ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನನೆ ನಂಬಿದೆ ಅನ್ಯರೊಬ್ಬರ ಕಾಣೆ | ಮಧ್ವರಾಯಾ ಪ ನಿಮ್ಮ ಸಿದ್ಧಾಂತದಿ ಮನವ ನಿಲ್ಲಿಸಯ್ಯ | ಮಧ್ವರಾಯಾ ಅಪ ಪತಿತ ಸಂಕರ ಪುಟ್ಟಿ ಮತವೆಲ್ಲ ಕೆಡಿಸಲು || ಮಧ್ವರಾಯಾ || ಗತಿಯ ಕಲ್ಪಿಸಿ ಸಜ್ಜನರ ತತಿಗಳ ಕಾಯಿ || ಮಧ್ವರಾಯಾ 1 ತಂದೆ ತಾಯಿ ಬಂಧು ಬಳಗವೆಲ್ಲವು ನೀನೆ | ಮಧ್ವರಾಯಾ | ಎಂದೆಂದಿಗು ನಿಮ್ಮ ಪೋದಿರುವಂತೆ ಮಾಡೈ | ಮಧ್ವರಾಯಾ 2 ಬಾಲಕೃಷ್ಣನ ಸೇವೆ ಮೇಲಾಗಿ ಮಾಡುವ | ಮಧ್ವರಾಯಾ | ಮೂಲ ಮೂವತ್ತೇಳು ಮೇಲು ಗ್ರಂಥಗಳಿತ್ತೆ | ಮಧ್ವರಾಯಾ 3 ಶ್ರೀನಿಧಿ ಕೃಷ್ಣನೆ ಜಗಕೆಲ್ಲ ದೊರೆಯೆಂಬ | ಮಧ್ವರಾಯಾ | ಹೆಸರು ಪೊತ್ತೆ | ಮಧ್ವರಾಯಾ 4 ಅಜಪದಕೆ ಬಂದು ಅಖಿಲರ ಪಾಲಿಪ | ಮಧ್ವರಾಯಾ |ವಿಜಯಸಾರಥಿ ಕೃಷ್ಣ ವಿಜಯವಿಠ್ಠಲಪ್ರಿಯ | ಮಧ್ವರಾಯಾ 5
--------------
ವಿಜಯದಾಸ
ನೀನೆ ನಿಜಗುರುವಾಗುಎನಗೆ ಮಾಧವ ಪ ಮರವೆಯೆಂಬ ಪರದೆ ಹರಿದು ಅರಿವುಯೆಂಬಾಲಯದೊಳಿರಿಸಿ ದುರಿತಪರ್ವತ ತರಿದು ಪೊರೆಯುವ ಚರಣದಾಸರ ಭಾಗ್ಯನಿಧಿಯೆ 1 ಹೀನಸಂಸಾರೆಂಬುವ ಮಹ ಕಾನನದಿ ಬಳಲಿಸದೆ ಅನುದಿನ ಧ್ಯಾನಮೃತ ಪಾನಗೈಸುವ ಧ್ಯಾನಿಪರ ಮಹಪ್ರಾಣದರಸೇ 2 ಆವಕಾಲದಿ ಬಿಡದೆ ನಿಮಿಷ ಜೀವ ಭಕುತರ ಭಾವದ್ವಾಸಿಸಿ ಜಾವ ಜಾವಕೆ ಬುದ್ಧಿ ಕಲಿಸುವ ದೇವದೇವರ ದಿವ್ಯದೇವರೆ 3 ಸಕಲಕೋಟಿಮಂತ್ರಗಳಿಗೆ ನಿಖಿಲ ನೀನೆ ಆಧಾರನಾಗಿ ಅಖಿಲರೂಪದಿ ಜಗವ ಬೆಳಗುವ ಭಕುತಿದಾಯಕ ಸುಖದ ಶರಧಿಯೆ 4 ಸಾರಿ ಭಜಕರ ಭಾರವಹಿಸಿ ಘೋರಭವಸಾಗರವ ಗೆಲಿಸಿ ಧೀರ ಶ್ರೀಗುರುರಾಮ ಪ್ರಭುವೇ 5
--------------
ರಾಮದಾಸರು
