ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾನೆ ದೊರೆವುದೇನೋ ಸುಖ ನಾನಾಜನ್ಮದ ಪುಣ್ಯವಿಲ್ಲದೆ ಪ ಮೃಷ್ಟಾನ್ನವುಂಡು ಮೆರೆವುದೀಗ ಕೊಟ್ಟು ಅನ್ನ ಹುಟ್ಟಿದವಗಿಲ್ಲದೆ ಇಟ್ಟುತೊಟ್ಟು ಶೃಂಗಾರದಿಂದ ಸೃಷ್ಟಿಯಿಂದ್ವಸ್ತ್ರ ವಡವೆಗಳು ಕೊಟ್ಟು ಹುಟ್ಟಿದ ಪುಣ್ಯರಿಗಲ್ಲದೆ 1 ಕೋಮಲಯುವತಿ ದೊರೆವುದೀಗ ಭೂಮಿಯೋಳ್ಕನ್ಯಾದಾನಿಗಲ್ಲದೆ ಭೂಮಿಸೀಮೆಗಳಿಸಿ ಬಲು ಕ್ಷೇಮದಿಂದ ಬಾಳ್ವುದೀಗ ಭೂಮಿಸೀಮೆ ದಾನಗೈದ ಆ ಮಹಾಪುಣ್ಯವಂತರಿಗಲ್ಲದೆ 2 ನಿಖಿಲಸುಖದಿ ಮೆರೆವುದೀಗ ಭಕುತಜನರಪ್ಪ ತೃಪ್ತರಿಗಲ್ಲದೆ ಅಖಿಲಪದಕೆ ಅಧಿಕವೆನಿಪ ಮುಕುತಿಪದವಿ ಪಡೆವುದಮಿತ ಮುಕುತಿದಾಯಕ ಶ್ರೀರಾಮಪಾದ ಭಕುತಾನುಭಕುತರಿಗಲ್ಲದೆ 3
--------------
ರಾಮದಾಸರು