ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

3. ನವಗ್ರಹ ಸಕಲಗ್ರಹಬಲವು ನೀನೆ ಶ್ರೀನಿವಾಸ ಸುಖದಾಯಕನೇ ಅಖಿಲೇಶ್ವರ ಪ ಆರ್ತರ ಸಲಹುವ ಮಾರ್ತಂಡ ಬಲವು ಕೀರ್ತಿಯನೀಯುವ ಚಂದ್ರನ ಬಲವು ಪಾರ್ಥಿವರಗೈವ ಭೂ ಪುತ್ರ ಬಲವು 1 ವಿದ್ಯಾದಾಯಕನಾದ ಬುಧನ ಬಲ ಅದ್ಭುತ ಭಯಹರ ಶ್ರೀಗುರುವೊಲವು ಶುದ್ಧ ಸತ್ವದ ಶುಕ್ರನ ನಲಿವು 2 ಅನವರತವು ಶುಭದಾಯಕ ಶನಿಫಲ ಅನಿಷ್ಟಹಾರಕ ರಾಹುಕೇತು ಬಲ ಅನುದಿನ ಧ್ಯಾನಿಪೆ ಜಾಜೀಕೇಶವ 3
--------------
ಶಾಮಶರ್ಮರು
6. ಶಾಮಶರ್ಮರ ಕೇಶವನಾಮ ರಸಾಯನ ಶ್ರೀಕೇಶವ ಸುರಸೇವ್ಯ ನಮೋ ಶ್ರೀಕರ ಜಾಜೀಶ ನಮೋ ಪ ನಾರಾಯಣಶ್ರೀನಾಥ ನಮೋ ನಾರದಾದಿಮುನಿವಂದ್ಯ ನಮೋ 1 ಮಾಧವ ಮಂಗಳನಾಮ ನಮೋ ಭೂದೇವಿ ಭಯನಾಶನಮೋ 2 ಭೋಗಿಶಯನ ಗೋವಿಂದ ನಮೋ ಭಾಗವತಪ್ರಿಯ ಭೋಗ ನಮೋ 3 ಜಗ ಪರಿಪಾಲಕ ವಿಷ್ಣುನಮೋ ಖಗವಾಹನ ಗುಣಪೂರ್ಣ ನಮೋ 4 ಮಧುಸೂದನ ಮತ್ರ್ಪಾಣ ನಮೋ ವಿಧಿಶಿವ ಋಷಿಗಣ ಸ್ತುತ್ಶನಮೋ 5 ವಾಮನ ಮೂರುತಿ ಸ್ವಾಮಿನಮೋ ಭೀಮಾನುಜಪ್ರಿಯ ನಿಗಮನಮೋ 6 ತ್ರಿವಿಕ್ರಮಶ್ರೀವಕ್ಷನಮೋ ಪವಿತ್ರ ಫಲದ ಶ್ಯಾಮ ನಮೋ 7 ಶ್ರೀಧರ ದೇವಾನುತ ನಮೋ ಆಧಾರಮೂರುತಿ ಅಮಿತನಮೋ 8 ಹೃಷಿಕೇಶ ಹೃದ್ವಾಸಿ ನಮೋ ಪಶುಪತಿ ಪಾವನ ಪುಣ್ಯನಮೋ 9 ಪದ್ಮನಾಭ ಪರಮಾತ್ಮನಮೋ ಶುದ್ಧ ಸತ್ವರುಚಿರೂಪನಮೊ 10 ದಾಮೋದರ ದೈತ್ಯಾರಿನಮೋ ಕಾಮಜನಕ ಕರಿವರದ ನಮೋ 11 ಸಂಕರ್ಷಣ ಶೇಷಾಂಶ ನಮೋ ಶಂಖ ಚಕ್ರಗದಾಪಾಣಿ ನಮೋ 12 ವಾಸುದೇವ ವೈಕುಂಠನಮೋ ಭೂಸುರ ಪೂಜಿತ ಪಾದನಮೋ 13 ಪರಮಪುರುಷ ಪ್ರದ್ಯುಮ್ನ ನಮೋ ಶರಣಾಗತ ಜನ ತೋಷ ನಮೋ14 ಅಖಿಲೇಶಾನಿರುದ್ಧ ನಮೋ ಸುಖದಾತಾ ಪರಬ್ರಹ್ಮನಮೋ 15 ಪುರುಷೋತ್ತಮ ಪದ್ಮಾಕ್ಷ ನಮೋ ಸರಸಿಜಭವಪಿತ ಸತ್ಯ ನಮೋ 16 ಅಧೊಕ್ಷಜನತ ರಕ್ಷನಮೋ ಅದ್ಭುತ ಮಹಿಮಾಧಿಕ್ಯ ನಮೋ 17 ಶ್ರೀಲಕ್ಷ್ಮೀನರಸಿಂಹ ನಮೋ ಬಾಲಕ ಭಕ್ತ ಪ್ರೀತ ನಮೋ 18 ಅಚ್ಯುತ ಸಚ್ಚಾರಿತ್ರ ನಮೋ ನಿಶ್ಚಲ ನಿರ್ಮಲ ಚಿತ್ತ ನಮೋ 19 ಜನಾರ್ಧನ ಜಗದೀಶ ನಮೋ ದಿನೇಶಕೋಟಿ ಪ್ರಕಾಶನಮೋ 20 ಉಪೇಂದ್ರ ವಿಶ್ವವ್ಯಾಪ್ತನಮೋ ಉಪಮಾರಹಿತ ಉದಾರಿನಮೋ 21 ಶ್ರೀಹರಿಸಕಲ ಸ್ವರೂಪನಮೋ ಸಾಹಸರಹಿತ ಸುಕಾರ್ಯ ನಮೋ 22 ಶ್ರೀಕೃಷ್ಣ ಪರಂಧಾಮ ನಮೋ ಸಾಕಾರ ಮೋಕ್ಷ ಪ್ರದಾತ ನಮೋ 23 ಜಯಮಂಗಳಂ ಶ್ರೀರಂಗನಮೋ ಜಯಮಂಗಳಂ ಭವಭಂಗನಮೋ 24
--------------
ಶಾಮಶರ್ಮರು
ರಕ್ಷಿಸು ಎನ್ನನು ಪಕ್ಷಿವಾಹನ ಪಾಂಡು ಪಕ್ಷನೆ ತವ ಭಕ್ತಿಯಗಲಿಸದೆ ಲಕ್ಷಿಸಿ ಧ್ರುವನೊರೆದೆ ಲಕ್ಷ್ಮೀಶ ಮರೆಹೋದೆ ಪ ಕ್ಷಿತಿಯೊಳು ನಾಂ ಬಲು ಚತುರನೆನಿಪದು ರ್ಮತಿಯಿಂದ ಕಷ್ಟಕ್ಕೆ ಗುರಿಯಾದೆ ರತಿಪತಿಪಿತ ಎನ್ನ ಅತಿತಪ್ಪು ಮನ್ನಿಸಿ ಗತಿಗಾಣಿಸಿತ್ವಾಕ್ಯ ಅಖಿಲೇಶ ಯತಿನುತ ಸುರಪೋಷ ಹತಭವ ಗುಣಕೋಶ 1 ಮಂದಮತಿಯತನದಿಂದ ನಾ ಮಾಡಿದ ಹಿಂದಿನ ಅವಗುಣವೆಣಿಸದೆ ಪಾದ ಎಂದೆಂದು ಮರೆಯದೆ ಬಂಧುರಭಕ್ತಿಯ ವರ ನೀಡೊ ಕಂದನೊಳ್ದಯಮಾಡೊ ತಂದೆ ನೀ ಕಾಪಾಡೊ 2 ದುರುಲನೆನಿಸಿ ಬಲು ಧರಣಿಯೊಳ್ತಿರುಗುವ ಮರುಳುಗುಣವನೆನ್ನದೀಡ್ಯಾಡೊ ಹರಿಯ ದಾಸರ ಸಂಗ ಕರುಣದಿ ದೊರಕಿಸಿ ಪರಿಶುದ್ಧ ಮಾಡೆನ್ನ ಹೇಯ ಜನುಮ ಶರಣಜನರ ಪ್ರೇಮ ಕರುಣಿಯೆ ಶ್ರೀರಾಮ 3
--------------
ರಾಮದಾಸರು
ಸಕಲಕ್ಕೆ ನೀನೆ ಸ್ವತಂತ್ರನಾಗಿರ್ದು ಅಖಿಲೇಶ ಎನ್ನ ಸ್ವತಂತ್ರನೆನಿಸಿ ಕೊಲ್ಲುವರೆ ಪ ನೀನೆ ನಡೆಸಲು ನಡೆವೆ ನೀನೆ ನುಡಿಸಲು ನುಡಿವೆ ಸೂತ್ರ ಬೊಂಬ್ಯಂತೆ ನಾನಾಪರಿಯಲಿ ಎನಗೆ ಹೀನ ಬವಣ್ಯಾತಕೊ ದೀನಜನ ಭಂಧುವೆ ನೀನೆ ನೀಖಿಲೇಶ 1 ಅಡವಿ ಮಹದಾರಣ್ಯ ಗಿಡ ಗುಡ್ಡ ಗಂಹ್ವರ ಕಡುಕ್ಷೇತ್ರ ಮೊದಲಾದ ಇಡಿ ಬ್ರಹ್ಮಾಂಡಗಳ ಬಿಡದೆ ಉದರದೊಳಿಟ್ಟು ಅಡಗಿ ಮತ್ತದರೊಳಗೆ ನಡೆಸುವಿಯೆಲೊ ಸೃಷ್ಟಿ ಕಡುಚಿತ್ರಮಹಿಮ 2 ನಿನ್ನ ಮಹಿಮಿದು ಎಲ್ಲ ಭಿನ್ನವಿದರೊಳೊಂದು ಪರಿ ಬನ್ನ ಬಡಿಸುವುದು ಇನ್ನಿದು ತರವಲ್ಲ ಪನ್ನಂಗಶಯನನೆ ಮನ್ನಿಸಿ ಪೊರೆ ದಯದಿ ಎನ್ನಯ್ಯ ಶ್ರೀರಾಮ 3
--------------
ರಾಮದಾಸರು
ಕೂಡಲ ಮಾಣಿಕ್ಯ ಕ್ಷೇತ್ರಸ್ಥ ಭರತ ಪ್ರದ್ಯುಮ್ನ60ಶ್ರೀ ರಾಮಚಂದ್ರಾನುಜ ಭರತರಾಜಶರಣಾದೆ ತವಚರಣಯುಗಳ ತೋಯಜಕೆ ಪಉರು ಪರಾಕ್ರಮಿ ದುರ್ಗೆರಮಣ ಹರಿಚಕ್ರದಲಿಇರುವೆ ನೀ ತದ್ರೂಪದಲಿ ಸೇವಿಸುತಲಿಮಾರಶ್ರೀ ಕೃಷ್ಣಸುತ ಸ್ಕಂಧಾದಿರೂಪಿ ನೀಧೀರ ನಿನ್ನಲಿ ಕೃತೀಪತಿಯು ಪ್ರಜ್ವಲಿಪ 1ಉಡುಪಶೇಖರ ಕೊಟ್ಟ ವರಬಲದಿ ಪೌಲಸ್ತ್ಯಕಡು ಕಷ್ಟ ಕೊಡಲಾಗಸುರರುಮೊರೆಯಿಡಲುಕಡಲಶಯನನು ರಾಮ ಪ್ರಾದುರ್ಭವಿಸಲು ನೀನುಹೆಡೆರಾಜ ಅನಿರುದ್ಧಸಹ ಬಂದೆ ಬುವಿಯೊಳ್ 2ಕೇಕಯಕೆ ನೀ ಪೋಗೆ ಕೈಕೇಯಿ ವರದಿಂದರಾಕೇಂದುನಿಭಮುಖನು ನಿಷ್ಕಳ ಶ್ರೀರಾಮನನೂಕಲು ವನಕೆ ನೀ ಬಂದರಿತು ಧಿಕ್ಕರಿಸಿಏಕಾತ್ಮ ರಾಮನಲಿ ಪೋಗಿ ಬೇಡಿದೆಯೊ 3ಸ್ವೀಕರಿಸಿ ರಾಜ್ಯವಾಳೆಂದು ನೀ ಬೇಡಲುಅಖಿಲಾಂಡಕೋಟಿ ಬ್ರಹ್ಮಾಂಡಪತಿ ರಾಮನಾಕಿ ಭೂಸುರರೊಡೆಯ ಹದಿನಾಲ್ಕು ವರ್ಷಗಳುಆಗೆ ತಾ ಬರುವೆನು ಎಂದು ಪೇಳಿದನು 4ದೇವ ಶ್ರೀ ರಾಮನ ಸುಖಜ್ಞಾನಮಯಪಾದಸೇವಿಸಿ ಪ್ರೇಮಪ್ರವಾಹದಲಿ ನೀನುಬುವಿಯನು ಪವಿತ್ರ ಮಾಡುವ ಪಾದಪೀಠವನುನವವಿಧ ಭಕ್ತಿಯಲಿ ತಂದು ಪೂಜಿಸಿದೆ 5ನಂದಿಗ್ರಾಮದಲಿ ನೀ ತಪಶ್ಚರ್ಯದಲಿ ಇದ್ದುಬಂದಿಲ್ಲ ರಾಮನೆಂದಗ್ನಿ ಮುಖದಲಿ ನಿಲ್ಲೆಬಂದ ಇಕ್ಕೋ ಸ್ವಾಮಿ ರಾಮಚಂದ್ರನು ಎಂದಇಂದಿರೇಶನ ಪ್ರಥಮ ದೂತ ಶ್ರೀ ಹನುಮ 6ಅಖಿಲೇಶ ಸುಖಮಯನು ಶ್ರೀ ರಾಮಚಂದ್ರನುಸುಖ ಪೂರ್ಣ ಸೀತಾಸಮೇತ ಬರುವುದನುನೀಕೇಳಿಮುದದಲಿ1 ಮಾತೇರು ಶತ್ರುಘ್ನಭಕುತ ಪುರಜನ ಕೂಡ ಪೋದೆ ಕರೆತರಲು 7ಕಮಲೆ ಜಾನಕಿಪತಿಯ ಮೇಲೆ ಪೂಮಳೆ ಕರೆದುನಮಿಸೆ ನೀ ಭಕ್ತಿಯಲಿ ಕೃತಕೃತ್ಯ ಮನದಿಸ್ವಾಮಿ ರಾಮನು ನಿನ್ನಅಚಲಭಕ್ತಿಯ ಮೆಚ್ಚಿಪ್ರೇಮದಿಂದಲಿ ನಿನಗಾಲಿಂಗನವನಿತ್ತ 8ಸುರರ ನಗರೋಪಮವು ಸರೆಯೂ ತಟಿನಿಯಲ್ಲಿಇರುವುದು ಅಯೋಧ್ಯಾ ಆ ಪುರಿಜನರು ಎಲ್ಲಾಶ್ರೀರಾಮ ಸೀತಾಸಮೇತ ಪರಿವಾರ ಸಹಪುರಿಯೊಳು ಬರಲು ಆನಂದ ಹೊಂದಿದರು 9ಅಘದೂರ ಪೂರ್ಣಕಾಮನ ಮಂದಹಾಸವನುನರಜನರು ನೋಡಿ ಹಿಗ್ಗಿ ಘೋಷಿಸಲುಜಗಜ್ಜನ್ಮ ಸ್ಥಿತ್ಯಾದಿಕರ್ತ ಭೂಕಾಂತ ಶ್ರೀರಾಘವಗೆ ಮಾಡಿಸಿದೆ ರಾಜ್ಯಾಭಿಷೇಕ 10ಶ್ರೀ ರಾಮಭದ್ರನಿಗೆ ಯುವರಾಜನಾಗಿದ್ದುಭರತರಾಯನೆ ನೀನು ಸೇವೆ ಅರ್ಪಿಸಿದೆಸರಸಿಜೋದ್ಭವ ಲೋಕದಂತಾಯಿತೀ ಲೋಕವರವಿಷ್ಣು ಭಕ್ತಿಯು ಸೌಖ್ಯ ಎಲ್ಲೆಲ್ಲೂ11ಶರದಿಂದ ನೀನು ಗಂಧರ್ವರೂಪದಲಿದ್ದಮೂರು ಕೋಟಿ ಕ್ರೂರ ಅಸುರರನು ಕೊಂದೆಕರುಣಿಸಿ ನೀ ಎನ್ನ ಕಷ್ಟಗಳ ಪರಿಹರಿಸೊಶ್ರೀ ರಾಮಪ್ರಿಯ ಭರತ ಎನ್ನ ಗುರುಗಳ ರಾಜ 12ಶ್ರೀ ರಾಮ ಅವತಾರ ಕಾರ್ಯ ತಾ ಪೂರೈಸಿಸುರರುಮುನಿಗಣ ಮುಕ್ತಿಯೋಗ್ಯರ ಸಮೇತತೆರಳೆ ಸ್ವಧಾಮಕ್ಕೆ ಚಕ್ರ ನೀ ಚಕ್ರವನುಶ್ರೀರಾಮನಿಗೆ ದಕ್ಷಪಾಶ್ರ್ವದಲಿ ಪಿಡಿದೆ 13ಗರುಡಮೃಡಶೇಷಸ್ಥ ಭಾರತೀಪತಿ ಹೃಸ್ಥಪರಮಪೂರುಷ ಕೃತೀಪತಿಯು ಪ್ರದ್ಯುಮ್ನಹರಿರಾಮನಲಿ ಸದಾ ಭಕ್ತಿಭರಿತನೆ ಭರತವರನೀನು ಅಹಂಕಾರಿಕ ಪ್ರಾಣಾದ್ಯರಿಗೆ14ಸರಸಿಜಾಸನ ಪಿತ ಶ್ರೀ ಪ್ರಸನ್ನ ಶ್ರೀನಿವಾಸನವರಭಕ್ತ ವೃಂದ ಶಿರಮಾಣಿಕ್ಯ ಭರತಧರೆಯೊಳುತ್ತಮ ಕೂಡಲ್ ಮಾಣಿಕ್ಕವೆಂಬುವಕ್ಷೇತ್ರದಲಿ ನಿಂತು ಹರಿಭಕ್ತರನು ಪೊರೆವೆ 15
--------------
ಪ್ರಸನ್ನ ಶ್ರೀನಿವಾಸದಾಸರು