾಮ 23 ಕರಕಮಲವಿಟ್ಟು ಶಿರದಲಿ ಸದ್ಗೈಸುತಿಹ ಕರುಣಾಳು ಮೂರುತಿ ಶ್ರೀಕೃಷ್ಣ ನಿಮ್ಮ ನಾಮ 24 ಸಾರ ಸಂಧ್ಯಾಯನದಿ ಮಹಿಪತಿಯ ಹೊರೆವ ಶ್ರೀಗುರು ನಿಮ್ಮ ನಾಮ 25
--------------
ಕಾಖಂಡಕಿ ಶ್ರೀ ಮಹಿಪತಿರಾಯರು