ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕ್ಷವಿದ್ಯಾನಿಪುಣ ಅಕ್ಷಯಾತ್ಮಕ ಸುಗುಣ ಅಕ್ಷಯತರ ಸುವಚನ ಲಸಿತವದನ ದ್ಯೂತೋದ್ಯೋಗತರ ಖ್ಯಾತ ಸುಗುಣೋಪೇತ ದೈತ್ಯ ಸಂಕುಲಘಾತ ಪ್ರಾಣನಾಥ ಸುರಸಿದ್ಧ ಸಂಪ್ರೀತ ಮಾರತಾತ ಗೋಪಾಲ ಕುಲರತ್ನದೀಪ ಗೋಕುಲ ಶರಣ ಗೋಪಿಕಾಜನಮನದ ತಾಪಶಮನ ಲೀಲಾ ವಿಭೂತಿಯುಗನಿರತ ಸುಹಿತ ನೀಲಾಂಬರಾವರಜ ರಾಜರಾಜ ಕಾಲಾಂಬುದಾಕಾರ ಖಲಕುಠಾರ ಪಾಹಿಮಾಂ ಶ್ರೀಶೇಷಗಿರಿವಿವಿಭಾಕ್ಷ
--------------
ನಂಜನಗೂಡು ತಿರುಮಲಾಂಬಾ
ಮಂಗಳಾರತಿಯೆತ್ತಿ ಪಾಡಿರೆ ರಂಗನಾಥನ ನೋಡಿರೇ ಪ. ಅಂಗನಾಮಣಿಯನ್ನು ಸಲಹಿದ ಪಾಂಡುರಂಗನ ಭಜಿಸಿರೆ ಅ.ಪ. ನೆರೆದಸಭೆಯೊಳು ಸೆರಗನೆಳೆಯಲು ತರಳೆಭೀತಿಯ ತಾಳಲು ದುರುಳನೆರಿಗೆಯ ಸೆಳೆಯಲು ಶರಣು ನೀನೇ ವರದನೆನ್ನಲು ವರವನಿತ್ತಗೆ ಭರದೊಳು ಕರಣವಾರ್ಧಿಗೆ ಮುದದೊಳು 1 ಅಕ್ಷಯಾತ್ಮಕ ರಕ್ಷಿಸೈ ಶ್ರೀವತ್ಸ ದೀನಳ ಮಾನಮಂ ಕಮ ಲಾಕ್ಷ ಬೇಡುವೆ ದೈನ್ಯದಿಂ ರಕ್ಷನೀನೆನೆ ಚಪಲಾಕ್ಷಿ ಆಕ್ಷಣಂ ರಕ್ಷಿಸಿದೈ ಕರುಣದಿಂ ಅಕ್ಷಯಪ್ರದಾನದಿಂ 2 ನಿತ್ಯನಿರ್ಮಲ ನಿರ್ವಿಕಲ್ಪ ನಿತ್ಯತೃಪ್ತನ ಭಜಿಸಿರೆ ಭಕ್ತ್ಯಧೀನನ ಬೇಡಿರೆ ಸತ್ಯವಿಕ್ರಮ ಶೇಷಶೈಲ ನಿಕೇತಗೆ ಜಯವೆನ್ನಿರೇ ಚಿತ್ತಶುದ್ಧಿಯ ಪಡೆಯಿರೇ 3
--------------
ನಂಜನಗೂಡು ತಿರುಮಲಾಂಬಾ