ಕಂದನ ತೂಗಿದಳು ಯಶೋದೆ ಕಂದನ ತೂಗಿದಳು ಪ
ಇಂದಿರಾರಮಣನ ಅಂದವದನದಲಿ
ಮಂದಹಾಸವ ನೋಡಿ ನಂದದಿ ಹಿಗ್ಗುತ ಅ.ಪ
ತಾಮರಸಾಕ್ಷನ ಕೋಮಲಾಂಗವ ನೋಡಿ
ಆ ಮಹಿಳೆಯು ಬಲು ಪ್ರೇಮಭರಿತಳಾಗಿ 1
ಜಗಜಗಿಸುವ ನವಮಣಿಯ ತೊಟ್ಟಿಲಲಿ
ಜಗದೀಶನು ತನ್ನ ಮಗನೆಂದು ತಿಳಿಯುತ 2
ಪದಮನಾಭನನು ಹೃದಯದಿ ನೆನೆಯುತ
ಮದದಿಂದಲಿ ದಿವ್ಯ ಪದಗಳ ಪಾಡುತ 3
ಲಕ್ಷ್ಮೀಶನು ಇತ್ತ ಪುತ್ರಭಿಕ್ಷೆಯೆಂದು
ಅಕ್ಷಿಗಳಲಿ ಸುಖಬಾಷ್ಪವ ಸುರಿಸುತ 4
ತನ್ನ ಸೌಭಾಗ್ಯವು ಅನ್ಯರಿಗಾವುದೆಂದು
ಸತಿ 5