ಪನ್ನಗಾಚಲವಾಸ-ಪ್ರಪÀನ್ನರ ಪಾಲಕ ಶ್ರೀಶಾ-ಸರ್ವೇಶಾ
ಕನಕ ರತುನಮಯ ಮುಕುಟಾಧಾರ
ಘನ ನವಮಣಿಮಯ ಕುಂಡಲಧರ
ಇನಕೋಟಿಪ್ರಭಕೌಸ್ತುಭಹಾರ
ಮನಸಿಜಧನುಸಮ ಭ್ರೂಸಮಾಕಾರ
ಘನ ಚಂಪಕಗೆಣೆ ನಾಸ ಗಂಭೀರ
ವನಜದಳಾಯತೇಕ್ಷಣಾಕಾರ
ವನರುಹಾ ಘನ ಸ್ಮಿತ ಸುಗಂಭೀರ
ಮುನಿಮಾನಸಮಂದಿರ ಸುವಿಹಾರ
ಅಪ್ರಾಕೃತ ಶರೀರ
ತನುಮನ ವಚನದಿ ಅನವರತದಿ
ಕಿನ್ನರ ಸುರಮುನಿಗಣ
ತನುಸದನದಿ ಹೃದ್ವನಜದಿ ಘನಪದ
ವನರುಹ ಧೇನಿಸಿ ದೃಢಸ್ನೇಹದಿಂದಿರುವ
ಕರ್ಮ ಒಪ್ಪಿಸುವ
ಘನಮೋದದಿಂದಲಿರುವಾ ನುತಿಸುವಾ ಬೇಡುವಾ
ಜನುಮ ಸ್ಥಿತಿ ಮೃತಿಗೆ ಬೆದರದಿರುವಾ
ನಿನ್ನವರೊಳು ತನ್ನಿರವ ತೋರಿಸುಹ
ಘನ್ನಪಾತಕವ ಕಳೆದುನ್ನತ ಸಾಧನವನ್ನೆ ಕೊಟ್ಟು
ನನ್ನಿಯಿಂದಲೆ ಪೊರೆವಾ ತನ್ನಧಾಮದಿ ಕಾಪಿಡುವಾ 1
ಉತ್ತಮ ಮೌಕ್ತಿಕ ಸರಿಗೆ ನ್ಯಾವಳ
ಒತ್ತೊತ್ತಾಗಿಹ ತ್ರಿವಳಿಯ ಮಾಲಾ
ರತುನ ಪದಕದಾ ಸರದ ವಿಹಾರ
ಅತಿಮನೋಹರ ಹೃದಯ ವಿಶಾಲ
ಸಲೆಸಿರಿವತ್ಸ ವಕ್ಷದಿ ಲೋಲ
ಸುತ್ತಿದ ಭಾಪುರಿ ಭುಜದ ವಿಸ್ತಾರ
ಸಿತಾನಿಸಿತ ಉಪವೀತದಿ ಲೊಲ
ದಾತಾಪಿತ ತವನಾಭಿಯ ಕಮಲ
ಉತ್ತಮಕಮಲ ಕಲ್ಹಾರದ ಮಾಲ
ಹಸ್ತಾಭರಣದಿ ಮೆರೆಯುತ ಪೊತ್ತಿಹ
ಚಕ್ರಾಧ್ಯಾಯುಧನೆತ್ತಿ ದುರುಳೊನ್ಮತ್ತರ ಸದೆದು
ತ್ವದ್ಭಕ್ತರ ಮನೋರಥ ಪೂರ್ತಿಗೈವ
ಪುರುಷೋತ್ತಮ ಭವಭಯಹಾರೀ
ನಿತ್ಯನೂತನವಿಹಾರೀ-ಪ್ರಣವಸ್ತನೆ ನೀ ಕಂಸಾರೀ
ಪೃಥಕ್ ಪೃಥಕ್ ತದಾಕಾರೀ-ನರಹರೀ-ಶ್ರೀಹರೀ