ಭಾಗವತರ ಭಾಗ್ಯನಿಧಿಯೆ ಭೋಗಿಶಯನ ಭೋ ಶ್ರೀರಾಮ ಪ ವೇದಾಗಮಕೆ ಸಿಲುಕದಂಥ ನಾದಬ್ರಹ್ಮಾಯೋಧ್ಯ ರಾಮ ಸಾಧುಜನಸಂಪ್ರೀತ ಭವರೋಗ್ವೈದ್ಯ ಸಾಧನ ಸಾಧ್ಯ ರಾಮ 1 ಬೋಧ ರಾಮ ಮಹದಾದಿ ರಾಮ 2 ಕಂಟಕ ದೂರ ರಾಮ ಪರಕೆಪರಮ ಪರಮಪುರುಷ ಸರುವ ಜಗದಾಧಾರ ರಾಮ 3 ಹತ್ತು ಅವತಾರೆತ್ತಿ ಭೂಭಾರ್ಹೊತ್ತು ಇಳುಹಿದ ಸತ್ಯ ರಾಮ ಜಗತ್ಕರ್ಮ ರಾಮ 4 ದಾಸಜನರಭಿಲಾಷೆಯನು ಪೂರೈಸಲೋಸುಗ ಈಶ ರಾಮ ಶೇಷಾಚಲನಿವಾಸನಾದ ದಾಸಗಣ ಸಂತೋಷ ರಾಮ 5 ಅಸಮ ಪಾದಕುಸುಮಗಳನಿಟ್ಟೊಸುಧೆ ವೈಕುಂಠೆನಿಸಿ ರಾಮ ಜನರಿಂಗೊಸೆದು ರಾಮ6 ಬ್ರಹ್ಮಾದಿಗಳ ಹಮ್ಮನಳಿದ ಕರ್ಮಚರ ಪರಬ್ರಹ್ಮ ರಾಮ ಸುಖಧಾಮ ರಾಮ 7 ದಾತ ರಾಮ ಗುರುನಾಥ ರಾಮ 8 ತತ್ವದರ್ಥ ಉತ್ತರಿಸೆನ್ನ ಕಟ್ಟುಮಾಡೊ ಶಿಷ್ಟರಾಮ ಮೂರ್ತಿ ರಾಮ 9 ಹುಟ್ಟಿಬರುವ ಕಷ್ಟದ್ಹಾದಿ ಕಟ್ಟುಮಾಡೊ ಶಿಷ್ಟರಾಮ ನಿಷ್ಠೆಯಿಂ ನಿಮ್ಮ ಮುಟ್ಟಿ ಭಜಿಪ ಪಟ್ಟಗಟ್ಟೆಲೊ ದಿಟ್ಟ ರಾಮ 10 ದಾಸಜನರ ವಾಸದಿರಿಸೊ ಕೇಶವ ಜಗದೀಶ ರಾಮ ದೋಷರಾಶಿ ನಾಶಗೈದು ಪೋಷಿಸೆನ್ನನನುಮೇಷ ರಾಮ 11 ವೇದ ವಿದ್ಯದ್ಹಾದಿಸಾಧನ ಭೋಧಿಸೆನಗ್ವಿನೋದ ರಾಮ ಪಾದಭಕ್ತಿ ಮೋದದಿತ್ತು ಭವಬಾಧೆಯಳಿ ಸುಖಸ್ವಾದ ರಾಮ 12 ಕಳಿ ಮಮಜೀವ ರಾಮ ಬಿಡಿಸೆನ್ನಯ ರಾಮ 13 ಮತ್ತೆ ಮತ್ತೆ ಪೃಥ್ವಿ ಮೇಲೆ ಸತ್ತು ಹುಟ್ಟಿ ಬೇಸತ್ತೆ ರಾಮ ಕರ್ತು ನಿನ್ನ ಗುರ್ತು ಅರಿಯದನರ್ಥವಾದೆನಾತ್ಮ ರಾಮ 14 ಆಸೆಯೆಂಬ ಪಾಶದಿಂದ ಘಾಸಿಯಾದೆ ಭವನಾಶ ರಾಮ ದೋಷದೂರೆನ್ನ ಕ್ಲೇಶಗಳನು ನಾಶಿಸೈ ದಯಭೂಷ ರಾಮ 15 ಅರಿದು ಅರಿದು ಉರಿವದೀಪದೆರಗುವ ಹುಳದಿರವು ರಾಮ ಸಿರಿಯ ರಾಮ 16 ಮರೆದು ನಾನು ಧರೆಗೆ ಬಿದ್ದು ದುರಿತದೊಳಗೆ ಬೆರೆದೆ ರಾಮ ಪೊರೆಯೊ ರಾಮ 17 ಕರುಣಿಸುತ ತಂದೆ ರಾಮ ಬಯಲ್ಹರಿಸು ರಾಮ 18 ಮಾನ ಅಭಿಮಾನ ನಿನ್ನದು ಧ್ಯಾನಿಪರ ಸುರಧೇನು ರಾಮ ಜ್ಞಾನವಿತ್ತು ಮಾನದಿಂದ ನೀನೆ ಪೊರೆ ಜಗತ್ರಾಣ ರಾಮ 19 ಭಿನ್ನವಿಲ್ಲದೆ ನಿನ್ನ ನಂಬಿ ಧನ್ಯನಾದೆನಿನ್ನು ರಾಮ ಎನ್ನ ಮನಸಿಗಿನ್ನು ಸಂತಸವನ್ನು ಕೊಡು ಪಾವನ್ನ ರಾಮ 20 ಭೃತ್ಯನ ಮಹ ಚಿತ್ತಭ್ರಮೆ ಮುರಿದೊತ್ತಿ ಕರಪಿಡಿದೆತ್ತು ರಾಮ ಭಕ್ತಿಯುಕ್ತಿ ಮುಕ್ತಿ ಸುಖವನಿತ್ತು ಪೊರೆ ಗುರುದತ್ತ ರಾಮ 21 ನಿಖಿಲವ್ಯಾಪಕ ಅಖಿಲರಕ್ಷಕ ಸಕಲಬಲ ನೀನೇಕ ರಾಮ ಮುಕುತಿಸಂಪದ ಸಿದ್ಧಿ ನೀನೆ ಭಕುತಪ್ರಿಯ ಲೋಕೈಕ ರಾಮ 22 ಭಿನ್ನವಿಲ್ಲದೆ ನಿನ್ನ ನಾಮವನ್ನು ಪೊಗಳುವರಿನ್ನು ರಾಮ ಮಾನ್ಯರಾಗನನ್ಯ ಸುಖಸಂಪನ್ನರೆನಿಪನನ್ಯ ರಾಮ 23 ಉದಯದೆದ್ದು ಪದುಳದೀನಾಮ ಓದಿಕೇಳಲು ಸದಾ ರಾಮ ಸದಯ ರಾಮ 24 ನಿತ್ಯ ಭಕ್ತಿಯಿಂ ಬರೆಯುತ್ತ ಪಠಿಸಲು ಕರ್ತುರಾಮ ಮುಕ್ತಿಯೆಂಬ ಸಂಪತ್ತನಿತ್ತು ಬಿಡದ್ಹತ್ತಿರಿರುವನು ಸತ್ಯ ರಾಮ 25
--------------
ರಾಮದಾಸರು
ಜಯತು ಜಯತು ಜಯತು ಶ್ರೀ ಜಗ ಪ್ರೀತೆಜಯತು ಹರಿಹರ ಮಾತೆಜಯತು ಸುರಮುನಿಪೂತೆಭುವನವಿಖ್ಯಾತೆಪಜಡಿ ಜಡಿಜಡಿದುಕೋಪದಲಿ ಮಧು ಕೈಟಭರಿಬ್ಬರನುಘುಡು ಘುಡು ಘುಡಿಸು ಸಹಸ್ರ ಪಂಚಬುದ ಕಾದಿತಡೆ ತಡೆ ತಡೆಯೆ ಸುದರ್ಶನಾಸ್ತ್ರದಿಂದವರ ಶಿರವಕಡಿ ಕಡಿ ಕಡಿದೆ ಬಗಳಾಂಬ ಭಳಿರೆ ಜಗದಾಂಬ1ಒದ ಒದ ಒದರಿ ಭೋ ಎಂದು ಮಹಿಷಾಸುರನ ಬಲವಗದೆ ಗದೆಗದೆಯಿಂದವರ ಬೀಳಗೆಡಹಿಬೆದ ಬೆದ ಬೆದಕಿ ಸುಭಟಾಗ್ರಣಿಗಳೆಂಬುವರನ್ನೆಲ್ಲಸದೆ ಸದೆ ಸದೆದು ನೀಬಿಟ್ಟೆ ಅಖಿಲರಣದಿಟ್ಟೆ2ಭರ ಭರ ಭರದಿ ಬರಲು ಮಹಿಷಾಸುರನೆಂಬುವನತರಿ ತರಿ ತರಿದು ಅವನ ಸಾಹಸವ ಮುರಿದುಗರಗರಗರನೆ ಪಲ್ಗಳನೆ ಕೊರೆದು ಪದದಿಂದಲೊದ್ದೆಸರಿ ಸರಿ ಸರಿಯೆ ಶಾರದಾಂಬ ಭಳಿಕೆ ತ್ರಿಪುರಾಂಬ3ಖಣಿಖಣಿಖಣಿಲು ಖಣಿಲೆಂದುಶುಂಭನಿಶುಂಭರನುದಣಿ ದಣಿ ದಣಿಸಿ ಕಾಳಗದಿ ಬೇಸರಿಸಿ ಬಳಿಕಕಣೆಕಣೆಕಣೆಯಿಂದಲವರ ತಲೆಗಳನೆ ತರಿಸಿದೆ ನಿನಗೆಎಣೆ ಎಣೆ ಎಣೆಯಾರು ದಿನಮಣಿಯೆ ಕಣಿಯೆ4ಇಂತು ರಕ್ಕಸರನೆಲ್ಲ ಮರ್ದನವ ಮಾಡಿಸಂತಸದಿ ದಿವಿಜರಿಗೆ ಅಭಯವಿತ್ತೆಚಿಂತಾಯಕ ಚಿದಾನಂದಾವಧೂತನಿಗೆಪಂಥದಾಸತಿ ಎನಿಪ ಪ್ರೀತೆ ವಿಖ್ಯಾತೆ ಜಯತು ಜಯತು5
--------------
ಚಿದಾನಂದ ಅವಧೂತರು