ಒಟ್ಟು 7 ಕಡೆಗಳಲ್ಲಿ , 3 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸು ಬೇಗ ಸಿರಿವರ ಕರುಣಿಸು ಬೇಗ ಪ. ಲಕ್ಷ್ಮಾಶ್ರಯ ವಕ್ಷಸ್ಥಳ ಪಕ್ಷೇಂದ್ರ ವಿಹಾರಿ ಅಕ್ಷಾರಿ ಪ್ರಿಯ ಪೂರ್ಣ ಕಟಾಕ್ಷದಿ ನೋಡುತಲಿ 1 ಕಂಠೇಧೃತ ಕೌಸ್ತುಭ, ವೈಕುಂಠಾಲಯವಾಸಿ ಶುಂಠಾಶಯ ಧೂವನ ನರ ಕಂಠೀರವ ಕಮಠಾ 2 ದೂರೀಕೃತ ಘೋರಾಮಯ ಧೀರಾಖಳ ಸಾರಾ ನಾರಾಯಣ ನರಕಾರ್ಣವ ತಾರಣ ರಘುವೀರ 3 ಭಕ್ತಾವನಶಕ್ತಾಮೃತ ರಕ್ತಾಧರ ಶ್ರೀದ ಪಾದ 4 ವಾಗೀಶ ವೃತಾನುಗ ಸಕಲಾಗಮನುತ ಚರಣ ಭೋಗೀಶ ಧರಾಲಯ ದಯವಾಗು ಸದಾಶರಣ 5
--------------
ತುಪಾಕಿ ವೆಂಕಟರಮಣಾಚಾರ್ಯ
ಚಕ್ಷು ಶ್ರ್ಯವನೆ ಶೇಷಾ - ಪಾಲಯ ಪ ಕ | ಟಾಕ್ಷದಿ ನಾಗನೆಅ.ಪ. ಅಕ್ಷಾರಿಪದಪಾಂಸು ಧರನೇ | ವಾಯುಪುಚ್ಛಾಶ್ರಯಿಸಿ ಜಗಧಾರನೇ ||ಪಕ್ಷಿ ವಾಹಗೆ ಶಯ್ಯ | ಪಕ್ಷೀಯ ಸಮ ಪೂರ್ವತ್ರ್ಯಕ್ಷನೆ ಸೋಮರ್ಕ | ಅಕ್ಷಿ ಅನಲ ಕಾಯೊ 1 ತಾಮಸ್ಸಾಹಂ ತತ್ವ ಮಾನಿಯೇ || ಕಾಯೊಭೂಮಿ ಧರನೆ ಬಹು ಮಾನಿಯೇ |ಆಮಹ ಪಂಚರಾ | ತ್ರಗಮಗಳ್ ಮಾನಿಕಾಮಿತ ಪಾಲಿಸೊ | ಸ್ವಾಮಿ ನಿಮಗೆ ನಮೊ 2 ವಾಸವ ವಂದಿತ ವಾತಾಶನಾ | ನಿನ್ನಆಸನ ಮಾಡಿಹ ರಮೇಶನಾ ||ಹಾಸಿಗೆ ಎನಿಸುತ್ತ | ಲೇಸು ಸೇವಿಸಿ ಹರಿಸಾಸಿರ ನಾಮನ | ದಾಸನೆಂದೆನಿಸಿದೆ 3 ಮುಕ್ತಿಗೆ ಯೋಗ್ಯರ ಮಾರ್ಗದಾ | ಹರಿಭಕ್ತಿಯ ಪಾಲಿಸೊ ದೀರ್ಘದಾ ||ಸಕ್ತಿಯಾಗಲಿ ಮನ | ಸೂಕ್ತಮೇಯನಲ್ಲಿಉಕ್ತಿ ಇದೊಂದನ | ಇತ್ತು ಪಾಲಿಸು ಶೇಷ 4 ಕಾಳೀಯ ಮಡುವಿಗೆ ಹಾರ್ದನ | ಮತ್ತೆಕಾಳೀಯ ನೆಡೆಯಲಿ ಕುಣಿದನಾ ||ಕಾಳಿರಮಣ ಗುರು | ಗೋವಿಂದ ವಿಠಲನಭಾಳ ತುತಿಪ ಮನ | ಪಾಲಿಸೊ ಶೇಷ ಗುರು 5
--------------
ಗುರುಗೋವಿಂದವಿಠಲರು
ಪತಿ ಎನಿಪ | ರುದ್ರದೇವನೆ ನಮೋಕಾದ್ರವೇಯನ ಪದ | ಭದ್ರವೋ ನಿನಗೆ ಪ ನಿಟಿಲಾಕ್ಷ | ಶ್ಮಶಾನದಲಿ ದೀಕ್ಷಅಕ್ಷಾರಿ ಪದದೀಕ್ಷ | ಪಕ್ಷಿವಹ ಕೃಪೆ ಈಕ್ಷಾ 1 ವೃಷನಾಭ ವಶದರ್ಪ | ವೃಷ ಋಷಭ ವೃಷಾಂಕವೃಷಶೃಂಗ ವೃಷದ್ವಜನೆ | ವೃಷಭೇಕ್ಷಣಾ |ವೃಷ ಭೂತ ವೃಷ ಶರನೆ | ವೃಷಪತಿ ವೃಷಾ ವರ್ತವೃಷಾಯುಧ ವೃಷೇಶ್ವರನೆ | ವೃಷಭೋದರಪಾಹಿ2 ದೂರ್ವಾಸ ಭೂವನೇಶ | ಸುರಪೇಶ ಉಗ್ರೇಶಗೌರೀಶ ಪ್ರಮಥೇಶ | ಅವ್ಯಕ್ತ ಕೇಶಾ |ಚೀರ ವಾಸ ಸುವಾಸ ಸ್ವರ್ಣಕೇಶ ಭೂತೇಶಈರಪತಿ ಗುರು ಗೋವಿಂದ | ವಿಠಲ ಭಜಕೇಶ 3
--------------
ಗುರುಗೋವಿಂದವಿಠಲರು
ಪಿಳ್ಳಂಕೇರಿಯ ವಾಸ ದಾಸ | ಕಾಯೊಮಲ್ಲಾರಿ ಮಹಿದಾಸ ದಾಸಾ ಪ ಎಲ್ಲ ಸಚರಾಚರದಿ ವ್ಯಾಪ್ತನು | ನಲ್ಲ ಕೃಷ್ಣನ ಸೇವೆ ಬಹಳದ ಸಲ್ಲಿಸಲು ಬಹುರೂಪ ತಾಳ್ದ ಪ್ರ | ಪುಲ್ಲ ವದನಾಂ ಭೋಜ ಹನುಮ ಅ.ಪ. ದಕ್ಷಿಣಾಕ್ಷಿಯ ವತ್ಸರೂಪಾ | ಸುರತ್ರ್ಯಕ್ಷಾದಿ ಸಂಸೇವ್ಯ ಭೂಪಾ |ಕ್ಷೋಭ್ಯತೀರ್ಥ ಶ್ರೀ ಯತಿಪಾ | ಗೊಲಿದುಅಕ್ಷಾರಿ ತೋರ್ದೆ ಈ ರೂಪಾ |ಕುಕ್ಷಿಯಲಿ ಪಾಪಾತ್ಮ ಪುರುಷನ | ಶಿಕ್ಷಿಸುತ ಶೋಭಿಸುತ ನಿತ್ಯಪಕ್ಷಿವಾಹನನಂಘ್ರಿ ಕಮಲವ | ಈಕ್ಷಿಸಲು ಸಹಕರಿಪ ಪ್ರಾಣಾ 1 ದುರುಳ ಅವನನ್ವಯದ | ಸಹಜಾತರನು ವಧಿಸಿ ಮೆರೆದ ಸ 2 ಸಾರ ಸಜ್ಜನರನ್ನು ಪೊರೆದ 3 ಹಂಸನಾಮಕ ಹರಿ ದ್ವಂದ್ವಾ | ಪಾದಪಾಂಸುವ ಧರಿಸಿ ಮೆರೆಯುವಾ |ಹಂಸಾಖ್ಯ ಜಪ ದಿನ ದಿನವಾ | ಪಟ್ಯತವಿಂಶತ್ಯೇಕ ಸಾಸಿರವಾ |ಹಂಸವಾಹನ ತಾತನೆನಿಸುವ | ಕಂಸಮರ್ದನ ಚರಣಕರ್ಪಿಸಿಸ್ವಾಂಶರೂಪವನಂತ ಧರಿಸುತ | ಶಂಸಿಸುವೆ ವೇದೋಕ್ತ ಅನುಕ್ತದಿ 4 ದೇವ ದೇವರ ದೇವ ದೇವಾ | ಗುರುಗೋವಿಂದ ವಿಠ್ಠಲ್ಲ ದೇವಾ |ಕಾವ ಕೊಲ್ಲುವ ಸ್ಥಿರ ಚರವಾ | ನಂಬುದಾವ ಬಲ್ಲನಿವನ ಮಹಿಮವಾ |ಭಾವಿ ಬೊಮ್ಮನೆ ರಮೆಯ ಮುಖದಿಂ | ಶ್ರೀವರನ ಮಹಿಮೆಗಳ ತಿಳಿದುಭಾವ ಶುದ್ಧಿಯ ಗೈದು ಸುಜನರ | ಸ್ವಾವಲಂಬಿಗಳೆನಿಸಿ ಪೊರೆವ 5
--------------
ಗುರುಗೋವಿಂದವಿಠಲರು
ಭುಜಗ ಭೂಷಣ ಪಾಹಿ ಪ ಗಜ ಅಜಿನಾಂಬರ ಅ.ಪ. ಗಿರಿಜೆಯ ಮನೋಹರ | ಸುರಪತಿ ಗುರುವರಕರುಣದಿಂದಲಿ ತವ | ಚರಣ ಸ್ಮರಣೆ ಕೊಡು 1 ಪಂಚಸುವದನನೇ | ಸಂಚಿತಪ ಕೆಡಿಪನೇಪಂಚ ಬಾಣನ ಪಿತ | ಮಂಚ ಪದಾರ್ಹನೆ 2 ತ್ರಿಶೂಲ ಡಮರುಗಾ | ಭಸುಮಾದಿ ಭೂಷಿತಾದಶ ಶಿರ ಮದಹರ | ನಿಶಿಚರ ಗುರುವರ3 ಪಕ್ಷೀಂದ್ರ ವಂದ್ಯರಾ | ಅಕ್ಷಾರಿ ಹರಿವರಾಕುಕ್ಷ್ಯುದ್ಭವ ಹರ | ದಕ್ಷಾದ್ವರ ಹರ 4 ವಿಷಧಿಯೋಳುದಿಸಿದಾ | ವಿಷಗಣ ಭುಜಿಸಿದಾವಿಷಕಂಠನೆನಿಸಿದ | ನಿಶಿಚರ ವರಪ್ರದ 5 ಗಗನೇಶಾ ಜನಕಾ | ಮೃಗಾಂಕ ಶ್ರೀ ಶುಕಾನಗಪಗೆ ಪೋಷಕ | ಷಣ್ಮುಖ ಜನಕಾ 6 ತ್ರೈರೂಪಾ ತ್ರಿನಯನಾ | ಗುರು ಗೋವಿಂದ ವಿಠಲನಾನಿರುತದಿ ಸ್ಮರಣಾ | ಭರಣ ಶೋಭನ 7
--------------
ಗುರುಗೋವಿಂದವಿಠಲರು
ವೆಂಕಟೇಶ ವಿಠ್ಠಲನೆ ಉದ್ಧರಿಸೊ ಇವಳಾಪಂಕಜಾಸನ ವಂದ್ಯ ಪಂಕೇರು ಹಾಕ್ಷ ಪ ಪತಿ ವಿಯೋಗದ ದುಃಖ | ಅತಿಯಾಗಿ ತವಪಾದಗತಿಗಾಗಿ ಗಿರಿಯೇರಿ | ತುತಿಸುತಿರೆ ನಿನ್ನಾಗತಿಗೋತ್ರ ತೈಜಸನೆ ಪತಿರೂಪ ನಿನ್ನನುಪತಿಕರಿಸ ನಿನ್ನ ಮೃತ ಹಸ್ತ ನೆತ್ತಿಲಿ ಇಟ್ಟೇ 1 ಇಂದಿವಳ ಪ್ರಾರ್ಥನೆಯ ಛಂದದಲಿ ಮನ್ನಿಸುತಅಂದು ನೀನಾಗಿತ್ತ | ನಂದದಂಕಿತವಾಇಂದು ಊರ್ಜಿತ ಪಡಿಸಿ | ವಂದಿಸಿಹೆ ತವಪಾದವೃಂದಾರ ಕೇಂದ್ರ ಗುರು ನಂದ ಮುನಿ ವಂದ್ಯಾ 2 ಪಕ್ಷಿವಾಹನ ದೇವ | ದಕ್ಷಾರಿ ಪ್ರಿಯ ಸಖನೆದೀಕ್ಷಿತಳ ದಾಸಪಥ | ಲಕ್ಷಿಸುತಲಿದನಾಈಕ್ಷಿಪುದು ಕರುಣಾಕ | ಟಾಕ್ಷದಲೆಂದನುತಅಕ್ಷಾರಿ ವಂದ್ಯ ಹರಿ ಪಾರ್ಥಿಸುವೆ ನಿನ್ನಾ 3 ದೇಶ ದೇಶದ ಜನರ | ಆಶೆಗಳ ಪೂರೈಪ ಕೇಶವನೆ ಶ್ರೀ ವೆಂಕಟೇಶಾಖ್ಯ ಹರಿಯೇ |ದಾಸಿಯಳ ಹೃದಯಾ | ಕಾಶದೊಳು ತೋರೆಂದುಲೇಸು ಭಿನ್ನಪ ಸಲಿಸೊ | ಮೇಶ ಮಧ್ವೇಶಾ4 ಊರ್ವಿಯೊಳು ನಿನ್ಹೊರತು ಕಾವರನು ನಾಕಾಣೇಸರ್ವೋತ್ತಮೋತ್ತಮನೆ | ಶರ್ವ ವಂದ್ಯಾದರ್ವಿ ಜೀವಿಯ ಕಾವ | ಹವಣೆ ನಿನ್ನದಲ್ಲೇನೊ ಗುರ್ವಂತರಾತ್ಮ ಗುರು | ಗೋವಿಂದಾ ವಿಠಲಾ 5
--------------
ಗುರುಗೋವಿಂದವಿಠಲರು
ಶಾರದಾಂಬೆಯೆ ನಾರಿ ಲಕುಮೀಸಾರಸಾಕ್ಷಿ ಮಹೇಶ್ವರಿಘೋರಮಹಿಷಿನಿಶುಂಭ ಮರ್ದಿನಿಧೀರ ಚಂಡಮುಂಡಾರ್ದನಿ ಜಯತು ಜಯತೂ ಪಜ್ವಾಲಿನೀ ಅಕ್ಷಾರ ಮಾಲಿನೀನೀಲಕುಂತಳೆ ಭಾರ್ಗವೀಶೂಲಿನೀ ಹರಿಲೋಲೆ ನೀಗುಣಶೀಲೆ ಗಾಯನ ರಾಣಿ ಜಯತು ಜಯತೂ 1ವಾರಿಜಾಲಯೆ ವೀಣಾಪಾಣಿಯೇಮಾರಹರನ ಅರ್ಧಾಂಗಿಯೇಕ್ಷೀರಸಾಗರಕನ್ಯೆ ಗಿರಿಸುತೆಕೀರವಾಣಿ ಸರಸ್ವತೀ ಜಯತು ಜಯತೂ 2ರಮೆಯೆ ರಕ್ಷಿಸು ಉಮೆಯೆಪಾಲಿಸುಕಮಲಸಂಭವನರಸಿಯೆಅಮಿತ ಮಂಗಲೆ ಅಮರ ದೈವವೆಕಮಲಮುಖಿ ವಾಗ್ದೇವಿಯೆ ಜಯತು ಜಯತೂ 3ಕರವಮುಗಿವೆ ಸ್ಮರಿಸಿ ನಿನ್ನನುಶಿರವ ಚಾಚುವೆ ಚರಣಕೆಕರುಣದಲಿ ಗೋವಿಂದದಾಸನಪರಸಿ ರಕ್ಷಿಸಬೇಹುದು ಜಯತು ಜಯತೂ 4
--------------
ಗೋವಿಂದದಾಸ