ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಾಣನಾಥ ಪ್ರಾಣನಾಥ ತ್ರಿಭುವನಚೇಷ್ಟ ಪ್ರದಾತಾ ಪ ಅಖಿಲನೇತಾ ಸುಗುಣಜಾತಾ ಶೂರ ಸೀತಾರಾಘವದೂತ ಅ.ಪ ನೂರು ಯೋಜನ ಶರಧಿಯ ಹಾರಿ ಲಂಕಾಪುರವ ಸೇರಿ ಹರುಷದಿ ಜನಕಕುಮಾರಿಗುಂಗುರವಿತ್ತ 1 ದುಷ್ಟ ದಶಕಂಧರನನು ಮುಷ್ಟಿತಾಡನದಿಂದ ಚೇಷ್ಟರಹಿತನ ಮಾಡಿ ದಿಟ್ಟತನದಲಿ ಮೆರೆದ 2 ಗಂಧಮಾದನ ಗಿರಿಯನು ಒಂದು ಕರದಲಿ ಸುಖದಿ ಪಾದ ದ್ವಂದ್ವಕೆರಗಿದ ಮುಖ್ಯ 3 ಕ್ರೂರನಿಶೇಚರಪತಿ ಪರಿವಾರವನು ಸದೆ ಬಡಿದು ಮೂರು ಜಗಂಗಳ ಮೀರಿದ ಕೀರುತಿಯ ಪೊಂದಿದ 4 ಇನ್ನು ಎರಡವತಾರಗಳನ್ನು ಧರಿಸುತ ಜಗದಿ ಪ್ರ ಸನ್ನ ಮಾಧವವ್ಯಾಸರನ್ನು ಸೇವೆಯ ಮಾಡಿದ 5
--------------
ವಿದ್ಯಾಪ್ರಸನ್ನತೀರ್ಥರು