ಹೃತ್ಪುಷ್ಕರದಳ ವಿಹಾರೀ
ಭಕ್ತವತ್ಸಲ ಅವ್ಯಕ್ತನೆ ಜಗದುತ್ಪತ್ತಿ ಸ್ಥಿತಿಲಯ
ಕರ್ತ ವ್ಯಾಪ್ತ ನಿರ್ಲಿಪ್ತ ಸತ್ಯಸು-
ಹೃತ್ತಮ ನೀನೆ ಮುರಾರೀ ಉತ್ತಮ ಸಮರಹಿತ ಶೌರೀ 2
ಪಕ್ಷಿಧ್ವಜ ಸುಖಭರಿತ ವಿಹಾರ
ಕುಕ್ಷಿಯೊಳು ಅಬ್ಜಾಂಡಕೋಟಿಗಾಧಾರ
ತ್ರಕ್ಷಾದ್ಯಮರನುತ ಗುಣಾಧಾರ
ಸಾಕ್ಷಿಮೂರುತಿ ಸರ್ವಕಾಲಾಧಾರ
ವಕ್ಷದೊಳು ಶ್ರೀವತ್ಸ ಗಂಭೀರಾ ಮು-
ಮುಕ್ಷುಗಳೊಡೆಯನೆ ವೈಕುಂಠಾಗಾರ
ಅಕ್ಷರಕ್ಷರರವಿಲಕ್ಷಣಧೀರ
ರಕ್ಷಕ ಭಕುತಜನರುದ್ಧಾರ
ದಕ್ಷಿಣಾಕ್ಷಿಕಂಠ ಹೃದಯವಿಹಾರ
ರಕ್ಷಕ ತ್ರಿಜಗದಾಧ್ಯಕ್ಷ ಕರುಣಕಟಾಕ್ಷದಿ ಈ ಜಗ
ವೃಕ್ಷದೊಳು ನಿರಪೇಕ್ಷನಾಗಿ ಫÀಲಭಕ್ಷಿಪ ಜೀವರ
ಲಕ್ಷಕೋಟಿ ನೀ ಸಾಕ್ಷಿಯಾಗಿಹೆ ನೀ ರಕ್ಷ ಕಮಲಾಕ್ಷ
ಪಕ್ಷಿವಾಹನನೆ ನಿನ್ನ ಪರೋಕ್ಷಾಪೇಕ್ಷಿಗಳಿಗೆ ನಿನ್ನ ಕ-
ಟಾಕ್ಷವೀಕ್ಷಣದಿಂದ ಪ್ರತ್ಯಕ್ಷ ರಿಪುಶಿಕ್ಷ ಅಧ್ಯಕ್ಷ
ಸಾಕ್ಷಿಯಾಗಿಹೆ ನೀ ರಕ್ಷಾ ಮೋಕ್ಷ ಜೀವರಿಗಪರೋಕ್ಷವನಿತ್ತು ನಿ-
ಷ್ಪಕ್ಷನಾಗಿ ಜಗರಕ್ಷಿಸುತ್ತ ಸುರಪ ದಕ್ಷ ಚತು-
ರಾಕ್ಷರಸ್ಥ-ನರಹರ್ಯಕ್ಷ ಶರಣಜನರ ಕಲ್ಪವೃಕ್ಷ3
ಪಟುತರಾಂಗ ಸುಕಟಿಯ ವಿಸ್ತಾರ
ತೊಟ್ಟಿಹÀರತುನದ ಪಟ್ಟವಿಹಾರ
ಉಟ್ಟಿಹ ಪಟ್ಟೆ ಪೀತಾಂಬರ ಧಾರಾ
ಬಟ್ಟ ಜಾನುದ್ವಯ ಜಂಘಾಶೂರ
ಇಟ್ಟಿಹ ಸಾಲಿಗ್ರಾಮದ ಹಾರ
ದಟ್ಟವಾಗಿಹ ಕಾಲಂದಿಗೆಯ ವಿಹಾರ
ಇಟ್ಟಿಹ ಬೆರಳಲಿ ರತ್ನದುಂಗುರ
ಶ್ರೇಷ್ಟಪದದಿ ಧ್ವಜಚಿಹ್ನಾಕಾರ
ದಿಟ್ಟಿ ನಖಾಗ್ರದಿ ತಟಿತ ಪ್ರಭಾಕರ
ಪಟುತರ ಕರಪಾದ ಚಟುಲರೂಪ ಮನ-
ತಟದಿ ಇಟ್ಟು ಲವತೃಟಿಯು ಬಿಡದೆ ಸುರ-
ನಿತ್ಯ ಕರಪುಟದಿ ನಮಿಸಿ ಉತ್ಕಟದಿ ಗುಣಗಳ
ಪಠಣದಿಂದಿರೆ ಮುದದಿ ಪಟುತರ ಭಕುತಿಯ ಭರದೀ
ನಟಿಸುತ ತನು ಮರೆದಾತುರದಿ ಉ-
ತ್ಕಟದಲಿ ನುತಿಸುತ ಭರದೀ
ನಟಿಸುವಾ ಸ್ಮರಿಸುವಾ ಭಕುತಜನರ ಕಂಟಕವಾ ಆ
ಧಿಟರು ನೀತ ಭಟರಂದು ನಿಜ ಜಠರಾಲಯದಿ ಇಂ-
ಬಿಟ್ಟು ಭಕುತರ ಕಟಕಪೊರೆದು ಭವಾಬ್ಧಿಯ
ಕಂಟಕ ಜಗಶಿಕ್ಷಾ 4
ಸ್ವಗತಭೇದವಿವರ್ಜಿತಶೂನ್ಯ
ನಿಗಮಾತೀತ ದೇವವರೇಣ್ಯ
ಬಗೆಬಗೆ ಸ್ವರ ಶಬ್ದವಾಚ್ಯವರೇಣ್ಯ
ಅಗಣಿತಗುಣಗಣಪೂರ್ಣ ಸಂಪೂರ್ಣ
ಯೋಗಿಗಳ್ ಪೊಗಳುವ ಸವಿತೃವರೇಣ್ಯ
ಬಗೆಗಾಣರೊ ಸಾಕಲ್ಯದಿ ನಿನ್ನ
ತ್ರಿಗುಣ ವಿರಹಿತನಾಗಿಹನ್ನ
ನಗಜಾಧವ ಪಿಕನುತಪಾವನ್ನ
ದುರ್ಗಾ ಶ್ರೀ ಭೂದೇವಿಯರಮಣ
ಯುಗ ಯುಗದೊಳು ಜಗಕಾರ್ಯದಿ ಧರ್ಮ ಪ್ರಘಟ-
ನೆಗೋಸುಗ ಸ್ವಗತರೂಪ ತಾ ನೆರಹಿ ಕ್ರೂರ ಪಾ-
ಪೌಘರ ಮಡುಹಿ ಜಗದೇಕ ವೀರ ಮಿಗೆ ಜನಿಸಿದೆ ಜಗದೀಶಾ
ಸುಗುಣ ಸಾಕಾರ ಸರ್ವೋತ್ತಮ ಶ್ರೀಶಾ
ಜಗಜ್ಜಾಲ ಲೀಲಾವಿಲಾಸ ಜಗವೆಲ್ಲಾ ಈಶಾವಾಸ್ಯ
ಸೃಜಿಸಿ ನೆಲೆಸೀ ಸ್ವಪ್ರಯೋಜನ ರಹಿತನೆನಿಸೀ
ಖಗವರೂಥÀ ಶ್ರೀ ವೇಂಕಟೇಶ ಪನ್ನಗಗಿರಿಯೊಳು ನೆಲೆಸಿ
ಜೀವರ ಯೋಗ್ಯಸಾಧನೆ ಇತ್ತು ಮನೋಭೀ-ಷ್ಟವನ್ನೆ ಸಲಿಸಿ ಉರಗಾದ್ರಿವಾಸವಿಠಲನೆನಿಸೀ 5