ಜೋಜೋ ಜೋಜೋ ಜೋ ವೆಂಕಟೇಶ
ಜೋಜೋ ಜೋಜೋ ಜೋ ಶ್ರೀನಿವಾಸ
ಜೋಜೋ ಜೋಜೋ ಭಕ್ತರಘನಾಶ
ಜೋಜೋ ಜೋಜೋ ಜೋ ಸ್ವಪ್ರಕಾಶ ಜೋಜೋ ಪ
ನಂಬಿದೆ ತಂದೆ ಮುದ್ದು ಮೋಹನ್ನ ವಿಠ್ಠಲ
ಸುಂದರ ಶ್ರೀ ಉರಗಾದ್ರಿವಾಸ ವಿಠ್ಠಲ
ಸಿರಿ ಉರಗಾದ್ರಿವಾಸ ವಿಠ್ಠಲ
ಇಂದಿರಾಪತಿ ತಂದೆ ವೆಂಕಟೇಶ ವಿಠ್ಠಲ 1
ಆನಂದಮಯ ಅಂತರಾತ್ಮವಿಠಲ
ನವನೀತ ಧರ ತಾಂಡವ ಕೃಷ್ಣ ವಿಠ್ಠಲ
ಜಯವೆಂದು ಪಾಡುವೆ ಜಯಾಪತಿ ವಿಠ್ಠಲ
ಸರಿಯುಂಟೆ ನಿನಗಿನ್ನು ಶಾಂತೀಶ ವಿಠ್ಠಲ2
ಗಂಗಾಜನಕ ಶ್ರೀ ಗಜವರದ ವಿಠ್ಠಲ
ಸಂಗರಹಿತ ಶೇಷಶಯನ ವಿಠ್ಠಲ
ಹಯವನೇರುತ ಪೊರೆದೆ ಶ್ರೀಹರಿ ವಿಠ್ಠಲ
ದಾನವೈರಿಯೆ ಧ್ರುವವರದ ವಿಠ್ಠಲ 3
ಗರುಡಗಮನ ಗುರುವಾಸುದೇವ ವಿಠ್ಠಲ
ವರವ ಪಾಲಿಸು ವರದ ಲಕ್ಷ್ಮೀಶ ವಿಠ್ಠಲ
ಪದ್ಮನಾಭನೆ ಕಾಯೊ ಪ್ರದ್ಯುಮ್ನ ವಿಠ್ಠಲ
ವರಲಕ್ಷ್ಮೀರಮಣ ವರದ ವೆಂಕಟೇಶ ವಿಠ್ಠಲ4
ಸಜ್ಜನಪಾಲ ಶ್ರೀ ಸುಜ್ಞಾನ ವಿಠ್ಠಲ
ಶಾಮಲಾಂಗನೆÀ ಕೃಷ್ಣ ಶ್ರೀನಾಥ ವಿಠ್ಠಲ
ಭಾರತೀಶ ಪ್ರಿಯ ವಿಠ್ಠಲ
ಪರಿಸರನೊಡೆಯ ಶ್ರೀವರಹ ವಿಠ್ಠಲ 5
ಜ್ಞಾನದಾಯಕ ಆನಂದಮಯ ವಿಠ್ಠಲ
ಸಜ್ಜನ ಪರಿಪಾಲ ಶ್ರೀ ಪ್ರಾಜ್ಞ ವಿಠ್ಠಲ
ಜಗವ ಮೋಹಿಪ ದೇವ ಜಗದ್ಭರಿತ ವಿಠ್ಠಲ
ವಿಶ್ವ ವ್ಯಾಪಕ ವಿಜ್ಞಾನಮಯ ವಿಠ್ಠಲ6
ವಿಷ್ಣುಮೂರುತಿ ಕೃಷ್ಣದ್ವೈಪಾಯನ ವಿಠ್ಠಲ
ಅಕ್ಷರೇಡ್ಯನೆ ಕಾಯೋ ಲಕ್ಷ್ಮೀಶ ವಿಠ್ಠಲ
ಕಂಟಕ ಹರಿಸು ಶ್ರೀವೆಂಕಟೇಶ ವಿಠ್ಠಲ
ಸಾರಿದೆ ಸಲಹೆನ್ನ ಶ್ರೀರಮಣ ವಿಠ್ಠಲ7
