ಅಹುದಹುದು ದೀನ ಬಂಧು
ಅಹುದಹುದು ದೀನಬಂಧು|ಶ್ರೀ ಕೃಷ್ಣ|
ಸಹಕಾರಿ ಶರಣ ಜನರಾ ಹರಿಯೇ ಪ
ಕಪ್ಪೆಮರಿ ಅಂದರೇನು|ಕಾಯ್ದಿರುವಾ|
ಅಪ್ಪವಿನೋಳು ಬಳಲುತ|ಹರಿಯೇ|
ಸರ್ಪಶಯನೆಂದು ಕರೆಯೆ|ಬಂದೊದಗಿ|
ಒಪ್ಪಿಕೊಳ್ಳಬೇಕು ದಯದಿ ಹರಿಯೇ 1
ಪಕ್ಷಿತತ್ತಿಯು ಬೀಳಲು|ಭಾರತ ಮಹಾ|
ಅಕ್ಷೋಹಿಣಿ ರಣದಲಿ ಸಲವೆಂದು|
ಗಜ ಘಂಟೆಯಾ|ನೀ ಕೆಡಹಿ|
ರಕ್ಷಿಸಿದ ಮುಸುಕಿ ಅವರ ಹರಿಯೇ 2
ಕಬ್ಬುಲಿಗ್ಯಾತದ ರೂಪದೀ ಕಪಟದಲೀ|
ಒಬ್ಬರಾಯನ ಕನ್ಯೆಯಾ ಭೋಗಿಸುತ|
ನಿಬ್ಬುರಕ ನಿನ್ನ ನೆನೆಯೇ|ಗತಿಗೊಟ್ಟು|
ಉಬ್ಬುಸವ ಕಳೆಯಲಿಲ್ಲದೇ ಹರಿಯೇ3
ವ್ಯಭಿಚಾರಿ ಗಣಿಕೆ ತಾನು|ಧನವೀವ|
ಪ್ರಭುಗಳೊಂದಿನ ಕಾಣದೇ ವಿರಕ್ತಿಯಲಿ|
ವಿಭುನಿನ್ನೀ ಕೀರ್ತನೆಗಳಾ ಮಾಡಲಿಕ್ಕೆ|
ಅಭಯ ಪದವಿತ್ತೆ ಬೇಗ ಹರಿಯೇ4
ಹಿಂದಾದ ಕಥಿಗಳಿವನು|ಅಹುದಲ್ಲೋ|
ಎಂದಾರು ಬಲ್ಲರಯ್ಯಾ ಮಹಿಪತಿ|
ಕಂದರೊಡೆಯನೇ ಎನ್ನ ಕೈ ಪಿಡಿದ|
ರಿಂದು ನಿಜವೆಂಬೇ ನಾನು ಹರಿಯೇ 5