ಪಾಲಿಸು ನಮ್ಮಮ್ಮ ಮುದ್ದು ಶಾರದೆ ನಮ್ಮ
ನಾಲಿಗೆ ಯೊಳು ತಪ್ಪುಬಾರದೆ
ನೀಲ ಕುಂತಳೆ ತಾಯೀ ನಿನ್ನ ನಂಬಿದೆ ಕಾಯೆ ಪ
ಅಕ್ಷರಾಕ್ಷರ ವಿವೇಕಿಯೇ ನಿಮ್ಮ
ಕುಕ್ಷಿಯೊಳೀರೇಳು ಲೋಕವೆ
ಸಾಕ್ಷಾತ್ ಸ್ವರೂಪಿಣಿ ಮೋಕ್ಷದಾ
ಯಕಿಯೆ ತಾಯೆ ಪಾಲಿಸಮ್ಮಮ್ಮ 1
ಸರ್ವಾಲಂಕಾರ ಮೂರ್ತಿಯ ಚರಣ ಭಜಿ
ಸುವೆ ಕೀರ್ತಿಯ ಗುರುಮೂರ್ತಿ ಪರಮಾ
ನಂದದೊಳ್ ಪಾಲಿಸಮ್ಮಮ್ಮ 2
ಶೃಂಗಪುರದ ನೆಲೆವಾಸಿಯೆ ನಿಮ್ಮ
ಸಂಗೀತ ಶಾಸ್ತ್ರ ವಿಶಾಲಯ
ಭೃಂಗ ಕುಂತಳೆ ತಾಯೆ
ಭಳಿರೆ ಬ್ರಹ್ಮನರಾಣಿ ಪಾಲಿಸಮ್ಮಮ್ಮ 3