ದುರುಳರ ಮಡುಹಿದ ವರದ ವಿಠ್ಠಲ
ಅಂಬುಧಿ ಶಯನಪನ್ನಂಗ ಶಯನ ವಿಠ್ಠಲ
ದಾರಿ ತೋರಿಸೊ ದಾಮೋದರ ವಿಠ್ಠಲ
ಕರುಣಿಸಿ ಪೊರೆ ಎನ್ನ ಕಮಲನಾಭ ವಿಠ್ಠಲ8
ಕಂಜದಳಾಕ್ಷ ಕಮಲನಾಥ ವಿಠ್ಠಲ
ಮುರಮರ್ದನನೆ ಕಾಯೋ ಮುರಳೀಧರ ವಿಠ್ಠಲ
ದಯದಿಂದ ಪಾಲಿಸು ದಯಾನಿಧೆ ವಿಠ್ಠಲ
ಅಚ್ಚುತ ಹರಿ ಕೃಷ್ಣಕ್ಷೇತ್ರಜ್ಞವಿಠ್ಠಲ9
ಜ್ಞಾನಿಗಳರಸನೆ ಆನಂದ ವಿಠ್ಠಲ
ಮೂಜಗದೊಡೆಯ ಭಾರ್ಗವೀಶ ವಿಠ್ಠಲ
ಸರ್ವಕರ್ತೃ ಪುರುಷೋತ್ತಮ ವಿಠ್ಠಲ
ಮಧುವೈರಿ ಪೊರೆಮಧುರನಾಥ ವಿಠ್ಠಲ10
ರಾಕ್ಷಸವೈರಿ ರಮಾಧವ ವಿಠ್ಠಲ
ಕರುಣಿಗಳರಸನೆ ಕಾರುಣ್ಯ ವಿಠ್ಠಲ
ಎದುರ್ಯಾರೋ ನಿನಗಿನ್ನು ಯದುಪತಿ ವಿಠ್ಠಲ
ಉದ್ಧರಿಸೆನ್ನ ಉದ್ಧವವರದ ವಿಠ್ಠಲ11
ನಾಗಶಯನ ಕೃಷ್ಣಯೋಗೀಶ ವಿಠ್ಠಲ
ಕುಂಭಿಣಿಪತಿ ಶ್ರೀಶ ಸಿಂಧುಶಯನ ವಿಠ್ಠಲ
ಸುಜ್ಞಾನವೀವ ಪ್ರಾಜ್ಞಾನಿಧಿ ವಿಠ್ಠಲ
ಸಂಕಟಹರಿಸು ಸಂಕರ್ಷಣ ವಿಠ್ಠಲ12
ಗೋಪಿಕಾಲೋಲ ಗೋಪೀನಾಥ ವಿಠ್ಠಲ
ಪಾದ್ಯ ವೈಕುಂಠಪತಿ ವಿಠ್ಠಲ
ಮಾತರಿಶೃಪ್ರಿಯ ಶ್ರೀಕಾಂತ ವಿಠ್ಠಲ
ಧನ್ಯನಾದೆನೋ ದೇವ ಧನ್ವಂತ್ರಿ ವಿಠ್ಠಲ13
ಶ್ರೀಧರ ಪೊರೆ ವೇದವತೀಶ ವಿಠ್ಠಲ
ಸಾಧುಗಳರಸನೆ ಭಕ್ತವತ್ಸಲ
ಮೇದಿನಿಯೊಳು ನಿನ್ನ ಪೋಲುವರಿಲ್ಲ
ಆದರದಿಂ ಕೇಳೊ ನೀ ಎನ್ನ ಸೊಲ್ಲ14
ರನ್ನ ಮಂಟಪದೊಳು ಚಿನ್ನದ ತೊಟ್ಟಿಲು
ಕನ್ನೇರುತೂಗಿ ಪಾಡುವರೊ ಗೋವಿಂದ
ಕರುಣಸಾಗರ ಕೃಷ್ಣ ಮಲಗಿ ನಿದ್ರೆಯ ಮಾಡೊ
ಕಮಲನಾಭ ವಿಠ್ಠಲ ಪರಮದಯಾಳು 15