ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರುಕ್ಮಿಣೀಶ ವಿಠಲ | ಕಾಪಾಡೊ ಇವನಾ ಪ ವಿಖನ ಸಾಂಡದ ದೊರೆಯೆ | ಅಖಳಂಕ ಮಹಿಮಾ ಅ.ಪ. ಸುಪಥದಲಿ ನಡೆವಂತ | ನಿಪುಣತರ ನಿವನೀಗೆಉಪದೇಶವಿತ್ತಿಹೆನೊ | ಅಪವರ್ಗದಾತಾ |ಕೃಪಣ ವತ್ಸಲ ನಿನ್ನ | ಕೃಪೆ ದೃಷ್ಟಿಯಲಿ ನೋಡಿಅಪೇಕ್ಷಿತವನಿತ್ತು | ನೀ ಪೋಷಿಸಿವನಾ 1 ಜ್ಞಾನವಿಜ್ಞಾನದಲಿ | ನೀನಿರುವ ತತ್ವವನುನೀನಾಗಿ ತಿಳಿಸುತ್ತ | ಕಾಪಾಡೊ ಹರಿಯೇ |ಶ್ರೀನಿವಾಸನೆ ದಯಾ | ಪೂರ್ಣ ನೀನಾಗುತ್ತಜ್ಞಾನಭಕ್ತಿಯನಿತ್ತು | ಕಾಪಾಡೊ ಹರಿಯೆ 2 ಎಲ್ಲೆಲ್ಲು ನೀನಿರುವೆ | ಸೊಲ್ಲನ್ನು ಅನುಭವಕೆಉಲ್ಲಾಸದಲಿ ಇತ್ತು | ಬಿಲ್ಲಾಳು ಎನಿಸೋಬಲ್ಲಿದರ ಕೂಟದಲಿ | ಬಿಲ್ಲಿ ನಂತರಿಸುತ್ತಮಲ್ಲಮರ್ದನಕೃಷ್ಣ | ಕಾಪಾಡೊ ಇವನ 3 ಸತಿಸುತರು ಹಿತರಲ್ಲಿ | ವ್ಯಾಪ್ತ ನೀನೆಂದೆಂಬಮತಿಯನೇ ಕರುಣಿಸುತ | ಅತಿಶಯವ ತೋರೀಮತಿಮತಾಂವರರಂಘ್ರಿ | ರತಿಯನ್ನೆ ಕರುಣಿಸುತಮತಿವಂತ ನೆನಸಿವನ | ಮಾರುತನ ಮತದೀ 4 ದೇವತವ ಮಹಿಮೆಗಳು | ಭಾವದಲಿ ಪೊಳೆಯಲ್ಕೆಕೋವಿದರ ಸಂಗವನು | ನೀ ವೊಲಿದು ಈಯೋ |ನೀ ವೊಲಿಯದಿನ್ನಿಲ್ಲ | ಗೋವುಗಳ ಪರಿಪಾಲದೇವ ದೇವೇಶ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು